فه ಅಬಲಾ ಸಚ್ಚರಿತ್ರ ರತ್ನ ಮಾಲೆ. ವನವನ್ನು ಪ್ರವೇಶಿಸಿದಳು, ಅಲ್ಲಿನ ಪ್ರಜೆಗಳು ಈಕೆಯನ್ನು ನೋಡಿ ಪ್ರಮಥ ಗಣ ಸಹಿತಳಾಗಿ ಸಾಕ್ಷಾತ್ ಪಾರ್ವತಿಯೇ ಇಲ್ಲಿಗೆ ಬಂದಳು ಎಂದು ಎಣಿಸಿದ ರಂತೆ ! ಆಕೆಯು ಆ ಊರಿನಲ್ಲಿ ಜೀವಗೋಸಾಯಿ ಎಂಬ ಒಬ್ಬ ಪರಮ ಸಾಧುವು ಇರುವನು ಎಂದು ಕೇಳಿದಳು. ಜ್ಞಾನಿಯೂ, ಪರಮಭಕ್ತನೂ ಆದ ಆ ಗೋಸಾಯಿಯು ತನ್ನ ಶಿಷ್ಯರಿಗೆ, “ ನೀವು ಜ್ಞಾನಿಗಳಾಗಲೆಣಿಸಿದರೆ ಧನವನ್ನೂ, ಸ್ತ್ರೀಯನ್ನೂ ತ್ಯಜಿಸಬೇಕಲ್ಲದೆ, ಅವರನ್ನು ಕಣ್ಣಿನಿಂದಲೂ .ನೋಡಬಾರದು, ? ಎಂದು ಬೋಧಿಸುತಲಿದನು. ಆತನುಸಹ ಶ್ರೀಮುಖವನ್ನು ನೋಡುವುದಿಲ್ಲ ಎಂದು ವ್ರತವನ್ನು ಹಿಡಿದಿದ್ದನು. ಆತನ ವಿಷಯವೆಲ್ಲವನ್ನೂ ಕೇಳಿ ಮಾರಾ ಬಾಯಿಯು, “ ಬೃಂದಾವನದಲ್ಲಿ ಶ್ರೀಕೃಷ್ಣನೊಬ್ಬನೇ ಪುರುಷನೆಂತಲೂ, ಅನನ್ಯ ಭಕ್ತಿಯಿಂದ ಪತಿಯನ್ನು ಸೇವಿಸುವ ಪತ್ನಿಯಂತೆ, ಭಕ್ತರೆಲ್ಲರೂ ಆತನನ್ನು ಸೇವಿಸುವವರಾದುದರಿಂದ ಅಂತಹ ಭಕ್ತರಲ್ಲಿ ಪುರುಷರಾದವರೂ ಸ್ತ್ರೀಯರೇ ಎಂತಲೂ ನಾನು ಹೇಳುತ್ತೇನೆ, ಭಕ್ತರೆಲ್ಲರೂ ಸಮಾನರಾಗಿರುವಾಗ ನಾವು ಪುರುಷರೆಂದು ಗರ್ವಿಸುವುದು ಹಾಸ್ಯಾಸ್ಪದವು ನಿಮಗೆ ಪುರುಷರು ಎಂಬ ಗರ್ವವು ಇದ್ದರೆ ನೀವು ಭಕ್ತರಾಗಲಾರಿರಿ, ನೀವು ಸತ್ಯವಾದ ಭಕ್ತರಾದ ಪಕ್ಷಕ್ಕೆ ಭಕ್ತರಾದ ಸ್ತ್ರೀಯರನ್ನು ನೋಡಲು ಅಭ್ಯಂತರವೇನು ? ಎಂದು ಆ ಸಾಧುವಿಗೆ ಹೇಳಿಕಳುಹಿ ದಳು, ಉಪದೇಶ ಸದೃಶಗಳಾದ ಈ ಮಾತುಗಳನ್ನು ಕೇಳಿ ಜೀವಗೋಸಾಯಿಯು ಜ್ಞಾನವನ್ನು ತಂದುಕೊಂಡು, ತನ್ನ ವ್ರತವನ್ನು ಬಿಟ್ಟು ಮಾರಾಬಾಯಿಯ ಸಮಕ್ಷಮಕ್ಕೆ ಬಂದು ಸಾಷ್ಟಾಂಗ ನಮಸ್ಕಾರವನ್ನು ಮಾಡಿದನು. ಅಂದಿನಿಂದ ಈತನು ತನಗೆ ತಿಳಿಯದ ವಿಷಯಗಳನ್ನು ಮಾರಾಬಾಯಿಯನ್ನು ಕೇಳಿ ತಿಳಿದು ಕೊಳ್ಳುತಲಿದ್ದನು. ಆಕೆಯು ತಾನು ಜೀವಗೋಸಾಯಿಯ ಶಿಷ್ಯಳು ಎಂದು ಹೇಳಿಕೊಳ್ಳು ತಲಿದ್ದರೂ, ಜನರು ಮಾತ್ರ ಜೀವಗೋಸಾಯಿಯೇ ಮಾರಾ ಬಾಯಿಯ ಶಿಷ್ಯನು ಎನ್ನುತಲಿದ್ದರು. ಮಾರಾಬಾಯಿಯು ಬೃಂದಾವನದಲ್ಲಿ ಶ್ರೀಕೃಷ್ಣಾಲಯದಲ್ಲಿಯೇ ವಾಸಮಾಡುತ್ತ, ದೇವರ ಮೇಲೆ ಅನೇಕ ಕೀರ್ತನೆ ಗಳನ್ನು ರಚಿಸಿ ಪಾಡುತಲಿದ್ದಳು. ಭಕ್ತಿರಸ ಪೂರ್ಣವಾದ ಆ ಕೀರ್ತನೆಗಳನ್ನು ಕೇಳುವುದಕ್ಕಾಗಿ ದೇಶದೇಶಗಳಿಂದ ಜನರು ಯಾತ್ರೆಗೆ ಬರುವಂತೆ ಬರುತಲಿದ್ದರು. ಹೀಗೆ ಕೆಲವುಕಾಲ ಕಳೆಯಲು ಆಕೆಯ ಕೀರ್ತಿಯು ಹಿಂದೂಸ್ಥಾನದಲ್ಲೆಲ್ಲ ಹರಡಿಕೊಂಡಿತು. ಎಂದ ಮೇಲೆ ಉದಯಪುರದಲ್ಲಿಯೂ ಆಕೆಯ ಕೀರ್ತಿಯು ವ್ಯಾಪಿಸಿತು ಎಂದು ಬೇರೆಯಾಗಿ ಹೇಳಬೇಕೆ ? ಕುಂಭರಾಣಾಸ್ವಗ್ರಾಮ ದಲ್ಲಿ ಎಲ್ಲಿಗೆ ಹೋದರೂ, ತನ್ನ ಭಾರ್ಯೆಯು ರಚಿಸಿದ ಪದ್ಯಗಳನ್ನೂ, ಕೀರ್ತನೆಗಳನ್ನೂ ಪ್ರತಿಯೊಬ್ಬ ಮನುಜನ ಬಾಯಿಯಿಂದಲೂ ಕೇಳುತಲಿದ್ದನು. ಆ ಬಾಲವೃದ್ದರೂ ಆಕೆಯನ್ನು ದೇವರು ಎಂದೆಣಿಸಿ ಭಜಿಸುತ್ತಲಿದ್ದರು, ಮತ್ತು ನಿರ್ದೋಷಿಯಾದ ಪತ್ನಿಯನ್ನು ಗೃಹದಿಂದ ಹೊರಡಿಸಿದನು ಎಂದು ರಾಣಾ
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೮೭
ಗೋಚರ