ಜಬ G& ಅಬಲಾ ಸಚ್ಚರಿತ್ರ ರತ್ನ ಮಾಲೆ. ಜಯಚಂದ್ರನಿಗೆ ಸಂಯುಕ್ತಯು ಒಬ್ಬಳೇ ಮಗಳು, ಅದರಿಂದ ಆತನು ಮಗಳನ್ನು ಬಹು ಮುದ್ದಿನಿಂದ ಸಲಹುತಲಿದ್ದನು. ಸಂಯುಕ್ತ ಯು ಸತ್ತ್ವಭಾವ ವುಳ್ಳವಳಾದುದರಿಂದ ಬೆಳೆದ ಹಾಗೆಲ್ಲ ಸುಗುಣಗಳನ್ನೂ, ಸದ್ವಿದ್ಯೆಯನ್ನೂ ಕಲಿತು ವಿಖ್ಯಾತಳಾದಳು. ಆಕೆಯ ಗುಣರೂಪಗಳನ್ನು ನೋಡಿದವರು ತಮ್ಮ ಜನ್ಮವು ಸಾರ್ಥಕವಾಯಿತು ಎಂದು ತಿಳಿಯುತಲಿದ್ದರು. ಹೀಗೆ ಕೆಲಕಾಲ ಕಳೆಯಲು ಸಂಯುಕೆಯು ಯೌವನವನ್ನು ಧರಿಸಿದಳು. ಜಯಚಂದ್ರನು ವಿವಾಹಯೋಗೈಯಾದ ತನ್ನ ತನಯೆಗೆ ತಕ್ಕ ವರನು ಎಲ್ಲಿ ದೊರೆಯವನೋ ಎಂದು ಚಿಂತಿಸುತಲಿದ್ದನು. ಸಂಯುಕ್ಕೆಯ ರೂಪ ಲಾವಣ್ಯಗಳು ದೇಶದೇಶದಲ್ಲಿಯೂ ಹರಡಿಕೊಂಡುದುದರಿಂದ ಅನೇಕ ರಾಜ ಪುತ್ರರು ಆಕೆಯನ್ನು ತಮಗೆ ಕೊಡಬೇಕು ಎಂದು ಹೇಳಿ ಕಳುಹುತಲಿದ್ದರು. ಡಿಲೀಶ್ವರ ನಾದ ಸೃಥಿವೀರಾಜನು ಆಕೆಯನ್ನು ವಿವಾಹಮಾಡಿಕೊಳ್ಳಲೆಣಿಸಿದ್ದನು, ಮತ್ತು ಸಂಯುಕೆಯೂ ಆತನ ಪರಾಕ್ರಮವನ್ನು ಕೇಳಿದ್ದು ದರಿಂದಲೂ, ಆತನನ್ನು ನೋಡಿದ್ದುದರಿಂದಲೂ ಆತನನ್ನು ವಿನಾ ಮತ್ತೆ ಯಾರನ್ನೂ ವರಿಸುವುದಿಲ್ಲ ಎಂದು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡಿದ್ದಳು. ಜಯಚಂದ್ರನು ಸ್ವಯಂವರವನ್ನು ಮಾಡಿ ದರೆ ಪುತ್ರಿಗೆ ತಕ್ಕ ವರನು ದೊರೆಯುವನೋ ಇಲ್ಲವೋ ಎಂದು ಎಣಿಸಿದನು. ಆತನು ಪುತ್ರಿಯ ಮದುವೆಗೆ ಪೂರ್ವದಲ್ಲಿ ರಾಜಸೂಯನೆಂಬ ಯಾಗವನ್ನು ಮಾಡಲು ನಿಶ್ಚಯಿಸಿ ಸಕಲದಿಕ್ಕಿನ ರಾಜರಿಗೂ ವರ್ತಮಾನವನ್ನು ಕಳುಹಿಸಿ ದನು. ಜಯಚಂದ್ರನು ಪರಾಕ್ರಮಶಾಲಿಯಾದುದರಿಂದ ರಾಜರೆಲ್ಲರೂ ಕನೂಜ್ ನಗರಕ್ಕೆ ಬಂದರು. ಸೃಥಿವೀರಾಜನು ಮಾತ್ರ ಜಯಚಂದ್ರನಲ್ಲಿರುವ ಪೂರ್ವವೈರವನ್ನು ಮನಸ್ಸಿನಲ್ಲಿಟ್ಟು ಯಾಗಕ್ಕೆ ಬರಲಿಲ್ಲ. ಅದರಿಂದ ಜಯ ಚಂದ್ರನು ಆಗ್ರಹಯುಕ್ತನಾಗಿ, ಪೃಥಿವೀರಾಜನ ಪ್ರತಿಮೆಯೊಂದನ್ನು ಮಾಡಿಸಿ, ಆ ಪ್ರತಿಮೆಯನ್ನು ದ್ವಾರಪಾಲಕನ ಸ್ಥಳದಲ್ಲಿಟ್ಟು ತನ್ನ ಹಗೆಯನ್ನು ತೀರಿಸಿ ಕೊಂಡನು. ಯಜ್ಞವು ವಿಧಿಪ್ರಕಾರವಾಗಿ ನಡೆದ ಅನಂತರ ಸ್ವಯಂವರ ಮಹೋತ್ಸವವು ಪ್ರಾರಂಭವಾಯಿತು. ಆಗ ಅನೇಕ ದೇಶಾಧೀಶರಿಂದ ಕೂಡಿದ ಕನ್ಯಾಕುಬ್ಬನಗರವು ಅತಿರಮಣೀಯವಾಗಿ ಕಾಣಬರುತಲಿತ್ತು. ರಾಜಾಜ್ಞೆಯಂತೆ ಮಂತ್ರಿಗಳು ಮಂಟಪವನ್ನು ಅಲಂಕರಿಸಿ, ರಾಜರೆಲ್ಲರನ್ನೂ ಅವರವರಿಗೆ ತಕ್ಕ ಸ್ಥಾನದಲ್ಲಿ ಕುಳ್ಳಿರಿಸಿದರು. ಅನಂತರ ಸಂಯುಕ್ತಿಯು ಅಲಂಕೃತಳಾಗಿ, ಹಸ್ತದಲ್ಲಿ ಪುಷ್ಪಹಾರವನ್ನು ಧರಿಸಿ, ಸಖೀಸಹಿತಳಾಗಿ ಮಂಟಪ ತನ್ನು ಪ್ರವೇಶಿಸಿದಳು. ರಾಜಕನೆಯು ಸಭೆಯನ್ನು ಪ್ರವೇಶಿಸಿದೊಡನೆಯ ರಾಜಲೋಕದ ದೃಷ್ಟಿಯೆಲ್ಲ ಆಕೆಯ 'ಕಡೆಗೆ ತಿರುಗಿತು. ಪ್ರತಿಯೊಬ್ಬ ಭೂಪತಿಯೂ ಆಕೆಯು ತನ್ನನ್ನೇ ವರಿಸಬೇಕು ಎಂದು ಅಪೇಕ್ಷಿಸುತಲಿದ್ದನು.
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೮೯
ಗೋಚರ