ರಾಣೀ ಸ೦ಯುಕ್ತ. ೧೬ ಸ್ವಲ್ಪ ಹೊತ್ತು ಯೋಚಿಸಲು, ಸಂಯುಕೆಯು ಡಿಲ್ಲಿಗೆ ಹೋಗುವುದು ಯುಕ್ತವಾದ ಕಾರ್ಯವೆಂದು ತೋರಿತು, ಸಂಯುಕ್ತ ಯು ಪ್ರಯಾಣಸನ್ನದ್ದಳಾಗಿ ಹೊರ ಡುವ ಸಮಯದಲ್ಲಿ ಪತಿಗೆ ನಮಸ್ಕರಿಸಿ, ಪ್ರಾಣೇಶ್ವರಾ ! ತಾವು ಕ್ಷತ್ರಿಯ ರಾದುದರಿಂದ ತಮ್ಮ ಶಸ್ತ್ರಾಸ್ತ್ರಗಳನ್ನು ಕಾಪಾಡಿಕೊಂಡು ಯುದ್ಧಕ್ಕೆ ಸಿದ್ದರಾಗ ಬೇಕು, ಕ್ಷತ್ರಿಯರು ತಮ್ಮ ದೇಶದ ಮತ್ತು ವಂಶದ ಕೀರ್ತಿಯನ್ನು ಕಾಪಾಡು ವುದಕ್ಕಾಗಿ ಪ್ರಾಣವನ್ನು ತ್ಯಜಿಸಿದರೂ ಅದು ಮೃತಿ ಎನಿಸಲಾರದು. ಮನುಜನು ಜನ್ನಿಸಿದುದಕ್ಕೆ ಸತೃತ್ಯಗಳನ್ನು ಮಾಡಿ, ಸತೀರ್ತಿಯನ್ನು ಪಡೆದು ಅಮರನಾಗ ಬೇಕು, ನಮಗೆ ಜಯವುಂಟಾದರೆ ನಾವು ಇಬ್ಬರೂ ಇಹಸೌಖ್ಯವನ್ನು ಅನು ಭವಿಸುವೆವು, ಇಲ್ಲದಿದ್ದರೆ ನಾನು ತಮ್ಮೊಡನೆ ಸ್ವರ್ಗ ಸುಖವನ್ನು ಅನುಭವಿಸಲು ಶೀಘ್ರವಾಗಿಯೇ ಬರುವೆನು. ” ಎಂದು ಧೀರೋಕ್ಕಿಗಳನ್ನು ನುಡಿದಳು. ಆಗ ಪೃಥಿವೀರಾಜನು ಪತ್ನಿಯನ್ನಾಲ೦ಗಿಸಿಕೊಂಡು, “ ಸತೀಮಣೀ ! ನನ್ನ ಶರೀರದಲ್ಲಿ ಪ್ರಾಣವು ಇರುವವರೆಗೂ ನಾನು ಶತ್ರುವಿಗೆ ಬೆನ್ನು ತೋರುವುದಿಲ್ಲವೆಂದು ನಂಬು. ನನ್ನ ಸೈನಿಕರು ಕೀರ್ತಿಯನ್ನು ಅಪೇಕ್ಷಿಸುವವರಾದ್ದರಿಂದ ಅವರು ಪರಾಜಯ ವನ್ನು ಹೊಂದಿ ತಮ್ಮ ಮುಖವನ್ನು ಅನ್ಯರಿಗೆ ತೋರಿಸಲಾರರೆಂದು ನಾನು ನಂಬಿ ದೇನೆ.” ಎಂದು ಹೇಳಿದನು. ಅನಂತರ ಸಂಯುಕೆಯು, “ ಸ್ವಾಮಿಾ! ಡಿಲ್ಲಿ ನಗರದ ಸ್ತ್ರೀಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅಸಮರ್ಥರಾದುದರಿಂದ, ಈಗ ನಾನು ಅಲ್ಲಿಗೆ ಹೋಗಿ ಅವರಿಗೆ ಧೈರ್ಯವನ್ನು ಹೇಳುವೆನು. ನಾನು ಇಲ್ಲಿದ್ದರೆ ಅಧೈರ್ಯದಿಂದ ಅವರೆಲ್ಲರಿಗೂ ದಿಕ್ಕು ತೋರದು. ಯಾವವಿಷಯವು ಹೇಗಿದ್ದರೂ ಆ ಯವನನು ನಿಮ್ಮನ್ನು ಗೆದ್ದು ಇಲ್ಲಿಗೆ ಬಂದರೆ, ಅವನಿಗೆ ರಾಜ ಪುತ್ರರಮಣಿಯು ಒಬ್ಬಳಾದರೂ ಜೀವಸಹಿತ ದೊರೆಯುವುದು ದುರ್ಲಭ.” ಎಂದು ಡಿಲ್ಲಿಗೆ ಹೋದಳು. ಅಲ್ಲಿ ಆಕೆಯು ಪತಿಗೆ ವಿಜಯವು ಉಂಟಾಗ ಬೇಕೆಂದು ಬಹು ನಿಯಮದಿಂದ ಈಶ್ವರನನ್ನು ಪ್ರಾರ್ಥಿಸುತಲಿದ್ದಳು. ಆಕೆಯ ಉಪದೇಶವನ್ನು ಕೇಳಿ ಆ ನಗರದ ಸ್ತ್ರೀಯರೆಲ್ಲರೂ ಡಿಲೀಶ್ವರನಿಗೆ ಜಯವುಂಟಾಗ ಬೇಕೆಂದು ಪ್ರಾರ್ಥಿಸುತಲಿದ್ದರು. ಇಲ್ಲಿ ಉಭಯ ಸೈನ್ಯಗಳಿಗೂ ಯುದ್ಧವು ಪ್ರಾರಂಭವಾಯಿತು. ಎರಡು ಕಡೆಯ ವೀರರೂ ತಮ್ಮ ಶಕ್ತಿಯನ್ನು ಮಾರಿದ ಸಂಗ್ರಾಮಕೌಶಲವನ್ನು ತೋರಿ ಸುತ್ತ ಹೋರಾಡುತಲಿದ್ದರು. ಯುದ್ಧವು ಪ್ರಾರಂಭವಾದಒಡನೆಯೇ ಧೂಳಿ ನಿಂದ ಆಕಾಶವು ಮುಚ್ಚಿ ಹೋಯಿತು.. ಸ್ವಲ್ಪ ಯುದ್ಧವು ನಡೆದ ಅನಂತರ ರಕ್ತ ಪ್ರವಾಹದಲ್ಲಿ ಧೂಳು ಅಡಗಿಹೋಯಿತು. ಶವಗಳು ರಾಶಿರಾಶಿಗಳಾಗಿ ಬಿದ್ದವು. ಕೊನೆಗೆ ಸೃಥಿವೀರಾಜನಿಗೆ ಅಪಜಯವುಂಟಾಯಿತು. ಆತನ ಭಟರಲ್ಲಿ ಒಬ್ಬ ರಾದರೂ ಹಿಮ್ಮೆಟ್ಟದಂತೆಯೂ, ಶತ್ರುಗಳಿಗೆ ಶರಣುಹೊಕ್ಕಂತೆಯೂ ಕಾಣ ಬರಲಿಲ್ಲ. ಕೆಲವರು ಸೃಥಿವೀರಾಜನು ಯುದ್ದದಲ್ಲಿ ಯೇ ಮಡಿದನೆಂದು ಹೇಳು 13
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೯೪
ಗೋಚರ