ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭o ಅಬಲಾ ಸಚ್ಚರಿತ್ರ ರತ್ನ ಮಾಲೆ. ತಾರೆ, ಘೋರಿಯು ವಿಜಯವನ್ನು ಹೊಂದಿ, ಪೃಥಿವೀರಾಜನನ್ನು ಸೆರೆಹಿಡಿದು ಕಣ್ಣುಗಳನ್ನು ಕೀಳಿಸಿ, ಭಾರವಾದ ಲೋಹಶೃಂಖಲಗಳನ್ನು ಹಾಕಿ, ಕಾರಾಗೃಹ ದಲ್ಲಿ ಇಟ್ಟನೆಂತಲೂ ಈ ವಿಷಯವೆಲ್ಲವನ್ನೂ ಸೃಥಿವೀರಾಜನ ಮಂತ್ರಿಯೂ, ಆತನ ಚರಿತ್ರಲೇಖಕನೂ ಆದ ಚಾಂದಭಟ್ಟನೆಂಬವನು ಕೇಳಿ, ಘೋರಿಯ ಆಸ್ಥಾನಕ್ಕೆ ಹೋಗಿ ಅಲ್ಲಿ ಕೆಲವು ದಿವಸಗಳಿದ್ದು, ಆತನ ಕೃಪೆಯನ್ನು ಹೊಂದಿ ಆತನ ಅನುಜ್ಞೆಯಂತೆ ಕಾರಾಗೃಹಕ್ಕೆ ಹೋಗಿ ಪೃಥಿವೀರಾಜನನ್ನು ಮಾತನಾಡಿ ಸಲು ಕಣ್ಣುಗಳು ಇಲ್ಲದಿದ್ದರೂ ಮಾತನ್ನು ಗುರ್ತಿಸಿ ಸೃಥಿವೀರಾಜನು ಭಟ್ಟನನ್ನು ಆಲಿಂಗಿಸಿಕೊಂಡನೆಂತಲೂ ಬಳಿಕ ಅಲ್ಲಿ ಅವರಿಬ್ಬರೂ ಒಂದು ಯುಕ್ತಿಯನ್ನು ಆಲೋಚಿಸಿ ಅದರಂತೆ ಚಾಂದಭಟ್ಟನು ಘೋರಿಯೊಡನೆ ಮಾತನಾಡುತ್ತ ಪ್ರಸಂಗ ರೀತ್ಯಾ ಪೃಥಿವೀರಾಜನ ಬಾಣನೈಪುಣ್ಯವನ್ನು ಕುರಿತು ಹೇಳುತ್ತ, ಆತನಿಗೆ ಕಣ್ಣುಗಳು ಇಲ್ಲದಿದ್ದರೂ ಶಬ್ದವನ್ನು ಆಲಿಸಿ, ಶಬ್ದವು ಬಂದ ಸ್ಥಳಕ್ಕೆ ಸರಿಯಾಗಿ ಬಾಣವನ್ನು ಹಾಕಬಲ್ಲನೆಂದು ಹೇಳಿದನೆಂತಲೂ, ಘೋರಿಯು ಆ ವಿಚಿತ್ರವನ್ನು ನೋಡಲಪೇಕ್ಷಿಸಿ ಒಂದು ಸಭೆಯನ್ನು ಮಾಡಿ, ಆ ಸಭೆಗೆ ಸೃಥಿವೀರಾಜನನ್ನು ಕರೆಸಿ ಆತನ ಕೈಗೆ ಬಿಲ್ಲನ್ನೂ, ಅಂಬನ್ನೂ ಕೊಟ್ಟು, “ ಯಾವುದಾದರೂ ಒಂದು `ಚಮತ್ಕಾರವನ್ನು ತೋರಿಸು,' ಎಂದು ಆಜ್ಞಾಪಿಸಿದ ಮಾತನ್ನಾಲಿಸಿ, ಪೃಥಿವೀ ರಾಜನು ಘೋರಿಯ ಮೇಲೆ ಬಾಣವನ್ನು ಹಾಕಲು ಆತನು ಸತ್ತನು ಎಂತಲೂ, ಆಮೇಲೆ ಸೃಥಿವೀರಾಜನೂ, ಚಾಂದಭಟ್ಟನೂ ಒಬ್ಬರನ್ನೊಬ್ಬರು ತಿವಿದುಕೊಂಡು ತುರುಷ್ಕರ ಕೈಗೆ ಸಿಕ್ಕದೆ ಆ ಸಭೆಯಲ್ಲಿಯೇ ಮೃತರಾದರೆಂತಲೂ ಕೆಲವರು ಹೇಳು ತ್ತಾರೆ. ಈ ಶರಸಂಧಾನ ಮಹೋತ್ಸವವು ನಮ್ಮ ದೇಶದಲ್ಲಿ ನಡೆಯಿತೆಂದು ಕೆಲವರೂ, ಇನ್ನು ಕೆಲವರು ಮೈಚ ದೇಶದಲ್ಲಿ ನಡೆಯಿತೆಂತಲೂ ಹೇಳುತ್ತಾರೆ. ಇವುಗಳಲ್ಲಿ ಯಾವುದು ಸತ್ಯವೋ ಯಾವುದು ಅಸತ್ಯವೋ ತಿಳಿಯದು. ಘೋರಿಗೆ ಜಯವು ಉಂಟಾಗಿ ಅವನು ಡಿಲ್ಲಿಗೆ ಬರುವನು ಎಂಬ ವರ್ತ ಮಾನವನ್ನು ಕೇಳಿದ ಕೂಡಲೆ ನಗರದಲ್ಲಿರುವ ಸಕಲ ಸ್ತ್ರೀಯರೊಡನೆ ಸಂಯು ಕೆಯು ಅಗ್ನಿ ಪ್ರವೇಶಮಾಡಿದಳು. ಡಿಲ್ಲಿ ನಗರವನ್ನು ಪ್ರವೇಶಿಸಿ ನೋಡಲು ನಗರವೆಲ್ಲವೂ ಭಸ್ಮರಾಶಿಗಳಿಂದ ತುಂಬಿರುವುದನ್ನು ಕಂಡು ಆರ್ಯಾ೦ಗನೆಯರ ಸಾಹಸಕ್ಕೆ ಘೋರಿಯು ಅತ್ಯಂತಾಶ್ಚರ್ಯಾನ್ವಿತನಾದನು. -+ಆ~~