ಉಮಾಬಾಯಿದಾಛಾಡೇ. --:೦:- ಈಕೆಯು ಮಹಾರಾಷ್ಟ್ರ ರಾಜ್ಯ ಸ್ಥಾಪಕನಾದ ಶಿವಾಜಿಮಹಾರಾಜನ ಮೊಮ್ಮಗನಾದ ಸಾಹುಮಹಾರಾಯನ ಕಾಲದಲ್ಲಿ ಇದ್ದಂತೆ ತಿಳಿಯಬರುತ್ತದೆ. ಉಮಾಬಾಯಿಯ ಮಾವನಾದ ಏಸುಪಾಟಿಲ್ ದಾಭಾಡೆಯು ಶಿವಾಜಿಯ ಬಳಿ ಯಲ್ಲಿ ನೃತ್ಯನಾಗಿ ಇದ್ದನು. ಆತನ ಪುತ್ರರು ಇಬ್ಬರೂ, ಶಿವಾಜಿಯ ಎರಡ ನೆಯ ಮಗನಾದ ರಾಜಾರಾಮನ ಕಾಲದಲ್ಲಿ ಸ್ವಹಿತವನ್ನೆಣಿಸದೆ ಸ್ವಾಮಿಹಿತ ವನ್ನು ನಿರ್ವಹಿಸಿದುದರಿಂದ, ರಾಜನು ಮೆಚ್ಚಿ ಅಂದಿನಿಂದ ಅವರಿಗೆ ಸೇನಾಧಿಪತ್ಯ ವನ್ನು ಕೊಟ್ಟನು. ಏಸುಪಾಟಿಲನ ದೊಡ್ಡ ಮಗನ ಹೆಸರು ಖಂಡೋಜಿ. ಖಂಡೋಜಿಯ ಪತ್ನಿಯೇ ಚರಿತ್ರನಾಯಿಕೆಯು. ಸಾಹುಮಹಾರಾಯನು ಡಿಲ್ಲಿಯಿಂದ ಪುನಃ ಸ್ವರಾಜ್ಯಕ್ಕೆ ಬಂದಮೇಲೆ, ಮಹಾರಾಷ್ಟ್ರ ರಾಜ್ಯವು ಸ್ವಲ್ಪ ಉನ್ನತಸ್ಥಿತಿಗೆ ಬರಲಾರಂಭಿಸಿತು. ಅಂತಹ ಕಾಲದಲ್ಲಿ ಖಂಡೋಜಿಯು ತನ್ನ ಶೌರ್ಯದಿಂದ ಅನೇಕ ಯುದ್ಧಗಳಲ್ಲಿ ವಿಜಯ ವನ್ನು ಹೊಂದಿ ಕೀರ್ತಿವಂತನಾದನು. ಬಾಲಾಜೀವಿಶ್ವನಾಥಪೇಷ್ಟೆಯೂ, ಖಂಡೋಜೀದಾಭಾಡೆಯೂ ಪ್ರಾಣಸ್ನೇಹಿತರಾಗಿದ್ದರು. ಆದರೆ ಅವರು ಗತಿಸಿದ ಅನಂತರ, ಅವರ ಉದ್ಯೋಗವನ್ನು ಪಡೆದ, ಅವರ ಪುತ್ರರಾದ ಬಾಜೀರಾವು ಪೇಷ್ಟೆಗೂ, ತ್ರಿಯಂಬಕರಾವ್ ಸೇನಾಪತಿಗೂ ತಂದೆಗಳ ಕಾಲದ ಸ್ನೇಹಭಾವವು ಅಳಿಸಿ ಹೋಗಿ ವೈರವು ಉಂಟಾಯಿತು ! ಆಗ ಬಾಜೀರಾಯನು ಉತ್ತರ ಹಿಂದೂಸ್ಥಾನವನ್ನೂ, ತ್ರಿಯಂಬಕರಾಯನು ಘಗ್ಗರ ದೇಶವನ್ನೂ ಅಪಹರಿಸಲು ಎಣಿಸಿದರು. ಆಗ ಒಬ್ಬರ ಮೇಲೆ ಒಬ್ಬರು ಅನೇಕಕಾರಣಗಳನ್ನು ಆರೋಪಿಸಿ ಯುದ್ಧ ಸನ್ನದ್ದರಾದರು. ಆ ಯುದ್ದದಲ್ಲಿ ದಾಭಾಡೆಯು ತನ್ನ ಅಸಮಾನ ಶೌರ್ಯವನ್ನು ತೋರುತ್ತ ಕಾದಾಡಿದನು. ಪೇಷ್ಟೆಯು ಆತನನ್ನು ಗೆಲ್ಲುವುದು ದುಸ್ತರವೆಂದು ತಿಳಿದು ಬಹು ಅನ್ಯಾಯದಿಂದ ಆ ಶೌರ್ಯನಿಧಿಯನ್ನು ರಣರಂಗ ದಲ್ಲಿ ಕೊಂದನು. ಈ ವಿಷಯವನ್ನು ತ್ರಿಯಂಬಕರಾಯನ ತಮ್ಮನಾದ ಯಶ ವಂತರಾವ್ ದಾಭಾಡೆಯು ಕೇಳಿ ಬಹು ರೋಷಯುಕ್ತನಾಗಿ ಬಾಜೀರಾಯನನ್ನು ಸಂಹರಿಸಿದ ಹೊರತು ಅಣ್ಣನ ಉತ್ತರಕ್ರಿಯೆಗಳನ್ನು ಮಾಡುವುದಿಲ್ಲ ಎಂದು ಪ್ರತಿಜ್ಞೆಯನ್ನು ಮಾಡಿದನು. ಅದಕ್ಕೆ ಉಮಾಬಾಯಿಯೂ ಸಮ್ಮತಿಸಿ ತಾನೂ ಯುದ್ಧಕ್ಕೆ ಬರುವೆನು ಎಂದು ಹೇಳಿದಳು. ಈ ವರ್ತಮಾನವನ್ನು ಕೇಳಿ
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೯೬
ಗೋಚರ