೧೭೨ ಅಬಲಾ ಸಚ್ಚರಿತ್ರ ರತ್ನ ಮಾಲೆ. ಬಾಜೀರಾಯನು ಬಹು ದೈನ್ಯವನ್ನು ಹೊಂದಿ, ಸಾಹುಮಹಾರಾಯನನ್ನು ಮಧ್ಯಸ್ಥನಾಗಬೇಕು ಎಂದು ಕೇಳಿಕೊಂಡನು. ಆಗ ಆ ಮಹಾರಾಯನು ಆತನನ್ನು ತನ್ನೊಡನೆ ಕರೆದುಕೊಂಡು, ಉಮಾಬಾಯಿಯು ವಾಸವಾಗಿದ್ದ ತಳೇಗಾಮೆಂಬ ಗ್ರಾಮಕ್ಕೆ ಹೋಗಿ ಅಲ್ಲಿ ಆಕೆಯನ್ನು ಕಂಡು, ಬಾಜೀರಾಯ ನನ್ನು ಆಕೆಯ ಪಾದಗಳ ಮೇಲೆ ಹಾಕಿ, “ ಖಂಡೇರಾವ್ ದಾಭಾಡೆಯವರೂ ಬಾಲಾಜೀವಿಶ್ವನಾಥರಾಯರೂ ಅಣ್ಣ ತಮ್ಮಂದಿರಂತೆ ಇದ್ದರು. ಆದಕಾರಣ ಈ ಬಾಜೀರಾಯನು ನಿನಗೆ ಪುತ್ರಸಮಾನನು, ಈತನ ಅಪರಾಧವನ್ನು ಕ್ಷಮಿಸು.” ಎಂದು ಹೇಳಿದನು. ಉಮಾಬಾಯಿಯು ತನ್ನ ಮನಸ್ಸಿನಲ್ಲಿ ಇರುವ ವೈರ ವನ್ನು ತ್ಯಜಿಸಿ ಶರಣಾಗತನಿಗೆ ಅಭಯವನ್ನು ಕೊಟ್ಟಳು. ಅನಂತರ ಕೆಲವು ದಿನಗಳಿಗೆ ಸಾಹುಮಹಾರಾಯನು ಅಮದಾಬಾದು ಠಾಣೆಯನ್ನು ಗೆಲ್ಲುವಂತೆ ಉಮಾಬಾಯಿಯ ಪುತ್ರರಿಗೆ ಆಜ್ಞಾಪಿಸಿದನು. ಆಗ ಉಮಾಬಾಯಿಯು ತನ್ನ ಪುತ್ರರು ಅಲ್ಪ ವಯಸ್ಕರಾದುದರಿಂದ ಈ ಕಾರ್ಯವನ್ನು ನಿರ್ವಹಿಸಲಾರರು ಎಂದು ತಿಳಿದು ಅವರೊಡನೆ ತಾನೂ ಪ್ರಯಾಣಸನ್ನದ್ಧಳಾದಳು, ವೀರಪತ್ನಿಯೂ, ವೀರಮಾತೆಯೂ ಆದ ಉಮಾಬಾಯಿಗೆ ಯುದ್ಧ ವೆಂದರೆ ಮನೆಯ ಕೆಲಸ ದಂತೆ ಸಾಧಾರಣವಾಗಿತ್ತು. ಅಮದಾಬಾದು ಠಾಣೇದಾರನಾದ ಜೋರಾವ ರರ್ಖಾಬಾಬಿಯು ಪುತ್ರ ಸಹಿತಳಾಗಿ ಉಮಾಬಾಯಿಯು ತನ್ನೊಡನೆ ಯುದ್ಧಕ್ಕೆ ಬರುವಳೆಂದು ಕೇಳಿ, ಆಕೆಗೆ “ ನೀನು ಅನಾಥೆ ; ಹೆಂಗಸು ; ನಿನ್ನ ಪುತ್ರರು ಅಲ್ಪ ವಯಸ್ಕರು ; ಆದಕಾರಣ ನೀನು ಸೈನ್ಯ ಸಹಿತಳಾಗಿ ಹಿಂತಿರುಗುವುದು ಉತ್ತಮ. ಇಲ್ಲದಿದ್ದರೆ ನೀವು ನಮ್ಮ ತುರುಷ್ಕರ ಪರಾಕ್ರಮಕ್ಕೆ ಸಿಕ್ಕಿಹತ ರಾಗುವುದು ನಿಶ್ಚಯ. ” ಎಂದು ಬರೆದು ಕಳುಹಿದನು. ಆ ಕಾಗದವನ್ನು ಓದಿ ಉಮಾಬಾಯಿಯ ಶೌರ್ಯಾಗ್ನಿಯು ಇನ್ನೂ ಹೆಚ್ಚಾಗಿ ಜ್ವಲಿಸಲಾರಂಭಿ ಸಿತು. ಆಗ ಆಕೆಯು ಆ ಮೇಚ್ಛನ ಗರ್ವವನ್ನು ಭಂಗಮಾಡಿದಲ್ಲದೆ ಭೋಜನ ವನ್ನು ಮಾಡುವುದಿಲ್ಲವೆಂದು ಪ್ರತಿಜ್ಞೆಯನ್ನು ಮಾಡಿದಳು. ಅನಂತರ ತನ್ನ ಬಳಿಯಲ್ಲಿರುವ ಸರ್ದಾರರೆಲ್ಲರನ್ನೂ ಕರೆಯಿಸಿ ಒಂದು ಸಭೆಯನ್ನು ಮಾಡಿದಳು. ಅವರೆಲ್ಲರೂ ಬರುವುದಕ್ಕೆ ಪೂರ್ವವೇ, ಅರಿಸಿನ, ಕುಂಕುಮ, ಬಳೆಗಳು ಇವು ಗಳನ್ನು ತರಿಸಿ, ಸಭಾಮಧ್ಯದಲ್ಲಿ ಇರಿಸಿದಳು. ಸಭಿಕರೆಲ್ಲರೂ ಬಂದನಂತರ ಆಕೆಯು ಜೊರಾವರರ್ಖಾಬಾಬಿಯು ಬರೆದ ಕಾಗದವನ್ನು ಎಲ್ಲರಿಗೂ ಓದಿ ಹೇಳಿ, “ ಇದರ ಮೇಲೆ ಅಮದಾಬಾದು ಠಾಣೆಯನ್ನು ಜಯಿಸಿ ಅಲ್ಲಿಯೇ ಊಟ ಮಾಡಬೇಕು ಎಂದು ನಿಶ್ಚಯಿಸಿದೆನು. ನೀವೆಲ್ಲರು ಇಂದಿನವರೆಗೂ ನಾನು ಕೊಟ್ಟ ಭೋಜನದಿಂದ ಜೀವಿಸುತಲಿರುವಿರಿ. ಆದಕಾರಣ ನನ್ನ ಪ್ರತಿಜ್ಞೆಯಲ್ಲಿ ಆದರಾಭಿಮಾನವುಳ್ಳವರಾದ ಪಕ್ಷದಲ್ಲಿ ಮರಣಕ್ಕೆ ಹೆದರದೆ ತಕ್ಷಣವೇ ಯುದ್ದಕ್ಕೆ ಸಿದ್ದರಾಗಿ ನನ್ನೊಡನೆ ಯುದ್ಧ ಭೂಮಿಗೆ ಪ್ರಯಾಣಮಾಡಿರಿ. ಪ್ರಾಣಭಯ
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೯೭
ಗೋಚರ