ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೫ ಅರ್ಗಳ ಸ೦ಸ್ಥಾನಾಧೀಶ್ವರಿ. ಪಕ್ಷಕ್ಕೆ ಸ್ತ್ರೀಯರಿಗೆ ಸಹಾಯವನ್ನು ಮಾಡಿರಿ, ನಮಗೆ ಸಹಾಯ ಮಾಡ ದಿದ್ದರೆ ನಿಮಗೆ ಅವಮಾನವಲ್ಲವೆ ? ಆದಕಾರಣ ನಮ್ಮನ್ನು ರಕ್ಷಿಸುವ ಭಾರ ವೆಲ್ಲವು ನಿಮ್ಮ ಮೇಲೆಯೇ ಇದೆ. ” ಎಂದಳು. ಮರ್ಮಭೇದಕಗಳಾದ ಈ ಮಾತುಗಳನ್ನು ಕೇಳಿ ಅಭಯಚಂದ್ರ, ನಿರ್ಭಯಚ೦ದ್ ಎಂಬ ಬಿರುದುಗಳುಳ್ಳ ಇಬ್ಬರು ಅಣ್ಣ ತಮ್ಮಂದಿರು ಸ್ವಲ್ಪ ಸೇನೆಯೊಡನೆ ಬಂದು, ಶತ್ರುಸೈನ್ಯದ ಮೇಲೆ ಬಾಣಪರಂಪರೆಗಳನ್ನು ಬಿಡ ತೊಡಗಿದರು. ಅವರು ' ಹರಹರ ಮಹಾದೇವ ” ಎಂದು ಉಚ್ಚರಿಸುತ್ತ ಶತ್ರು ಗಳ ಶಿರೋನಾರಿಕೇಳಗಳನ್ನು ಮಹದೇವನಿಗೆ ಅರ್ಪಿಸುತಲಿದ್ದರು. ಹೀಗೆ ಅವರು ಯುದ್ದ ಮಾಡುತ್ತ ರಾಣಿಯನ್ನು ಸವಿಾಪಿಸಿದರು. ತಮ್ಮ ಸಹಾಯಕ್ಕೆ ಸೈನಿಕರು ಬಂದುದನ್ನು ನೋಡಿ ಆ ವನಿತೆಯರು ಬಹು ಉತ್ಸಾಹದೊಡನೆ ಯುದ್ಧ ಮಾಡುತಲಿದ್ದರು. ಸ್ತ್ರೀ ಪುರುಷಮಿಶ್ರವಾದ ಆ ಚಿಕ್ಕ ಸೈನ್ಯವು ಮೇಚಸೈನ್ಯ ದಲ್ಲಿ ಮೆಲ್ಲಮೆಲ್ಲಗೆ ದಾರಿಯನ್ನು ಮಾಡಿಕೊಳ್ಳುತ್ತ ಮುಂದಕ್ಕೆ ನಡೆಯುತಲಿತ್ತು. ಆದರೆ ಪ್ರತಿಯೊಂದು ಹೆಜ್ಜೆಗೂ ಅನೇಕ ಹಿಂದೂವೀರರು ಮಡಿಯುತಲಿದ್ದರು. ಅವರು ಹೀಗೆ ಅತ್ಯಂತ ಶ್ರಮದಿಂದ ಸ್ವಲ್ಪ ದೂರ ಹೋಗಲು, ಈ ವಿಷಯ ವೆಲ್ಲವನ್ನೂ ಕೇಳಿ ರಾಜನು ಕಳುಹಿಸಿದ ದೊಡ್ಡ ಸೈನ್ಯವು ರಾಣಿಯೇ ಮೊದಲಾದ ವರು ಇರುವ ಸ್ಥಳಕ್ಕೆ ಬಂದಿತು. ಅದರ ಸಹಾಯದಿಂದ ರಾಣಿಯು ನಿರ್ಭಯ ಳಾಗಿ ಅರಮನೆಯನ್ನು ಸೇರಿದಳು. ನಿರ್ಭಯ ಚ೦ದನು ಯುದ್ದದಲ್ಲಿ ಮಡಿ ದನು. ಅಭಯ ಚಂದನ ಶೌರ್ಯಸಾಹಸಗಳಿಗೆ ಮೆಚ್ಚಿ ರಾಜನು ಬಹು ಸಂತೋಷದೊಡನೆ ತನ್ನ ಪುತ್ರಿಯನ್ನು ಆತನಿಗೆ ಕೊಟ್ಟು ಮದುವೆಯನ್ನು ಮಾಡಿದನು. ಅಯೋಧ್ಯೆಯ ನವಾಬನು ಪುನಃ ಬಹು ಸೈನ್ಯವು ತನ್ನ ಮೇಲೆ ದಂಡೆತ್ತಿ ಬಂದುದನ್ನು ನೋಡಿ ಭೀತನಾಗಿ, ತಾನು ತೆಗೆದುಕೊಂಡು ಬಂದಿದ್ದ ಯುದ್ದ ಸಾಮಗ್ರಿಯನ್ನು ಅಲ್ಲಿಯೇ ಬಿಟ್ಟು ಸೈನ್ಯದೊಡನೆ ಪಲಾಯನ ಮಾಡಿ ದನು. ಸ್ತ್ರೀಯರನ್ನು ಅನ್ಯಾಯವಾಗಿ ಸೆರೆಹಿಡಿಯಲು ಪ್ರಯತ್ನ ಪಟ್ಟ ಶೂರ ವರನು ಈತನೇ ಎಂದು ಸರ್ವಜನರಿಂದಲೂ ನಿ೦ದಿಸಿಕೊಳ್ಳು ತ್ತಾ ಆ ನವಾಬನು ಬಹು ವೃದ್ಧನಾಗುವವರೆಗೂ ಜೀವಿಸಿದ್ದನು.