ಜಗನ್ನೋಹಿಸಿ. (ಬಾಬುಕೇಶವಚಂದ್ರಸೇನನ ಪತ್ನಿ.) ಈಕೆಯ ತಂದೆಯ ಹೆಸರು ಚಂದ್ರಕುಮಾಮಝಮದಾರ್, ಈತನ ವಾಸಸ್ಥಳ ಕಲಿಕತ್ತೆಗೆ ಸವಿಾಪದಲ್ಲಿರುವ ಅಗ ಪರಡಾ ಎ೦ಬ ಗ್ರಾಮವು, ಈ ಗ್ರಾಮದಲ್ಲಿ ಯೇ ಜಗನ್ನೊಹಿನಿಯು ಕ್ರೀಸ್ತುಶಕ ೧೮೪೭ ನೆಯ ಇಸವಿ ಡಿಶಂ ಬರ್ ೨೬ ನೆಯ ತಾರೀಖಿನಲ್ಲಿ ಜನ್ನಿಸಿದಳು, ತವರುಮನೆಯಲ್ಲಿ ಈಕೆಯನ್ನು ಗುಲಾಬ್ ಸುಂದರಿ ಎಂದು ಕರೆಯುತಲಿದ್ದರು. ಈಕೆಗೆ ಒಂಭತ್ತು ವರ್ಷ ವಯ ಸ್ವಾದ ಒಡನೆಯೇ ಈಕೆಯನ್ನು ಕೇಶವಚಂದ್ರಶೇನನಿಗೆ ಕೊಟ್ಟು ವಿವಾಹಮಾಡಿ ದರು. ವಿವಾಹವಾದ ಅನಂತರ ಈತನು ಬ್ರಹ್ಮಮತವನ್ನು ಅವಲಂಬಿಸಿ ಬಹು ಕೀರ್ತಿವಂತನಾದನು. ಜಗನ್ನೋಹಿನಿಯು ಅತ್ತೆಯ ಮನೆಗೆ ಬಂದಮೇಲೆ ಆಕೆಯ ಪತಿಯು ಬಹು ವೈರಾಗ್ಯಶೀಲನಾಗಿದ್ದನು. ಆತನ ಮನೆಯಲ್ಲಿರುವ ವರು ಎಲ್ಲರೂ ಆತನು ತಮಗೆ ಇಷ್ಟವಿಲ್ಲದ ಮತವನ್ನು ಸ್ವೀಕರಿಸಲೆಣಿಸಿದುದರಿಂದ ಆತನನ್ನೂ, ಆತನ ಪತ್ನಿಯನ್ನೂ ಬಹುವಿಧವಾಗಿ ಹಿಂಸಿಸುತಲಿದ್ದರು. ಆಕಾಲ ದಲ್ಲಿ ಜಗನ್ನೊಹಿನಿಗೆ ತಾನು ನಡೆದುಕೊಳ್ಳಬೇಕಾದ ಧರ್ಮವಿಚಾರವು ತಿಳಿಯ ದಿದ್ದರೂ, ಪತಿಯಮೇಲೆ ನಿಶ್ಚಲಭಕ್ತಿಯುಳ್ಳವಳಾಗಿ ಇತರರುಮಾಡುವ ನಿಂದೆ ಯನ್ನು ಆತನಿಗೆ ತಿಳಿಸದೆ, ಆತನನ್ನು ಸದಾ ಸಂತೋಷಗೊಳಿಸಲು ಯತ್ನಿಸುತ ಲಿದ್ದಳು. ಕೇಶವಚಂದ್ರನು ಬಂಧುಗಳೊಡನೆ ವಾಸಮಾಡುತ್ತ ತನ್ನ ಮತಾನು ಸಾರವಾಗಿ ನಡೆಯುವುದು ದುಸ್ತರವೆಂದೆಣಿಸಿ, ೧೮೬೧ ನೆಯ ಇಸವಿಯಲ್ಲಿ ಬ್ರಹ್ಮ ಸಮಾಜವಾರ್ಷಿಕೋತ್ಸವವು ನಡೆಯುತ್ತಿರಲು, ಸ್ವಗೃಹವನ್ನು ತ್ಯಾಗಮಾಡಿ, ಆ ಸಮಾಜದಲ್ಲಿ ಪೂಜ್ಯನೆಂದು ಎಣಿಸಲ್ಪಡುತಲಿದ್ದ ಮಹರ್ಷಿದೇವೇಂದ್ರನಾಥನ ಮನೆಗೆ ಹೋದನು. ಆಗ ಜಗನ್ನೋಹಿನಿಯು ೧೩ ವರ್ಷದವಳಾದರೂ ಪತಿ ಯೊಡನೆ ವಾಸಮಾಡುವುದೇ ಸತಿಗೆ ಉಚಿತವಾದುದು ಎಂದೆಣಿಸಿ, ತಾನು ಕೂಡ ಪತಿಯೊಡನೆ ಹೋದಳು. ಇವರು ಇಬ್ಬರೂ ಅಲ್ಲಿರುವ ಸಮಯದಲ್ಲಿಯೇ ಕೇಶವಚಂದ್ರನಿಗೆ ಅಸಾಧ್ಯವಾದ ವ್ಯಾಧಿಯು ಉಂಟಾಯಿತು. ಆ ಸಮಯ ದಲ್ಲಿಯೇ ಅವರಿಬ್ಬರೂ ಕೇಶವಚಂದ್ರಸೇನನ ಮಿತ್ರರ ಮನೆಗೆ ಹೋದರು. ಅಲ್ಲಿ ಜಗನ್ನೋಹಿನಿಯು ಪತಿಗೆ ಮಾಡಿದ ಸೇವೆಯೂ, ಆಕೆಯು ತೋರಿದ ಧೈರ್ಯವೂ ಸ್ತೋತ್ರಾರ್ಹವಾದುದು, ಅನಂತರ ಪರಮೇಶ್ವರನ ಕೃಪೆಯಿಂದ ಕೇಶವಚಂದ್ರನ ವ್ಯಾಧಿಯು ನಿವಾರಣೆಯಾಯಿತು. - ಪತ್ನಿಯ ಸಹಾಯದಿಂದ ಆತನು ಅನೇಕ
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೦೧
ಗೋಚರ