ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇತರ ಅಬಲಾ ಸಚ್ಚರಿತ್ರ ರತ್ನ ಮಾಲೆ. ಆಕೆಯ ಪಾಣಿಗ್ರಹಣವನ್ನು ಮಾಡಿದನು. ವಿವಾಹಾನಂತರ ರೂಪದಂತೆಯೇ ಸುಗುಣಗಳನ್ನುಳ್ಳವಳಾದಕಾರಣ ಸದ್ವಿನಿಯು ಪತಿಗೆ ಪ್ರಾಣಸವಳಾದಳು. * ಆ ಕಾಲದಲ್ಲಿ ರಾಜ್ಯವು ರಾಣಾಲಕ್ಷ್ಮಣಸಿಂಹನೆಂಬ ಬಾಲರಾಜನ ಪರಿ ಪಾಲನೆಯಲ್ಲಿತ್ತು. ಆತನು ಕೇವಲ ಬಾಲ್ಯ ದೆಸೆಯಲ್ಲಿದ್ದುದರಿಂದ ಆತನ ಹೆಸರಿ ನಲ್ಲಿ ಆತನ ಚಿಕ್ಕಪ್ಪನಾದ ಭೀಮಸಿಂಹನೇ ರಾಜ್ಯ ಪಾಲನೆಯನ್ನು ಮಾಡುತ ಲಿದ್ದನು. ಭೀಮಸಿಂಹನು ಚತುರನೂ, ಶೂರವರನೂ ಆಗಿದ್ದುದರಿಂದ ರಾಜ್ಯಕ್ಕೆ ಶುಭಯವಿಲ್ಲದೆ ಪ್ರಜೆಗಳು ಸುಖವಾಗಿದ್ದರು. ಆದರೆ ಕೆಲವು ವರ್ಷಗಳ ಅನಂತರ ದೆಹಲೀ ಬಾದಷಹನಾದ ಅಲ್ಲಾವುದ್ದೀನನು ಮೇವಾಡಿಗೆ ಮುಖ್ಯ ಪಟ್ಟಣ ವಾದ ಚಿತ್ತೂರಿಗೆ ಮುತ್ತಿಗೆಯನ್ನು ಹಾಕಲು ಹೊರಟನು. ಈ ಬಾದಷಹನು ಪದ್ಮನಿಯ ರೂಪವನ್ನು ಕೇಳಿ ಆಕೆಯನ್ನು ಹೇಗಾದರೂ ತನ್ನ ಬೇಗಮಳನ್ನಾಗಿ ಮಾಡಿಕೊಳ್ಳ ಬೇಕೆಂದು ನಿಶ್ಚಯಿಸಿದನು. ಶೂರರಾದ ರಾಜಪುತ್ರರನ್ನು ಜೈಸಿ ಪಮ್ಮಿನಿಯನ್ನು ವಶಪಡಿಸಿಕೊಳ್ಳುವುದು ಅಸಾಧ್ಯವು ಎಂದು ಎಣಿಸಿ, ಅಲ್ಲಾವುದ್ದೀ ನನು ತನ್ನ ಸೇನೆಯೊಡನೆ ಚಿತ್ತೂರು ಸಂಸ್ಥಾನದ ಮೇರೆಯಲ್ಲಿ ಶಿಬಿರವನ್ನು ಸ್ಥಾಪಿಸಿ, ಅನೇಕ ದಾಸಿಯರಿಗೆ ದ್ರವ್ಯಾಶೆಯನ್ನು ತೋರಿಸಿ ಗುಪ್ತವಾಗಿ ಪದ್ಮನಿಯ ಬಳಿಗೆ ಕಳುಹಿಸಿದನು. ಅವರು ಪದ್ಮನಿಯ ಬಳಿಗೆ ಹೋಗಿ ಅಲ್ಲಾವುದ್ದೀನನ ರೂಪವನ್ನೂ, ಐಶ್ವರ್ಯವನ್ನೂ ತಿಳಿಸಿ ಆಕೆಯ ಮನಸ್ಸನ್ನು ತಿರಿಗಿಸಲು ಯತ್ನಿ ಸಿದರು. ಆದರೆ ಮಹಾಪತಿವ್ರತೆಯಾದ ಸದ್ವಿನಿಯ ಬಳಿಯಲ್ಲಿ ಅಲ್ಲಾವುದ್ದೀನನ ಕುಯುಕ್ತಿಗಳಾವವೂ ಫಲಿಸಲಿಲ್ಲ. ಬಾದಷಹನು ಅದಕ್ಕೆ ಚಿಂತಿಸಿ, ಪದ್ಮನಿಯಲ್ಲಿ ತನಗಿರುವ ದುರುದ್ದೇಶವನ್ನು ಹಿಂತಿರುಗಿಸಿಕೊಳ್ಳಲಾರದೆ, ರಜಪೂತರನ್ನು ಗೆದ್ದು ಪದ್ಮನಿಯನ್ನು ವಶಮಾಡಿಕೊಳ್ಳ ಬೇಕು ಎಂದು ನಿಶ್ಚಯಿಸಿದನು, ಮತ್ತು ಆ ಬಾದಷಹನು, “ ಪದ್ಮನಿಯನ್ನು ವಶಮಾಡಿಕೊಳ್ಳುವೆನು. ಇಲ್ಲದಿದ್ದರೆ ರಣರಂಗ ದಲ್ಲಿ ಪ್ರಾಣವನ್ನು ತ್ಯಜಿಸುವೆನು. ' ಎಂದು ಪ್ರತಿಜ್ಞೆಯನ್ನು ಮಾಡಿದನು. ಅನಂತರ ತನ್ನ ಸೈನ್ಯಕ್ಕೆ ಚಿತ್ತೂರೂಕೋಟೆಗೆ ಮುತ್ತಿಗೆ ಹಾಕುವಂತೆ ಅಪ್ರಣೆ ಮಾಡಿದನು. ಅಲ್ಲಾವುದ್ದೀನನು ತನ್ನ ನಗರಕ್ಕೆ ಮುತ್ತಿಗೆಹಾಕಿದನು ಎಂದು ಕೇಳಿ, ಶೌರ್ಯನಿಧಿಗಳಾದ ರಾಜಪುತ್ರರು ಯುದ್ಧ ಸನ್ನದ್ಧರಾದರು. ಉಭಯ ಪಕ್ಷದ ಸೈನಿಕರಿಗೂ ಯುದ್ಧವು ಪ್ರಾರಂಭವಾಯಿತು. ಯುದ್ದವು ಕೆಲವು ತಿಂಗಳುಗಳವರೆಗೂ ನಡೆದರೂ ಜಯಾಪಜಯಗಳು ತಿಳಿಯಲಿಲ್ಲ. ಕೊನೆಗೆ ಯವನರ ಸೈನ್ಯವು ಅಸಂ ಖ್ಯಾತವಾಗಿರುವುದನ್ನೂ, ತಮ್ಮ ಸೈನ್ಯದಲ್ಲಿ ಅನೇಕ ಶೂರರು ಹತರಾದುದನ್ನೂ , ಅನುಕೂಲಾ ಏಹುಲಾಂಗೀಂ ಕುಲಜಾ೦ ಕುಶಲಾ೦ ಸುಶೀಲ ಸಅಹಾ೦! ಪಂಚಲಕಾರಾಂ ಭಾರಾ೦ ಪುರುಷಃ ಪುಕೂದpಾಲ್ಲಭತೆ !!