ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಮನಿ. ೧೮೩ ದುದಕ್ಕೆ ಒಪ್ಪಿಕೊಂಡು ಆಕೆಯನ್ನು ಶೀಘ್ರವಾಗಿ ಬರುವಂತೆ ಹೇಳಿ ಕಳುಹಿಸಿದನು. ಪದ್ಮನಿಯು ಅಲ್ಲಾವುದ್ದೀನನಿಂದ ತಕ್ಕ ಪ್ರತ್ಯುತ್ತರವನ್ನು ಪಡೆದು ಹೊರಡುವುದಕ್ಕೆ ಏಳುನೂರು ಪಲ್ಲಕ್ಕಿಗಳನ್ನು ಸಿದ್ದಪಡಿಸಿದಳು. ಒಂದೊಂದು ಪಲ್ಲಕ್ಕಿಯಲ್ಲಿ ಮೂರು ಮೂರು ಜನಶೂರರು ಕುಳಿತುಕೊಂಡರು. ಒಂದೊಂದು ಪಲ್ಲಕ್ಕಿ ಯನ್ನು ಆರಾರು ಜನ ಗುಪ್ತಾ ಯುಧರಾದ ಶೂರರು ಹೊತ್ತು ಕೊಂಡರು. ಪದ್ಮ ನಿಯು ತನ್ನ ಸಹಾಯಾರ್ಥವಾಗಿ ಸೋದರನನ್ನೂ, ಸೋದರ ಪುತ್ರನನ್ನೂ ಕರೆದುಕೊಂಡು ಅಲ್ಲಾವುದ್ದೀನನ ಶಿಬಿರಕ್ಕೆ ಹೊರಟಳು. ಅಲ್ಲಾವುದ್ದೀನನ ಶಿಬಿರ ವನ್ನು ಸವಿಾಪಿಸಿ, ಆತನ ಅನುಜ್ಞೆಯಿಂದ ತನ್ನ ಏಳೂರು ಸಲ್ಲಕ್ಕಿಗಳೊಡನೆ ಶಿಬಿರ ಮಧ್ಯ ಪ್ರದೇಶವನ್ನು ನಿರಾತಂಕವಾಗಿ ಪ್ರವೇಶಿಸಿ, ತನ್ನ ಪತಿಯನ್ನು ಒಂದು ಸಲ ನೋಡುವೆನು ಎಂದು ಬಾದಷಹನಿಗೆ ತಿಳಿಸಿ ಭೀಮಸಿಂಹನು ಇರುವ ಸೆರೆ ಮನೆಗೆ ತನ್ನ ಪಲ್ಲಕ್ಕಿಯನ್ನು ತೆಗೆಯಿಸಿಕೊಂಡು ಹೋದಳು. ಇಷ್ಟರಲ್ಲಿ ಸ್ತ್ರೀಯ ರಂತೆ ಇದ್ದ ಗುಪ್ತ ಸೈನಿಕರು ನಿಜಸ್ವರೂಪದೊಡನೆ ಹೊರಟು ಯವನ ಸೈನಿಕರನ್ನು ಸಂಹರಿಸಲಾರಂಭಿಸಿದರು. ಭೀಮಸಿ೦ಹನು ಇದೆಲ್ಲವೂ ಏನೆಂದು ಕೇಳಲು ಪದ್ಮನಿಯು ಆತನನ್ನು ತ್ವರೆಗೊಳಿಸಿ, ತನ್ನೊಡನೆ ಸಿದ್ಧ ಮಾಡಿ ತಂದಿದ್ದ ಕುದುರೆ ಗಳ ಮೇಲೆ ತಾವಿಬ್ಬರೂ ಕುಳಿತು, ಯುದ್ದದ ಗಲಾಟೆಯಲ್ಲಿ ತಪ್ಪಿಸಿಕೊಂಡು ಹೋಗುವುದು ಉಚಿತವೆಂದು ತಿಳಿಸಿದಳು. ಅದರಂತೆಯೇ ಅವರಿಬ್ಬರೂ ತಮ್ಮ ಅಶ್ವಗಳನ್ನು ಅತಿವೇಗವಾಗಿ ನಡೆಸುತ್ತ ಸ್ವಲ್ಪ ಹೊತ್ತಿಗೆ ಚಿತ್ತೂರನ್ನು ಪ್ರವೇಶಿಸಿ ದರು. ಘೋರಾಸಿಂಹನ ಆಧಿಪತ್ಯದಲ್ಲಿ ರಜಪೂತ ಸೈನ್ಯವು ಮೈಚ್ಛಸೈನ್ಯವನ್ನು ಸೋಲಿಸಿತು. ಆದರೆ ಅದ್ಭುನ ಸಮಾನನಾದ ಘೋರಾಸಿಂಹನೂ, ಆತನ ಪುತ್ರನೂ ಆ ಸಂಗ್ರಾಮದಲ್ಲಿ ಮೃತರಾದುದರಿಂದ ರಾಜಪುತ್ರರಿಗೆ ವಿಜಯವು ವಿಶೇಷ ಸಂತಸವನ್ನು ಉಂಟುಮಾಡಲಿಲ್ಲ. ಅಲ್ಲಾವುದ್ದೀನನು ಪರಾಜಯಕ್ಕೆ ಚಿಂತಿಸುತ್ತ ಸೈನ್ಯದೊಡನೆ ಡಿಲ್ಲಿ ಮಾರ್ಗವನ್ನು ಹಿಡಿದನು. ಆಯುದ್ಧವು ಸಮಾಪ್ತವಾದ ಕೆಲವು ಕಾಲಕ್ಕೆ ಅಲ್ಲಾವುದ್ದೀನನು ಪುನಃ ಬಹು ಸೈನ್ಯ ಸಹಿತನಾಗಿ ಬಂದು ಚಿತ್ತೂರನ್ನು ಮುತ್ತಿಗೆಹಾಕಿದನು. ಈಸಲ ಚಿತ್ತೂರಿನಲ್ಲಿ ಶೂರರು ಬಹುಅಲ್ಪ ಸಂಖ್ಯಾಕರಾಗಿದ್ದುದರಿಂದ, ರಾಜಪುತ್ರರು, ತಮಗೆ ಅಪಜಯವು ಉಂಟಾಗುವುದು ಸತ್ಯವು ಎಂದು ತಿಳಿದು, ಪ್ರಾಣಗಳ ಮೇಲಿನ ಆಶೆಯನ್ನು ತೊರೆದು ಯುದ್ಧ ಮಾಡಲಾರಂಭಿಸಿದರು. ಯುದ್ದವು ನಡೆಯುತ್ತಿರುವ ಸಮಯದಲ್ಲಿ ಒಂದುದಿನ ರಾತ್ರಿ ಭೀಮಸಿಂಹನ ಸ್ವಪ್ನದಲ್ಲಿ ಗ್ರಾಮದೇವತೆಯು ಪ್ರತ್ಯಕ್ಷಳಾಗಿ, " ನನಗೆ ಅತಿ ದಾಹವಾಗಿದೆ. ಹನ್ನೆರಡು ಮಂದಿ ರಾಜಕುಮಾರರ ರಕ್ತವನ್ನು ಪಾನಮಾಡಿಸಿದ ಹೊರತು ತೃಪ್ತಿಯು ಉಂಟಾಗಲಾರದು. ' ಎಂದು ಹೇಳಿದಳಂತೆ. ಅದರಂತೆಯೇ ಭೀಮಸಿಂಹನ ಹನ್ನೊಂದು ಜನ ಪುತ್ರರೂ ರಣರಂಗದಲ್ಲಿ ವೀರಸ್ವರ್ಗವನ್ನು ಹೊಂದಿದರು.