೧೮೪ ಅಬ ಅಬಲಾ ಸಚ್ಚರಿತ್ರ ರತ್ನ ಮಾಲೆ. ಆಗಲೂ ರಜಪೂತರು ಅಧೈರ್ಯವನ್ನು ಹೊಂದಲಿಲ್ಲ, ಪುರುಷರೆಲ್ಲರೂ ಯುದ್ಧ ದಲ್ಲಿ ವೀರಸ್ವರ್ಗವನ್ನು ಪಡೆಯಲು ನಿಶ್ಚಯಿಸಿ, ಭೀಮಸಿಂಹನ ಕನಿಷ್ಠ ಪುತ್ರನನ್ನು ಒಬ್ಬ ದಾದಿಯ ಕೈಯಲ್ಲಿ ಕೊಟ್ಟು, ಸಮಿಾಪದಲ್ಲಿರುವ ಅರಣ್ಯಕ್ಕೆ ಕಳುಹಿಸಿ ಸಿಸೋದಿಯಾವಂಶಕ್ಕೆ ಅಂಕುರವು ಇರುವದು ಎಂದು ತೃಪ್ತ ಮನಸ್ಕರಾಗಿ ಸಂಗ್ರಾಮರಂಗಕ್ಕೆ ಹೊರಟರು. ಆ ದಿವಸ ಆರಿಹೋಗುವ ದೀಪಕ್ಕೆ ಕಾಂತಿಯು ಹೆಚ್ಚುವಂತೆ, ರಜಪೂತರ ಶೌರ್ಯಾಗ್ನಿಯು ಪ್ರಜ್ವಲಿಸಲು, ಅವರು ಶತ್ರು ಗಳೊಡನೆ ಅತ್ಯಂತ ಶೌರ್ಯದೊಡನೆ ಹೋರಾಡಿದರು, ಆದರೆ ಅಪಾರವಾದ ಮೇಚ್ಛಸೈನ್ಯದ ಮುಂದೆ ರಾಜಪುತ್ರರು ನಿಲ್ಲಲಾರದೆ ಹೋದರು. ಸಾಯಂಕಾಲ ವಾಗುವ ಸಮಯಕ್ಕೆ ರಾಜಪುತ್ರರೆಲ್ಲರೂ ವೀರಸ್ವರ್ಗವನ್ನು ಪಡೆದರು. ಜಯ ಲಕ್ಷ್ಮಿಯು ಬಾದಷಹನನ್ನು ಸೇರಿದಳು. ಭೀಮಸಿಂಹನೊಡನೆ ಸಕಲ ರಾಜಪುತ್ರರೂ ಹತರಾದರು ಎಂಬ ವಿಷಯ ವನ್ನು ಪುರಸ್ತ್ರೀಯರು ಕೇಳಿದರು. ಪದ್ಮನಿಯೂ, ಮಿಕ್ಸಸ್ತ್ರೀಯರೂ ಪಾತಿವ್ರತ್ಯ ವನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಚಿತೆಯನ್ನು ಸಿದ್ಧಮಾಡಿ ಅದರಲ್ಲಿ ಎಲ್ಲ ರೂ ಧುಮುಕಿದರು. (ಈ ವಿಧವಾದ ಅಗ್ನಿ ಪ್ರವೇಶಕ್ಕೆ ರಜಪೂತರು ಜೋಹಾರ್ ಅಥವಾ ಜಹರವತವೆಂದು ಹೇಳುತ್ತಾರೆ.) ವಿಜಯಾನಂದದೊಡನೆ ಅಲ್ಲಾವುದ್ದೀ ನನು ಚಿತ್ತೂರನ್ನು ಪ್ರವೇಶಿಸಲು, ಪುರವೆಲ್ಲ ವೂ ಚಿತಾಮಯವಾಗಿತ್ತು. ತಾನು ಇಷ್ಟು ಪ್ರಯತ್ನವನ್ನು ಮಾಡಿ ಕೈಕೊಳ್ಳಲು ಎಣಿಸಿದ ಪದ್ಮನಿಯ ಶರೀರವು ಭಸ್ಮ ವಾಗಿ ಇರುವುದನ್ನು ನೋಡಿ ಬಾದಷಹನು ಚಿಂತಾಕ್ರಾಂತನಾದನು. ಯುದ್ದವು ನಡೆಯುವುದಕ್ಕೆ ಪೂರ್ವವೇ ಭೀಮಸಿಂಹನು ಸ್ತ್ರೀಯರೆಲ್ಲರನ್ನೂ ಒಂದು ಗುಹೆ ಯೊಳಕ್ಕೆ ಕಳುಹಿಸಿ, ಗುಹೆಯ ದ್ವಾರವನ್ನು ಮುಚ್ಚಿ ಅಗ್ನಿಯನ್ನು ಹಚ್ಚಿ ಯುದ್ಧಕ್ಕೆ ಹೊರಟನು ಎಂದು ಕೆಲವು ಚರಿತ್ರಕಾರರು ಬರೆದಿದಾರೆ.
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೦೯
ಗೋಚರ