ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ ) ೧ಳಲಿ ಅಬಲಾ ಸಚ್ಚರಿತ್ರ ರತ್ನ ಮಾಲೆ. ರಿಂದ ಒಬ್ಬರ ಸದ್ಗುಣಗಳನ್ನು ಒಬ್ಬರು ನೋಡಿ ಪರಸ್ಪರ ಅನುರಾಗವುಳ್ಳವ ರಾದರು. ಅನಂತರ ಸ್ವಲ್ಪ ಕಾಲದಲ್ಲಿಯೇ ಅವರ ವಿವಾಹವು ನಡೆಯಿತು. ವಿವಾಹಾನಂತರ ಕೃಪಾಬಾಯಿಯ ಪತಿಗೆ ಉದಕಮಂಡಲದಲ್ಲಿ ಒಂದು ಕಲಾಶಾಲೆಯಲ್ಲಿ ಮುಖ್ಯೋಪಾಧ್ಯಾಯ ಪದವಿಯು ದೊರೆಯಿತು. ಈ ನೂತನ ದಂಪತಿಗಳು ಅಲ್ಲಿಗೆ ಹೋದರು. ಅಲ್ಲಿ ನೀಲಗಿರಿಪ್ರಾಂತದ ಗಾಳಿ ಯಿಂದ ಕೃಪಾ ಬಾಯಿಯ ಶರೀರವು ಸ್ವಲ್ಪ ಆರೋಗ್ಯದಲ್ಲಿ ಇತ್ತು. ಅಲ್ಲಿರುವ ಸಮಯದಲ್ಲಿ ಕೃಪಾಬಾಯಿಯು ಮಹಮ್ಮದೀಯ ಬಾಲಕಿಯರಿ ಗಾಗಿ ಒಂದು ಪಾಠಶಾಲೆಯನ್ನು ಸ್ಥಾಪಿಸಿದಳು, ಆ ಪಾಠಶಾಲೆಯು ಈಗಲೂ ಕ್ರಮವಾಗಿ ನಡೆಯುತಲಿದೆಯಂತೆ. ಆಕೆಯು ಉದಕಮಂಡಲದಲ್ಲಿರುವ ಕಾಲ ದಲ್ಲಿಯೇ ಆ೦ಗ್ಲೆಯ ವಾರ್ತಾಪತ್ರಿಕೆಗಳಿಗೂ, ಇತರ ಕೆಲವು ಮಾಸಪತ್ರಿಕೆ ಗಳಿಗೂ ಉಪನ್ಯಾಸಗಳನ್ನು ಬರೆಯಲು ಪ್ರಾರಂಭಿಸಿದಳು. ಪ್ರಶಂಸನೀಯ, ಗಳಾದ ಆ ಉಪನ್ಯಾಸಗಳ ದೆಸೆಯಿಂದ ಕೃಪಾಬಾಯಿಯ ಕೀರ್ತಿಯು ನಾಲ್ಕು ಕಡೆಯಲ್ಲಿಯೂ ಹರಡಿಕೊಳ್ಳಲಾರಂಭಿಸಿತು. ೧೮೮೪ ನೆಯ ಇಸವಿಯಲ್ಲಿ ಸತ್ಯನಾಥನನ್ನು ರಾಜಮಹೇ೦ದ್ರವರಕ್ಕೆ ವರ್ಗಮಾಡಿದರು. ಅಲ್ಲಿಗೆ ಬಂದನಂತರ ಕೃಪಾ ಬಾಯಿಯ ರುಗ್ಧತೆಯು ಹೆಚ್ಚಾಗುತ ಬಂದಿತು. ಅಲ್ಲಿದ್ದ ಒಂದು ವರ್ಷಕಾಲವೂ ವ್ಯಾಧಿಯಿಂದ ಬಾಧಿತ ಳಾಗಿದ್ದರೂ ಉಪನ್ಯಾಸಗಳನ್ನು ಬರೆಯುತ್ತಲೇ ಇದ್ದಳು. ಅನಂತರ ಇವರು ಕುಂಭಕೋಣಕ್ಕೆ ಹೋದರು. ಅಲ್ಲಿಗೆ ಬಂದನಂತರ ಈಕೆಗೆ ಕವಿತ್ವ ಸ್ಫೂರ್ತಿಯೂ, ಪ್ರಭಂದರಚನೇಚ್ಛೆಯೂ ಉಂಟಾದುವು. ಆಕೆಯು ಬರೆದ ಪದ್ಯಗಳನ್ನು ಓದಿದರೆ ಆಕೆಗೆ ಇರುವ ಆ೦ಗ್ಲೆಯಭಾಷಾ ಕವಿತ್ವ ಸ್ಫೂರ್ತಿಯು ತಿಳಿಯಬರುವುದೆಂದು ತದ್ ಜ್ವರು ನುಡಿಯುತ್ತಾರೆ. ೧೮೮೬ ನೆಯ ವರ್ಷದಲ್ಲಿ ಆಕೆಯ ಪತಿಯನ್ನು ಮದರಾಸಿಗೆ ವರ್ಗ ಮಾಡಿದರು. ಅಲ್ಲಿಗೆ ಬಂದ ಮೇಲೆ ಪತಿಯ ಅಭೀಷ್ಟಾನುಸಾರವಾಗಿ ತನ್ನ ಬಾಲ್ಯಕಾಲದ ಅನೇಕ ವಿಷಯಗಳನ್ನು ಜ್ಞಾಪಕ ಮಾಡಿಕೊಂಡು, ಅವುಗಳೊಡನೆ ತನ್ನ ಕಲ್ಪನೆಗಳನ್ನು ಸೇರಿಸಿ ' ಸಗುಣಮ್ಮ' ಎಂಬ ಪ್ರಬಂಧವನ್ನು ಇಂಗ್ಲೀಷು ಭಾಷೆಯಲ್ಲಿ ರಚಿಸಿದಳು. ಆ ಪುಸ್ತಕವನ್ನು ಆಂಧ್ರ ಭಾಷೆಗೆ ತರ್ಜುಮೆ ಮಾಡಿದಾರೆ. ಅದರಲ್ಲಿ ಈ ದೇಶದ ಕ್ರೈಸ್ತವರ ಗೃಹಸ್ಥಿತಿಗಳನ್ನೂ, ನದೀ ಪರ್ವತಾರಣ್ಯಗಳ ಸೌಂದರ್ಯವನ್ನೂ ಚೆನ್ನಾಗಿ ವರ್ಣಿಸಿ ಇದೆ. ಈ ಗ್ರಂಥವು ಪೂರ್ತಿಯಾದ ಮೇಲೆ, ಆಕೆಗೆ ಒಬ್ಬ ಮಗಳು ಹುಟ್ಟಿ ಅಲ್ಪ ಕಾಲದಲ್ಲಿಯೇ ದೈವಾಧೀನಳಾದಳು. ಆ ದುಃಖದಿಂದ ಆಕೆಯು ಉತ್ಸಾಹಹೀನಳಾದಳು.