ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೃಪಾಬಾಯಿ. ೧೮೯ ಆಕೆಯ ಶರೀರದಲ್ಲಿರುವ ವ್ಯಾಧಿಯು ಇನ್ನೂ ಹೆಚ್ಚಾಯಿತು. ಆಗ ಆಕೆಯ ಪತಿಯು ಸತಿಯನ್ನು ಕರೆದುಕೊಂಡು ಬೊಂಬಾಯಿಗೆ ಹೋದನು, ಪ್ರಯಾಣಾ ಯಾಸದಿಂದ ಆಕೆಯ ವ್ಯಾಧಿಯು ಮತ್ತಷ್ಟು ಹೆಚ್ಚಾಗಲು, ಮರಳಿ ಮದರಾಸಿಗೆ ಕರೆತಂದು, ಅಲ್ಲಿ ಆ೦ಗ್ಲೀಯ ವೈದ್ಯ ಶಾಲೆಯಲ್ಲಿ ಅನೇಕ ದಿವಸಗಳು ಔಷಧೋಪ ಚಾರಗಳನ್ನು ಮಾಡಿದ ಮೇಲೆ ವ್ಯಾಧಿಯು ಸ್ವಲ್ಪ ಕಡಮೆಯಾಯಿತು, ಆದರೆ ವೈದ್ಯರು ವ್ಯಾಧಿಯು ಅಸಾಧ್ಯವಾದುದೆಂದು ಕೃಪಾಬಾಯಿಗೆ ತಿಳಿಸಿದರು. ಆಕೆಯು ಅದಕ್ಕೆ ಅಣುಮಾತ್ರವೂ ಚಿಂತಿಸಲಿಲ್ಲ. ಮಾರನೆಯವರ್ಷ ಕೃಪಾಬಾಯಿಯ ಆಸ್ತರು ಇಬ್ಬರು ಗತಿಸಿದುದರಿಂದ ಆಕೆಯ ವ್ಯಾಧಿಯು ಪುನಃ ಹೆಚ್ಚಾಯಿತು. ದೇಹಸ್ಥಿತಿಯು ಈ ಪರಿಯಾಗಿದ್ದರೂ ಆಕೆಯು ಲಕ್ಷ ಮಾಡದೆ : ಕಮಲಾ ' ಎಂಬ ಒಂದು ಪ್ರಬಂಧವನ್ನು ಬರೆಯ ಲಾರಂಭಿಸಿದಳು. ನೀಲಗಿರಿಯ ಗಾಳಿಯು ಆಕೆಗೆ ಸ್ವಲ್ಪ ಆರೋಗ್ಯವನ್ನು ಉಂಟುಮಾಡುವದೇನೋ ಎಂದು ಆಕೆಯನ್ನು ಅಲ್ಲಿಗೆ ಕಳುಹಿಸಿದರು. ಆಕೆಯ ರೋಗವು ಹೆಚ್ಚಾಗುತಲಿತ್ತೇ ಹೊರತು ಕಡಮೆಯಾಗಲಿಲ್ಲ. ನೀಲಗಿರಿಯಲ್ಲಿ ಇರುವಾಗಲೇ ಆ ಗ್ರಂಥವನ್ನು ಪೂರ್ತಿಮಾಡಿದಳು. ಆ ಪ್ರಬಂಧವು ಒಂದು ಮಾಸಪತ್ರಿಕೆಯಲ್ಲಿ ಪ್ರಚಲಿತವಾಯಿತು. ಅದರಿಂದ ಆಕೆಗೆ ಬಹು ಸಂತೋಷವು ಉಂಟಾಯಿತು. ಕೃಪಾ ಬಾಯಿಯು ಭಾರತರಮಣಿಯಾದರೂ ಆಕೆಯ ಆ೦ಗ್ಲೀಯ ಭಾಷೆಯಲ್ಲಿ ಬರೆದ ಈ ಗ್ರಂಥವನ್ನು ಓದಿದರೆ, ಯಾರೋ ಒಬ್ಬ ಪ್ರವೀಣನಾದ ಆ೦ಗ್ಲೆಯ ಗ್ರಂಥಕಾರನಿಂದ ರಚಿತವಾಗಿರಬಹುದು ಎಂದು ತೋರುವುದಂತೆ. ಈ ನಾರೀರತ್ನವು ೧೮೯೪ ನೆಯ ಇಸವಿ ಆಗಸ್ಸು ೮ ನೆಯ ತಾರೀಖಿನಲ್ಲಿ, ತನ್ನ ೩೨ ನೆಯ ವಯಸ್ಸಿನಲ್ಲಿ ಪರಲೋಕವನ್ನು ಸೇರಿದಳು. ದೇಶದ ದೌರ್ಭಾಗ್ಯದೆಶೆಯಿಂದ ಸ್ತ್ರೀಯರಿಗೆ ಉಪಕೃತವಾದ ಅನೇಕ ಗ್ರಂಥ ಗಳನ್ನು ರಚಿಸಲಿಚ್ಛೆಯುಳ್ಳ ಕೃಪಾಬಾಯಿಯು ಅಕಾಲಮೃತ್ಯುವದನಕ್ಕೆ ಗ್ರಾಸವಾದಳು.