ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೨ ಅಬ ಅಬಲಾ ಸಚ್ಚರಿತ್ರ ರತ್ನ ಮಾಲೆ. ಜನ್ಮದಂತೆಯೇ ನೀಚಗುಣಗಳುಳ್ಳವನಾಗಿದ್ದುದರಿಂದ, ರಾಜ್ಯಾಧಿಕಾರಕ್ಕೆ ತಾನು ಅನರ್ಹನಾದರೂ ಅದೃಷ್ಟವಶದಿಂದ ರಾಜ್ಯಪಾಲನವು ಲಭಿಸಿದುದಕ್ಕೆ ತೃಪ್ತ ನಾಗಿರದೆ, ತನಗೆ ರಾಜ್ಯಾಧಿಕಾರವು ಶಾಶ್ವತವಾಗಿರುವ ಬಗೆಯನ್ನು ಆಲೋಚಿ ಸಿದನು. ರಾಜಕುಮಾರನನ್ನು ಕೊಂದ ಹೊರತು ತನ್ನ ಮನೋರಥವು ಸಫಲ ವಾಗಲಾರದು ಎಂದೆಣಿಸಿ, ಆ ಕಾರ್ಯವನ್ನು ತಾನು ಒಬ್ಬನೇ ಏಕಾಂತವಾಗಿ ಮಾಡಲು ನಿಶ್ಚಯಿಸಿಕೊಂಡನು. ತನ್ನ ಮನೋಭಾವವು ಸ್ವಲ್ಪ ಹೊರಗಾದರೂ ರಜಪೂತ ಸರದಾರರು ತನ್ನನ್ನು ಕತ್ತರಿಸಿ ಹಾಕುವರು ಎಂದರಿತು, ಎಲ್ಲರಲ್ಲಿಯೂ ಬಹು ಮರ್ಯಾದೆಯಿಂದ ನಡೆದುಕೊಳ್ಳು ತಲಿದನು. ಆರಿಗೂ ಬನಬೀರನ ವಿಷಯದಲ್ಲಿ ಸಂದೇಹವು ಉಂಟಾಗಲಿಲ್ಲ. ಪಾಪಾಲೋಚನೆಗಳು ರಹಸ್ಯವಾಗಿರುವುದು ಅಸಂಭವವಾದ ಕಾರಣ, ಈ ಬನಬೀರನ ಕುತಂತ್ರಗಳನ್ನೆಲ್ಲ ಹೇಗೋ ಒಬ್ಬ ನಾಪಿತನು ತಿಳಿದುಕೊಂಡನು. ರಾಜಭಕ್ತನಾದ ಈ ನಾಪಿತನು ಬಹು ಯುಕ್ತಿಯಿಂದ ಬನಬೀರನ ದುರಾ ಲೋಚನೆಗಳನ್ನೆಲ್ಲ ಗ್ರಹಿಸುತಲಿದ್ದನು. - ಒಂದು ದಿವಸ ರಾತ್ರಿ ಅರಮನೆಯೆಲ್ಲ ನಿಶ್ಯಬ್ಧವಾಗಿತ್ತು. ಪನ್ನೆಯು ರಾಜ ಪುತ್ರನನ್ನೂ, ರಾಜ ಪುತ್ರನ ಸಮ ವಯಸ್ಕನಾದ ತನ್ನ ಪುತ್ರನನ್ನೂ ಮಲಗಿಸಿ, ತಾನು ಒಂದುಕಡೆ ಕುಳಿತುಕೊಂಡು ಯಾವುದನ್ನೋ ಹೊಲಿಯುತಲಿದ್ದಳು. ದ್ವಾರದಲ್ಲಿ ಯಾರೋ ನಡೆದಂತೆ ಕಾಲಿನ ಸಪ್ಪಳ ಕೇಳಿ ಬರಲು ಆಧಾತ್ರಿಯು ಎದ್ದು ನೋಡಿದಳು, ಮೇಲೆ ಹೇಳಿದ ನಾಪಿತನು ಅತಿ ವೇಗವಾಗಿ ಬರುತಲಿದನು. ಅವನು ಬರುವ ಬಗೆಯನ್ನು ನೋಡಿ ಪನ್ನೆಯು “ ನೀನು ಇಷ್ಟು ತ್ವರೆಯಾಗಿ ಬಂದು, ಹುಚ್ಚನಂತೆ ಆತುರಭಾವವನ್ನು ತೋರಲು ಕಾರಣವೇನು ? ಅಪ್ರಿಯ ವೇನಾದರೂ ಉಂಟೋ ? ” ಎಂದು ಕೇಳಿದಳು, ಅದಕ್ಕವನು “ ಹೌದು ಅತಿ ಕ್ರೂರವಾದ ಕಾರ್ಯವು ನಡೆಯುವುದು, ಇನ್ನೊಂದು ಗಳಿಗೆಯೊಳಗೆ ಬನ ಬೀರನು ರಾಜಕುಮಾರನನ್ನು ಕೊಲ್ಲಲು ಇಲ್ಲಿಗೆ ಬರುವನು. ” ಎನಲು, ಸನ್ನೆಯು ಬೆಚ್ಚಿ ಬಿದ್ದು " ನಾನು ಇಷ್ಟು ದಿವಸವೂ ಉಂಟಾಗಬಹುದೆಂದು ಭೀತಿಗೊಳ್ಳುತಲಿದ್ದ, ವಿಪತ್ತು ಈ ಹೊತ್ತು ಪ್ರಾಪ್ತವಾಯಿತು. ಆ ದುಷ್ಟನಲ್ಲಿ ನಾನು ಮೊದಲಿನಿಂದಲೂ ಅನುಮಾನವುಳ್ಳ ವಳಾಗಿಯೇ ಇದ್ದೆನು, ಆದರೂ ಹೆಂಗಸಾದುದರಿಂದ ಏನೂ ಮಾಡಲಾರದೆ ಸುಮ್ಮನೆ ಇದ್ದೆನು. ಯಾವುದು ಹೇಗಾದರೂ ಈಗ ರಾಜಪುತ್ರನನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ.” ಎಂದಳು. ನಾಪಿತನು ' ಈ ಕಾರ್ಯವು ಬಹು ದುರ್ಘಟವಾದುದು. ನಿನಗೆ ಯಾವುದಾದರೂ ಒಂದು ಉಪಾಯವು ತೋರಿದರೆ ಹೇಳು ನೀನು ಎಂತಹ ಕಾರ್ಯವನ್ನು ಹೇಳಿದರೂ ನಾನು ನಿರ್ವಹಿಸಬಲ್ಲೆನು. ” ಎಂದು ನುಡಿದನು. ಸನ್ನೆಯು ಸ್ವಲ್ಪ ಯೋಚಿಸಿ “ ರಾಜಕುಮಾರನನ್ನು ಸುರಕ್ಷಿತವಾದ ಸ್ಥಳಕ್ಕೆ