ತರಿಗೊಂಡ ವೆ೦ಗವಾ೦ಬ. ೧೯೭ ವೆಂಗಮಾಂಬನು ಗ್ರಂಥರಚನೆಯನ್ನು ಮಾಡುತ್ತ ಏಕಾಂತವಾಗಿ ಒಂದು ಕೊಠಡಿಯಲ್ಲಿ ಕುಳಿತುಕೊಳ್ಳು ತಲಿದ್ದಳು, ಅಲ್ಲಿಂದ ಆಕೆಯು ಹೊರಕ್ಕೆ ಬಂದ ಕೂಡಲೆ ಆಕೆಯ ಮುಖದಲ್ಲಿಯೂ ಶರೀರದಲ್ಲಿಯೂ ಸುಗಂಧವು ಕಾಣಬರು ತಲಿತ್ತು. ಇದರಿಂದ ಆಕೆಯ ಅತ್ತಿಗೆಯರಿಗೆ ಸಂಶಯವು ತೋರಿ, ಒಂದು ದಿವಸ ಆ ಕೊಠಡಿಯ ದ್ವಾರದಲ್ಲಿ ಕಾದುಕೊಂಡಿದ್ದರಂತೆ. ಅನಂತರ ಸ್ವಲ್ಪ ಹೊತ್ತಿಗೆ ಒಳಗೆ ಯಾರೋ ಪುರುಷನು ನಕ್ಕಂತೆಯೂ, ನೃತ್ಯ ಮಾಡಿದಂತೆಯೂ ಅವರಿಗೆ ಕೇಳಿಬಂತಂತೆ. , ಆಮೇಲೆ ಅವರು ತಮ್ಮ ಪತಿಗಳನ್ನು ಕರೆದು ತಾವು ಕೇಳಿದ ಸಂಗತಿಗಳನ್ನು ತಿಳಿಸಲು, ಅವರೆಲ್ಲರೂ ಸೇರಿ ವೆಂಗಮಾಂಬನನ್ನು ಕದವನ್ನು ತೆರೆಯಬೇಕೆಂದು ಕೇಳಿದರು. ಆಕೆಯು ನಿರ್ಭಯದೊಡನೆ ಕದ ವನ್ನು ತೆರೆಯಲು, ಅವರೆಲ್ಲರು ಒಳಗೆ ಹೋಗಿ ಕೊಠಡಿಯನ್ನೆಲ್ಲ ಶೋಧಿಸಿದರು. ಅಲ್ಲಿ ಯಾವ ಪುರುಷನೂ ಇರಲಿಲ್ಲ. ಆಕೆಯನ್ನು ಕೇಳಲು “ ಶ್ರೀ ಕೃಷ್ಣನು ವಿನಹ ನನ್ನ ಕೊಠಡಿಗೆ ಮತ್ತಾರು ಬರುವರು” ಎಂದು ಹೇಳಿದಳಂತೆ. ಇವೆಲ್ಲವು ಆಕೆಯ ಭಕ್ತಿಯನ್ನು ತಿಳಿಸುವ ಕಥೆಗಳಾಗಿವೆ. - ಆಕೆಯು ಶಿರೋಜಗಳನ್ನು ತೆಗೆಸದೆ ತನ್ನ ಜೀವಿತಕಾಲವನ್ನೆಲ್ಲ ಕಳೆದಳಂತೆ. ಆಕೆಯು ಬಹುದಿವಸಗಳವರೆಗೂ ಶಿರೋಜಗಳನ್ನು ತೆಗೆಯಿಸಿಕೊಳ್ಳಲಿಲ್ಲ ವಾದು ದರಿಂದ ಆಕೆಯ ಸೋದರರನ್ನು ಪ್ರಜೆಗಳು ಬಹಿಷ್ಕರಿಸುವವು ಎಂದು ಹೇಳಿದರು. ಅನಂತರ ಶಂಕರಸ್ವಾಮಿಗಳು ಆ ವೂರಿಗೆ ಬರಲು ಜಗದ್ಗುರುವಿಗೆ ಈ ವಿಷಯ ವನ್ನು ಬಿನ್ನವಿಸಿದರು. ಆಮೇಲೆ ಸ್ವಾಮಿಗಳು ವೆಂಗಮಾಂಬನನ್ನು ಕರೆಸಿ, “ ನಿನ್ನ ಶಿರೋಜಗಳನ್ನು ತೆಗೆಸಿಕೊಳ್ಳ ಬೇಕು. ” ಎಂದು ಹೇಳಿದರು. ಆಕೆಯು, “ ದೇವರು ಕೊಟ್ಟದ್ದನ್ನು ನಾವು ಏಕೆ ತೆಗೆಯಬೇಕು ? ಅದರಿಂದ ಪರಪುರುಷ ಸ್ಪರ್ಶದೋಷವು ಉಂಟಾಗುವುದು, ಮತ್ತು ಒಂದುಸಲ ಶಿರೋಜಗಳನ್ನು ತೆಗೆ ಸಿದರೆ ಪುನಃ ಅವು ಬೆಳೆಯುವವ, ಆದಕಾರಣ ಆ ಕಾರ್ಯವು ಪರಮೇಶ್ವರನಿಗೆ ಅಸಮ್ಮತವಾದುದು ಎಂದು ಸ್ಪಷ್ಟವಾಗಿ ತಿಳಿಯಬರುವದು, ಮತ್ತು ಪರಮೇಶ್ವರ ನಿಗೆ ಇಷ್ಟವಿಲ್ಲದ ಕಾರ್ಯವನ್ನು ನಾವು ಮಾಡಬಾರದು.” ಎಂದು ಹೇಳಿದಳು. ಆದರೆ ಗುರುಸ್ವಾಮಿಯು ಸುಮ್ಮನಿರದೆ ಬಂಧುಗಳಿಗೆ ಹೇಳಿದರು, ಅವರು ಆಕೆ ಯನ್ನು ಹಿಡಿದುಕೊಂಡು ಬಲವಂತವಾಗಿ ತಲೆಯ ಕೂದಲನ್ನು ತೆಗೆಸಿದರು. ಆಮೇಲೆ ಆಕೆಯು ನದಿಗೆ ಹೋಗಿ ಸ್ನಾನಮಾಡಲು ಕೇಶಗಳು ತಲೆಯತುಂಬ ಮೊದಲಿನಂತೆ ಬೆಳೆದಿದ್ದವೆಂತಲೂ, ಅದನ್ನು ನೋಡಿ ಗುರುಸ್ವಾಮಿಯೂ, ಬಂಧು ಗಳೂ ಆಶ್ಚರ್ಯಮಗ್ನರಾಗಿ ಅದರ ಮೇಲೆ ಆಕೆಯನ್ನು ಕುರಿತು ಏನೂ ಹೇಳದೆ ಸುಮ್ಮನಿದ್ದರೆಂತಲೂ ಕೆಲವರು ಹೇಳುತ್ತಾರೆ, ಮುಖ್ಯವಾಗಿ ವೆಂಗಮಾಂಬನಿಗೆ ನಿತಂತುಗಳು ಕೇಶವಸನವನ್ನು ಮಾಡಿಕೊಳ್ಳುವುದು ಅಸಮ್ಮತವು ಎಂದು ನಾವು ತಿಳಿಯಬೇಕು. ಈ ಕೃತ್ಯವು ನಮ್ಮ ದೇಶದಲ್ಲಿ ಅಂಧ ಪರಂಪರೆಯಾಗಿ ಬಂದ
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೨೨
ಗೋಚರ