೨೦೦ ಅಬಲಾ ಸಚ್ಚರಿತ್ರ ರತ್ನ ಮಾಲೆ. ದಾರರೊಡನೆ ರಣಭೂಮಿಯನ್ನು ಸವಿಾಪಿಸಿದನು, ಅಲ್ಲಿ ಸಾಗರದಂತೆ ನಿಂತಿ ರುವ ಯವನಸ್ಸನವನ್ನು ನೋಡಿ ಉದಯಸಿಂಹನು ನಿಚ್ಚೇಷ್ಟಿತನಾದನು. ಒಂದೆ ರಡು ಗಳಿಗೆಗಳು ಕಳೆದನಂತರ ರಾಣಾ ಹೇಗೋ ಚೇತರಿಸಿಕೊಂಡು, ತನ್ನ ಸೈನ್ಯಕ್ಕೆ ಯುದ್ಧ ಮಾಡಲು ಅನುಚ್ಛೆಯನ್ನು ಕೊಟ್ಟನು. ರಜಪೂತರು ಬಹು ಪರಾಕ್ರಮದೊಡನೆ ಯುದ್ಧ ಮಾಡಲು ಪ್ರಾರಂಭಿಸಿದರು. ಅವರು ಎಷ್ಟು ಪರಾ ಕ್ರಮದೊಡನೆ ಯುದ್ಧ ಮಾಡಿದರೂ ಮುಖ್ಯನಾಯಕನ ಅಧೈರ್ಯದಿಂದಲೂ, ಶತ್ರುಸೇನೆಯು ಅಸಂಖ್ಯಾಕವಾಗಿರುವುದರಿಂದಲೂ, ಜಯಲಕ್ಷ್ಮಿಯು ಅಕ್ಷರ ನನ್ನೇ ಸೇರಿದಳು. ಉದಯಸಿಂಹನು ಪರಾಜಿತನಾಗಿ ವೈರಿಗಳ ವಶನಾದನು. ಅನಂತರ ರಾಜಪುತ್ರರು ಉದಯಸಿಂಹನು ವೈರಿಗಳ ಹಸ್ತಗತನಾದುದರಿಂದ ಯಡ್ಡರಂಗವನ್ನು ಬಿಟ್ಟು ತಮ್ಮ ಮನೆಗಳಿಗೆ ಹೊರಟರು. ಅವರು ಮನೆಗಳನ್ನು ಸೇರುವಹೊತ್ತಿಗೆ, ಅವರ ಪತ್ನಿಯರು ಬೀದಿಯಬಾಗಿಲನ್ನು ಮುಚ್ಚಿ, “ ರಾಜಪುತ್ರ ವಂಶದಲ್ಲಿ ನೀವೇಕೆ ಜನ್ಮಸಿದಿರಿ ? ನಿಮ್ಮ ಮುಖವನ್ನು ನಮಗೆ ತೋರಲು ನಿಮಗೆ ನಾಚಿಕೆಯಾಗುವುದಿಲ್ಲವೆ ? ಸಂಗ್ರಾಮದಲ್ಲಿ ಜಯವನ್ನಾಗಲಿ, ಮರಣ ವನ್ನಾಗಲಿ ಪಡೆದರೆ ನಿಮಗೆ ಕೀರ್ತಿಯುಂಟಾಗುವುದು. ಆದುದರಿಂದ ಪುನಃ ರಣರಂಗಕ್ಕೆ ಹೊರಡಿ.” ಎಂದು ತಿರಸ್ಕರಿಸಿದರು. ರಾಣಾ ಸೆರೆಸಿಕ್ಕಿದನೆಂಬ ವರ್ತಮಾನವ ಕೇಳಿಬಂದಕೂಡಲೆ ರಾಜಭವನ ದಲ್ಲಿ ಆರ್ತನಾದಗಳು ತುಂಬಿಹೋದವು. ರಾಜಪುತ್ರವೀರರೆಲ್ಲರು ಒಂದು ಸಭೆ ಯನ್ನು ಮಾಡಿ ಶತ್ರುಗಳನ್ನು ಜೈಸಿ ರಾಣಾನನ್ನು ಬಿಡಿಸುವ ಉಪಾಯವನ್ನು ಆಲೋಚಿಸುತಲಿದ್ದರು. ಎಷ್ಟು ಹೊತ್ತು ಆಲೋಚಿಸಿದರೂ ಅವರಿಗೆ ಏನೂ ತೋರಲಿಲ್ಲ. ಸ್ವಲ್ಪ ಹೊತ್ತಿನವರೆಗೂ ಪುರವೆಲ್ಲ ನಿಶ್ಯಬ್ದವಾಗಿತ್ತು. ಉತ್ತರಕ್ಷಣ ದಲ್ಲಿಯೇ ಒಬ್ಬ ಸ್ತ್ರೀಯು ಅವರಿಗೆಲ್ಲ ಸಂತೋಷವನ್ನುಂಟುಮಾಡಿದಳು. ಆಕೆ ಯಾರು ? ಉದಯಸಿಂಹನ ಪಟ್ಟದರಸಿಯಾದ ವೀರಾಬಾಯಿ, ರಾಜಪುತ್ರರು ಸೋತುಹೋಗಿ, ತನ್ನ ಪತಿಯು ಶತ್ರುವಶನಾದುದರಿಂದ ಇನ್ನು ಚಿತ್ತೂರು ನಗರವು ಶತ್ರುಗಳ ಪಾಲಾಗುವುದಲ್ಲದೆ ತಾವು ಸಹ ಆ ನೀಚರ ವಶವಾಗ ಬೇಕಲ್ಲವೆ ? ಎಂದು ಯೋಚಿಸಿ, ಅದಕ್ಕೆ ತಕ್ಕ ಪ್ರತೀಕಾರವನ್ನು ಚಿಂತಿಸುತ್ತ ವಿರಾಬಾಯಿಯು ರಾಜಭವನದಲ್ಲಿ ಸಂಚರಿಸುತ್ತ ಆಯುಧಾಗಾರವನ್ನು ಪ್ರವೇ ಶಿಸಿದಳು. ಅಲ್ಲಿ ನಿರುಪಯೋಗಗಳಾಗಿ ಬಿದ್ದಿದ್ದ ಅನೇಕ ಶಸ್ತ್ರಾಸ್ತ್ರಗಳು ಆಕೆಯ ದೃಷ್ಟಿಗೋಚರಗಳಾದ ಕೂಡಲೆ, ಆಕೆಯ ಮನಸ್ಸಿನಲ್ಲಿ ಅಡಗಿದ್ದ ಶೌರ್ಯಾಗ್ನಿಯು ಪ್ರಜ್ವಲಿತವಾಯಿತು. ವಿರಾಬಾಯಿಯು ಪುರುಷವೇಷವನ್ನು ಧರಿಸಿ ಅನೇಕ ಶಸ್ತ್ರಾಸ್ತ್ರಗಳನ್ನು ಕೈಗೊಂಡು, ಉದಾಶೀನಭಾವದಿಂದ ಕುಳಿತಿದ್ದ ರಾಜಪುತ್ರರ ಸಭೆಯಲ್ಲಿ ಸಾಕ್ಷಾತ್ ದುರ್ಗೆಯಂತೆ ಪ್ರತ್ಯಕ್ಷಳಾದಳು.
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೨೫
ಗೋಚರ