ವಿರಾಬಾಯಿ. ೨೦೧ ಸುಕುಮಾರಳಾದ ವಿರಾಬಾಯಿಯು ಪುರುಷವೇಷದೊಡನೆ ಶಸ್ತ್ರಸಹಿತ ಳಾಗಿ ಪ್ರವೇಶಿಸಿದುದನ್ನು ನೋಡಿ ರಾಜಪುತ್ರರು ಆಶ್ಚರ್ಯಮಗ್ನರಾದರು. ಸ್ವಾತಂತ್ರೋಚ್ಛೆಯೂ, ಸ್ವಧರ್ಮಾಭಿಮಾನವೂ ಹೃದಯದಲ್ಲಿ ತುಂಬಿರಲು ತೇಜಃ ಪುಂಜದಂತೆ ಪ್ರಕಾಶಿಸುತಲಿರುವ ತಮ್ಮ ರಾಣಿಯನ್ನು ನೋಡಿ ಅವರು ಸ್ವಲ್ಪ ಭೀತ ರಾದರು. ಆಕೆಯು ರೋಷಸಂಭ್ರಮಗಳೊಡನೆ, “ ಶೂರಾಗ್ರೇಸರರಾದ ರಜ ಪೂತರೇ ! ನೀವು ಅಧೋಮುಖರಾಗಿ ಕುಳಿತುಕೊಂಡು ಯಾರಿಗಾಗಿ ನಿರೀಕ್ಷೆ ಸುತಲಿರುವಿರಿ? ನಿಮ್ಮಲ್ಲಿರುವ ಶೌರ್ಯಾದಿ ಕ್ಷತ್ರಿಯಗುಣಗಳು ಎಲ್ಲಿ ಹೋದವು ? ಚಿತ್ತೂರು ಸಂಸ್ಥಾನವು ಈಗಲೆ ಪೌರುಷಹೀನವಾಯಿತೆ ? ಚಿತ್ತೂರಿನ ರಾಜ ಪುತ್ರ ವೀರರೆಲ್ಲರು ಕೇವಲ ಶ್ವಾಸೋಚ್ಛಾಸವುಳ್ಳ ಹುಳಗಳಾಗಿ ಹೋದರೆ ? ವೀರ ಜನನಿಯಾದ ಭರತವರ್ಷವು ಈದಿನವೇ ನಿಸ್ಸೇಜವಾಯಿತೆ ? ನೀವು ಶೂರವಂಶ ದಲ್ಲಿ ಏಕೆ ಜನಿಸಿದಿರಿ ? ಹೀಗೆ ಜನಿಸಿ ಶತ್ರುಗಳಿಗೆ ಹೇಗೆ ಬೆನ್ನನ್ನು ತೋರಿಸಿದಿರಿ ? ಈಗ ನೀವೆಲ್ಲರು ಇಲ್ಲಿ ಸೇರಿ ಆಲೋಚಿಸುತಲಿರುವುದೇನು ? ಚಿತ್ತೂರಿಗೆ ಅಲಂಕಾರ ಪ್ರಾಯನೂ, ನನಗೆ ಪ್ರಾಣಸಮಾನನೂ ಆದ ಮಹಾರಾಜನನ್ನು ಶತ್ರುಗಳು ಸೆರೆಹಿಡಿದಿರಲು, ಹೆಂಗಸರಂತೆ ಕೈಗೆ ಬಳೆಗಳನ್ನು ತೊಟ್ಟು ಕೊಂಡು ಮನೆಯಲ್ಲಿರು ವುದಕ್ಕೆ ನಿಮಗೆ ಲಜ್ಜೆಯಿಲ್ಲವೆ ? ನಾನು ಈ ವಿಧವಾಗಿ ನಿಮ್ಮನ್ನು ಬಹಿರಂಗವಾಗಿ ಮಾಡುವ ಅವಮಾನವನ್ನು ಸೈರಿಸುವುದಕ್ಕಿಂತಲು ರಣರಂಗದಲ್ಲಿ ಶತ್ರುಗಳೊಡನೆ ಯುದ್ದ ಮಾಡಿ ಮಡಿಯುವುದು ಸರ್ವೋತ್ತಮವಲ್ಲವೆ ? ಶೂರವರರೇ ! ಇನ್ನು ಉಪೇಕ್ಷೆಯನ್ನು ಮಾಡಬೇಡಿ, ನಿಮಗೆ ಉಂಟಾದ ಪೌರುಷಹೀನತೆಯೆಂಬ ಕಳಂಕವನ್ನು ಈಗಲೆ ತೊಳೆದು ನಿನಗಿರುವ ಶೌರ್ಯಧೈರ್ಯಾದಿಗುಣಗಳನ್ನು ತೋರಲು ಇದೇ ಸುಸಮಯ. ಮತ್ತೊಬ್ಬರಿಗಾಗಿ ಕಾದಿರಲೇಕೆ ? ಒರೆಗಳಿ೦ದ ನಿಮ್ಮ ಖಡ್ಗಗಳನ್ನು ಹಿರಿಯಿರಿ, ' ಜಯಹರ ” “ ಜಯಮಹಾದೇವ' ಎಂಬ ರಣಘೋಷದೊಡನೆ, ಅತಿ ಶೀಘ್ರವಾಗಿ ಹೊರಟು ಯುದ್ಧಭೂಮಿಯಲ್ಲಿ ನಿಮ್ಮ ನಿಮ್ಮ ಪರಾಕ್ರಮವನ್ನು ತೋರಿರಿ, ನಾನು ಯುದ್ಧಕ್ಕೆ ಹೊರಡುತಲಿದೇನೆ, ೨ ಎಂದು ನುಡಿದು ವಿರಾಬಾಯಿಯು ಅಶ್ವವಾರೋಹಿಸಿದಳು. ರಾಜಪುತ್ರರೆಲ್ಲರು ಯುದ್ಧ ಸನ್ನದ್ದರಾದರು. ಕುರಿಗಳಂತಿದ್ದ ಆ ವೀರರು, ವಿರಾಬಾಯಿಯ ಪ್ರೋತ್ಸಾಹವಾಕ್ಯಗಳಿ೦ದ ಹುಲಿಗಳಾದರು ; ಆ ಸಭೆಯಲ್ಲಿದ ಶೂರರೆಲ್ಲರು ಜಯಘೋಷವನ್ನು ಮಾಡಿ, ' ಯುದ್ದದಲ್ಲಿ ಶತ್ರುಗಳನ್ನು ಕಡಿಯು ವೆವು. ಇಲ್ಲದಿದ್ದರೆ ಅವರಿಂದ ಕಡಿಯಲ್ಪಡುವೆವೇ ಹೊರತು ಶತ್ರುಗಳಿಗೆ ಬೆನ್ನನ್ನು ಮಾತ್ರ ತೋರುವುದಿಲ್ಲ. ” ಎಂದು ಪ್ರತಿಜ್ಞೆಯನ್ನು ಮಾಡಿದರು. ರಾಜ ಪುತ್ರರ ವೀರಾವೇಶವನ್ನೂ, ಸ್ಥಿರಪ್ರತಿಜ್ಞೆಯನ್ನೂ ನೋಡಿ ವಿರಾ ಬಾಯಿಯು ಅತ್ಯಂತ ಧೈರ್ಯದೊಡನೆ ಯುದ್ಧ ಭೂಮಿಗೆ ಹೊರಟಳು. ಆಕೆಯು 17
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೨೬
ಗೋಚರ