ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೨ ಅಬಲಾ ಸಚ್ಚರಿತ್ರ ರತ್ನ ಮಾಲೆ. ತನ್ನ ಸೈನ್ಯದೊಡನೆ ಕೃಥಾತುರವಾದ ಹೆಣ್ಣು ಸಿಂಹದಂತೆ ಆಕಸ್ಮಿಕವಾಗಿ ಶತ್ರು ಸೈನ್ಯದಮೇಲೆ ಬಿದ್ದಳು. ವಿಜಯಾನಂದದಲ್ಲಿ ಮಗ್ನರಾಗಿದ್ದ ಮೊಗಲರು ಈ ಆಕಸ್ಮಿಕ ಭಯದಿಂದ ಧೈರ್ಯ ಹೀನರಾಗಿ ನಾಲ್ಕು ಕಡೆಗೂ ಓಡಲಾರಂಭಿಸಿದರು. ವಿರಾಬಾಯಿಯ ಸೈನಿಕರು ಓಡಿಹೋಗುವವರನ್ನು ತಡೆದು ಯುದ್ಧ ಮಾಡಿ ಕೊಲ್ಲುತಲಿದ್ದರು. ಪ್ರಳಯಾಗ್ನಿಯನ್ನು ಹೊಲಿದ ವಿರಾಬಾಯಿಯ ಪರಾಕ್ರಮ ವನ್ನು ನೋಡಿ ಅಕ್ಷರನು ನಿಚ್ಚೇಷ್ಟಿತನಾದನು. ಸಮಯವನ್ನು ನೋಡಿಕೊಂಡು ರಾಜಪುತ್ರರು ಕಾಲಕಿಂಕರರಂತೆ, ಎಣಿಸಲು ಅಶಕ್ಯವಾದಷ್ಟು ಜನಯವನರನ್ನು ಯಮಪುರಿಗೆ ಕಳುಹಿಸಿದರು. ಬಾದಷಹನು ತನ್ನ ವಿಜಯವೆಲ್ಲ ಒಂದುಕ್ಷಣ ಮಾತ್ರದಲ್ಲಿ ಅಪಜಯವಾದುದನ್ನು ಕಂಡು, ಸಂಧಿಯನ್ನು ಸೂಚಿಸುವ ಬಾವಟೆ ಯನ್ನು ಹಿಡಿದನು. ಅನಂತರ ಉದಯಸಿಂಹನನ್ನು ಸಹ ಬಂಧಮುಕ್ತನನ್ನಾಗಿ ಮಾಡಿದನು. ಪರಾಕ್ರಮವತಿಯಾದ ವಿರಾಬಾಯಿಯಿಂದ ಮಹಾಬಲವಂತ ನಾದ ಅಕ್ಟರ್ ಬಾದಷಹನು ಸಹ ಸೋತು ಹೋದನು. ಅನಂತರ ಹತಶೇಷ ರಾದ ಸೈನಿಕರೊಡನೆ ಬಾದಷಹನು ತನ್ನ ನಗರಕ್ಕೆ ಹೊರಟನು. ಆಮೇಲೆ ರಜ ಪೂತರು ವಿಜಯಾನಂದದಿಂದ ಸಿ೦ಹನಾದಗಳನ್ನು ಮಾಡುತ್ತ, ವಿರಾಬಾಯಿ ಉದಯಸಿಂಹರೊಡನೆ ಚಿತ್ತೂರನ್ನು ಪ್ರವೇಶಿಸಿದರು. ತತ್ತೂರ್ವದಲ್ಲಿ ತೇಜೋ ಹೀನವಾಗಿದ್ದ ಚಿತ್ತೂರುನಗರವು ರಾಣಿಯ ವಿಜಯವಾರ್ತೆಯನ್ನು ಕೇಳಿ ದಿವ್ಯ ತೇಜವನ್ನು ಧರಿಸಿತು. ಪುರಜನರು ಪರಮಾನಂದ ಭರಿತರಾಗಿ ಪಟ್ಟಣವನ್ನು ಶೃಂಗರಿಸಿ, ವಿರಾಬಾಯಿಯನ್ನು ಹೊಗಳುತ್ತ, ಮಂಗಳವಾದ್ಯಗಳೊಡನೆ ರಾಣಾ ಯವರನ್ನೂ, ರಾಣಿಯವರನ್ನೂ ಎದುರ್ಗೊ೦ಡು, ಅವರ ಮೇಲೆ ಪುಷ್ಪವೃಷ್ಟಿ ಯನ್ನು ಸುರಿಸುತ್ತ, ಆ ದಂಪತಿಗಳನ್ನು ಅರಮನೆಗೆ ಪ್ರವೇಶಮಾಡಿಸಿದರು. ಜನ್ಮಮಧ್ಯ ದಲ್ಲಿ ಯುದ್ದವೆಂಬುದನ್ನೇ ಅರಿಯದ ವಿರಾಬಾಯಿಯು, ಒಂದು ಕ್ಷಣ ಮಾತ್ರದಲ್ಲಿ ತನ್ನ ಶೌರ್ಯದಿಂದ ' ಶೂರವನಿತೆ ” ಎಂಬ ಹೆಸರನ್ನು ಪಡೆದು, ಪ್ರಸ್ತುತಚರಿತ್ರೆಗೆ ಶಿರೋಲೇಖನವಾಗಿರುವ ಶ್ಲೋಕಾರ್ಥವನ್ನು ಸಾರ್ಥಕ ಗೋಳಿಸಿದಳು.