* ಆವಡಾಬಾಯ. ವಿದ್ಯಾ ದದಾತಿ ವಿನಯಂ ವಿನಯಾದ್ಯಾತಿಪಾತ್ರತಾಂ. ಈಕೆಯು ಮಹಾರಾಷ್ಟ್ರ ಬ್ರಾಹ್ಮಣ ಯುವತಿ, ರತ್ನಗಿರಿ ಎಂಬ ಗ್ರಾಮದಲ್ಲಿ ರ್ಸ ೧೮೬೯ ನೆಯ ಇಸವಿಯಲ್ಲಿ ಈಕೆಯು ಜನ್ನಿಸಿದಳು. ಆವಡಾಬಾಯಿಯ ತಂದೆಯ ಹೆಸರು ರಾವುಬಹದೂರು ವಿಷ್ಣು ಮೊರೇಶ್ವರಭಿಡೇ, ಈತನು ಅಸಿ ಸ್ಟೆಂಟ್ ಕಲೆಕ್ಟರ್ ಕೆಲಸವನ್ನು ನೋಡುತಲಿದ್ದನು, ಆವಡಾಬಾಯಿಯು ಹುಟ್ಟಿದ ಎರಡುಮೂರು ತಿಂಗಳಿಗೆ ಈತನನ್ನು ನಾಸಿಕಕ್ಕೆ ವರ್ಗಮಾಡಿದರು. ಈಕೆಗೆ ನಾಲ್ಕು ವರ್ಷಗಳು ತುಂಬುವವರೆಗೂ ಅಲ್ಲಿಯೇ ಇದ್ದರು. ಅನಂತರ ಅವರು ಸೂರತ್ ನಗರಕ್ಕೆ ಬಂದರು. ಆವೂರಿನ ನೀರು ಅವರಿಗೆ ಅನಾರೋಗ್ಯ ವನ್ನುಂಟುಮಾಡಿದುದರಿಂದ ಆತನು ತನ್ನ ಕುಟುಂಬವನ್ನು ಪೂನಾನಗರಕ್ಕೆ ಕಳುಹಿದನು. ಆವಡಾಬಾಯಿಯು ತನ್ನ ಜನ್ಮವನ್ನೆಲ್ಲ ಇಲ್ಲಿಯೇ ಕಳೆದಳು. ಈಕೆಯು ಬಾಲ್ಯದಲ್ಲಿ ಸ್ವಲ್ಪ ಓದುವುದನ್ನೂ, ಬರೆಯುವುದನ್ನೂ ಮಾತ್ರವೇ ಕಲಿತಿದ್ದಳು, ಈಕೆಯಲ್ಲಿ ಅತಿ ಬಾಲ್ಯದಿಂದಲೂ, ಸಹನೆ, ಶುಚಿ ಎಂಬುವು ಕಂಡುಬರುತಲಿದ್ದವು. ೧೮೮೦ ನೆಯ ಇಸವಿಯಲ್ಲಿ ಸೋಲಾ ಪುರ ನಿವಾಸಿಗಳಾದ ದಾದಾ ಸಾಹೇಬ್ ಜೋಗ್ಯವರ ಪುತ್ರನಾದ ಅಪ್ಪಾಸಾಹೇಬ್ ಎಂಬಾತನಿಗೆ ಆವಡಾ ಬಾಯಿಯನ್ನು ಕೊಟ್ಟು ವಿವಾಹ ಮಹೋತ್ಸವವನ್ನು ಬೆಳೆಸಿದರು. ವಿವಾಹವಾದ ಆರುತಿಂಗಳಿಗೆ ಆಕೆಯ ಅತ್ತೆ ಮಾವಂದಿರು ಗತಿಸಿದುದರಿಂದ ಜನರು ಆವಡಾ ಬಾಯಿಯ ಪಾದಗುಣ ಫಲವೆಂದು ಆಕೆಯನ್ನು ನಿಂದಿಸಿದರು. ಅನಂತರ ೧೮೮೭ ನೆಯ ಇಸವಿಯಲ್ಲಿ ಆವಡಾಬಾಯಿಗೆ ದುಸ್ಸಹವಾದ ವೈಧವ್ಯವು ಸಂಪ್ರಾಪ್ತವಾಯಿತು. ಪತಿಯು ಗತಿಸುವ ಸಮಯಕ್ಕೆ ಆವಡಾಬಾಯಿಗೆ ಹದಿ ನೇಳು ವರ್ಷಗಳ ವಯಸ್ಸಾಗಿತ್ತು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಗಳಿಗೆ ಉಂಟಾದ ವೈಧವ್ಯದುಃಖವನ್ನು ನೋಡಿ ಭಿಡೇಯು ಆವಡಾಬಾಯಿಯನ್ನು ವಿದ್ಯಾವತಿಯನ್ನಾಗಿ ಮಾಡಿ, ಆ ವಿದ್ಯೆಯಿಂದ ಉಂಟಾಗುವ ಆನಂದದಿಂದ, ಆಕೆಯ ವೈಧವ್ಯದುಃಖವನ್ನು ಮರೆಯುವಂತೆ ಮಾಡಲು ಎಣಿಸಿದನು. ಹಿಂದೂದೇಶದ ಹಿತಚಿಂತಕರಲ್ಲಿ ಒಬ್ಬನಾದ ಸರ್ ವಿಲಿಯಂ ವೇಡರ್ ಬರ್ ದೊರೆಯು ಪೂನಾ ನಿವಾಸಿಗಳನ್ನು ಪ್ರೋತ್ಸಾಹಗೊಳಿಸಿ, ಅವರಿಗೆ ಅನೇಕವಿಧ
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೨೮
ಗೋಚರ