ಆವಜಾ ಬಾಯಿ. ೨೦೫ ಆವಡಾಬಾಯಿಯು ಬರೆದ ಉತ್ತರ :-ನನಗೆ ಇಲ್ಲಿ ಕಲಿಸುವ ವಿದ್ಯೆ ಯಿಂದ, ನಾನು ಉತ್ತರೋತ್ತರ ವಿಶೇಷ ಪ್ರಯೋಜನವನ್ನು ಹೊಂದುವೆನು ಎಂದು ಎಣಿಸುವೆನು, ನನ್ನ ಸಂಸಾರ ಪಾಶಗಳನ್ನು ಭಗವಂತನು ಕತ್ತರಿಸಿದುದ ರಿಂದ, ನನ್ನ ಜನ್ಮವನ್ನು ಧರಾರ್ಥವಾದ ಸರೋಪಕಾರದಲ್ಲಿಯೇ ಕಳೆಯಲು ಎಣಿಸಿದೆನು. ನಾನು ಈಗ ಕಲಿಯುತಲಿರುವ ವಿದ್ಯೆಯು ನನ್ನ ಕೋರಿಕೆಗೆ ಸಹಾಯಕಾರಿಯಾಗುವುದು, ಮನೆಯ ಲೆಕ್ಕಗಳನ್ನು ನೋಡಿಕೊಳ್ಳುವುದರಲ್ಲಿ ತಾಯಿಗೆ ಸಹಾಯಕಳಾಗುವೆನು. ಇಂಗ್ಲಿಷು ಗ್ರಂಥಗಳನ್ನು ಓದಿ ಅದರ ಅರ್ಥವನ್ನು ಆಕೆಗೆ ತಿಳಿಸುವೆನು. ಮಹಾರಾಷ್ಟ್ರ ಸ್ತ್ರೀಯರಿಗಾಗಿ ಇಂಗ್ಲಿಷ್ ಗ್ರಂಥ ಗಳನ್ನು ಮಹಾರಾಷ್ಟ್ರದಲ್ಲಿ ಬರೆಯುವೆನು. ನಮ್ಮ ತಾಯಿಗೆ ಸಂಸ್ಕೃತ ಗ್ರಂಥ ಗಳ ಅರ್ಥವನ್ನು ವಿವರಿಸುವೆನು, ಪುರಾಣಗಳನ್ನು ಕೇಳಲು ಆಕೆಯು ಇಷ್ಟ ಪಡುವಳಾದುದರಿಂದ ಆಕೆಗಾಗಿ ಪುರಾಣ ಪಠನವನ್ನು ಮಾಡಿ ಆಕೆಯನ್ನು ತೃಪ್ತಿ ಪಡಿಸುವೆನು. ನಾನು ಸಂತಾನವತಿಯಾಗುವುದು ಪರಮೇಶ್ವರನಿಗೆ ಅಸಮ್ಮತವಾದರೂ, ನನ್ನ ಅಕ್ಕತಂಗಿಯರ, ಮತ್ತು ಸ್ನೇಹಿತೆಯರ ಮಕ್ಕಳಿಗೆ ವಿದ್ಯಾ ಬುದ್ಧಿಗಳನ್ನು ಕಲಿಸುವೆನು, ಈ ಪ್ರಕಾರವಾಗಿ ನನ್ನ ಕಾರವು ಅವರಿಗೆ ಉಪಯೋಗವಾದರೆ ನನ್ನ ಜನ್ಮವು ಸ್ವಲ್ಪ ಸಾರ್ಥಕವಾಗುವುದು, ನನ್ನಂತೆ ಸೌಭಾಗ್ಯಹೀನೆಯರಾದ, ಅವಿದ್ಯಾವತಿಯರಾದ ಅನೇಕ ಬಾಲಿಕೆಯರು ವಿದ್ಯಾ ಯುತರಾದ ತಂದೆ, ಸೋದರರು ಮೊದಲಾದವರೊಡನೆ ಉಪಯುಕ್ತವಾದ ವಿಷಯಗಳನ್ನು ಮಾತನಾಡಲು ಅರಿಯದೆ ಮೌನವಾಗಿರುವರು. ನಾನು ಅವರಂತೆ ಮೌನವಾಗಿರುವುದು ಅನವಸರವಾದುದರಿಂದ ನನಗೆ ತಿಳಿದ ಶಾಸ್ತ್ರ ವಿಷಯಗಳನ್ನು ಅವರೊಡನೆ ಮಾತನಾಡುವೆನು. ನನಗೆ ಇದೇ ವಿದ್ಯೆಯಿಂ ದುಂಟಾಗುವ ಆನಂದವು. ನಾನು ಈಗ ಅಭ್ಯಸಿಸುತಲಿರುವ ವಿದ್ಯೆಯಿಂದ ನನಗೆ ಸ್ವಲ್ಪ ದ್ರವ್ಯಾರ್ಜನಾ ಶಕ್ತಿಯು ಉಂಟಾಗುವುದು. ಆ ದ್ರವ್ಯದಿಂದ ಬಡವರಿಗೆ ಸಹಾಯಮಾಡುವೆನು. ಏತದ್ವಿಷಯವಾಗಿ ನನಗೆ ಸ್ವಲ್ಪ ಸ್ವತಂತ್ರತೆಯು ಉಂಟಾಗುವುದು. ನನ್ನ ಸ್ವದೇಶ ಸೋದರೀಮಣಿಗಳು ಯಾವಯಾವ ವಿದ್ಯೆಯನ್ನು ಕಲಿಯ ಲಪೇಕ್ಷಿಸುವರೋ, ಆವಿದ್ಯೆ ಯನ್ನು ಅವರಿಗೆ ಶ್ರದ್ಧೆಯಿಂದ ಕಲಿಸುವೆನು. ನಾನು ಮಾಡಲು ಎಣಿಸಿದ ಕಾವ್ಯಗಳಲ್ಲಿ ಇದೇ ಮುಖ್ಯವಾದುದು. ಡ್ರಾಯಿಂಗ್ ಮೊದ ಲಾದ ಇತರ ವಿದ್ಯೆಗಳನ್ನು ಕಲಿಯುವುದರಿಂದ ನನಗೆ ಮನೋಲ್ಲಾಸ ವುಂಟಾ ಗುವುದು. ಈವಿಧವಾಗಿ ಸುಖಸಂತೋಷಗಳೊಡನೆ, ಸ್ವತಂತ್ರಳಾಗಿ ಎಂದರೆ ಇತರರಿಗೆ ಭಾರವಿಲ್ಲದೆ ನನ್ನ ಜೀವಿತವನ್ನು ಕಳೆಯುವ ಶಕ್ತಿಯು ನನಗೆ ಇಲ್ಲಿ ಹೇಳುವ ವಿದ್ಯೆಯಿಂದ ಉಂಟಾಗುವುದು.
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೩೦
ಗೋಚರ