ಡಾಕ್ಟರು ಆನ೦ದೀಬಾಯಿ ಜೋಶಿ. ೨೧4 ಯಲ್ಲಿಯೇ ಇರುತಲಿದ್ದಳಾದುದರಿಂದ ಯಮುನೆಯನ್ನು ಯಾರು ಬೈದರೂ, ಹೊಡೆದರೂ ಆಕೆಯು ಅವರೊಡನೆ ಜಗಳವಾಡುತಲಿದ್ದಳು. . ಯಮುನೆಯು ಬಾಲ್ಯದಿಂದಲೂ ಒಂದು ನಿಮಿಷವಾದರೂ ಸುಮ್ಮನಿದದೆ ಯಾವುದಾದರೂ ಒಂದು ಕೆಲಸವನ್ನು ಮಾಡುತಲಿರುವ ಸ್ವಭಾವವುಳ್ಳವಳಾಗಿದ್ದಳು. ಯಮುನೆಗೆ ಏಳುವರ್ಷಗಳಾದೊಡನೆಯೆ ಆಕೆಯ ಜನನೀಜನಕರಿಗೆ ಮಗಳವಿವಾಹವನ್ನು ಕುರಿತು ಚಿಂತೆಯು ಉಂಟಾಯಿತು, ಅವರು ಅನೇಕ ಸ್ಥಳಗಳಲ್ಲಿ ಹುಡುಕತ ಲಿರಲು, ಒಬ್ಬ ಗೃಹಸ್ಥನು ಠಾಣಾ ಎಂಬ ಗ್ರಾಮದಿಂದ ಕಲ್ಯಾಣಕ್ಕೆ ಬಂದನು. ಆತನೊಡನೆ ಗಣಪತಿರಾಯನು ತನ್ನ ಮಗಳ ವಿವಾಹವಿಷಯವನ್ನು ಕುರಿತು ಪ್ರಸ್ತಾಪಿಸಲು, ಆತನು 'ಠಾಣಾದಲ್ಲಿರುವ ಪೋಸ್ಟು ಮಾಸ್ಟರ್ ಯವರ ಹೆಂಡತಿಯು ಕಾಲವಾದಳು ; ನೀವು ಆತನ ಬಳಿಗೆ ಹೋಗಿ ವಿಚಾರಿಸಿ. ' ಎಂದು ಹೇಳಿದನು. ಆ ಗೃಹಸ್ಸನು ಹೇಳಿದ ಪೋಸ್ಟು ಮಾಸ್ಟರು ಗೋಪಾಲವಿನಾಯಕ ಜೋಶಿ ಸಂಗಮನೇರ್‌ಕರ್ ಎಂಬಾತನು. ಈತನು ತನ್ನ ಬಾಲ್ಯದಲ್ಲಿ ತನ್ನ ಅಕ್ಕನೊಡನೆ ವಿದ್ಯಾಭ್ಯಾಸ ಮಾಡುತಲಿದ್ದುದರಿಂದ, ಸ್ತ್ರೀಯರಮೇಧಾಶಕ್ತಿಯು ಪುರುಷರ ಬುದ್ದಿಯೊಡನೆ ಸಮಾನವಾದುದು ಎಂಬುದನ್ನು ಅರಿತಿದ್ದನು. ಈ ಗೋಪಾಲ ರಾವಿಗೆ ಚಿಕ್ಕತನದಲ್ಲಿಯೇ ಪ್ರಥಮವಿವಾಹವು ನಡೆಯಿತು. ಆತನು ತನ್ನ ಪತ್ನಿಯನ್ನು ವಿಶೇಷ ವಿದ್ಯಾವತಿಯನ್ನಾಗಿ ಮಾಡಿ ಸ್ತ್ರೀವಿದ್ಯಾ ಲಾಭಗಳನ್ನು ಲೋಕಕ್ಕೆ ತೋರಬೇಕು' ಎಂದು ನಿಶ್ಚಯಿಸಿ, ಅತ್ಯಂತ ಶ್ರದ್ದೆಯೊಡನೆ ತನ್ನ ಸತಿಗೆ ವಿದ್ಯೆಯನ್ನು ಕಲಿಸುತಲಿದ್ದನು. ಆದರೆ ಆಕೆಯು ಗೃಹಕಾರ್ಯಗಳಲ್ಲಿ ಅತ್ತೆ ಹೆಣ್ಣು ಮಕ್ಕಳ ದೆಸೆಯಿಂದ ವಿಶೇಷ ಸೊಸೆತನವನ್ನು ಅನುಭವಿಸುತ ಲಿದ್ದುದರಿಂದ ವಿದ್ಯಾಭ್ಯಾಸವನ್ನು ಮಾಡಲು ಆಗಲಿಲ್ಲ. ಹೀಗಿರಲು ಆಕೆಯು ಹದಿಮೂರನೆಯ ವರ್ಷದಲ್ಲಿಯೇ ಒಬ್ಬ ಪುತ್ರನನ್ನು ಪಡೆದು ಸ್ವರ್ಗಸ್ಥಳಾದಳು. ಗೋಪಾಲರಾಯನು ಪ್ರಥಮಭಾರ್ಯೆಯು ಸ್ವರ್ಗಸ್ಥಳಾದ ಮೇಲೆ ಉದಾಸೀನ ಭಾವದಿಂದ ದ್ವಿತೀಯವಿವಾಹವನ್ನು ಮಾಡಿಕೊಳ್ಳಲಿಲ್ಲ. ಪ್ರಥಮಪತ್ನಿಯು ಜೀವಿಸಿರುವಕಾಲದಲ್ಲಿಯೇ ಈತನಿಗೆ ಪೋಸ್ಟಾಫೀಸಿನಲ್ಲಿ ಒಂದು ಚಿಕ್ಕ ಕೆಲಸವು ದೊರೆತು, ಅಲ್ಪ ಕಾಲದಲ್ಲಿಯೇ ಸ್ವತಂತ್ರವಾದ ಪೋಸ್ಟ್ ಮಾಸ್ಟರ್ ಕೆಲಸವಾಯಿತು. ಆತನು ತನ್ನ ಪ್ರಥಮಪತ್ನಿಗೆ ಉಂಟಾದ ಸೊಸೆತನವನ್ನು ನೋಡಿ ಚಿಕ್ಕತನ ದಲ್ಲಿಯೇ ಹೆಣ್ಣು ಮಕ್ಕಳಿಗೆ ವಿವಾಹವನ್ನು ಮಾಡಿ ಅತ್ತೆಯ ಮನೆಗೆ ಕಳುಹಿಸುವ ತಾಯಿತಂದೆಗಳನ್ನೂ, ಪರರ ಮಕ್ಕಳನ್ನು ಅತಿ ಕ್ರೂರವಾಗಿ ಹಿಂಸಿಸುವ ಅತ್ತೆಯರನ್ನೂ ದೂಷಿಸುತಲಿದ್ದನಲ್ಲದೆ, ಆ ಕಾರಣದಿಂದಲೇ ಪುನಃ ವಿವಾಹವನ್ನು ಮಾಡಿಕೊಳ್ಳಲು ಇಷ್ಟ ಪಡಲಿಲ್ಲ. ಈ ವಿಧವಾಗಿ ಕೆಲವು ಕಾಲ ಕಳೆದಮೇಲೆ ಗಣಪತಿರಾಯನು ತಾನಾಗಿಯೇ ಬಂದು ತನ್ನ ಪುತ್ರಿಯನ್ನು ವಿವಾಹಮಾಡಿ
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೩೮
ಗೋಚರ