ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಬಲಾ ಸಚ್ಚರಿತ್ರ ರತ್ನಮಾಲೆ. ಭಂಡಾರು ಅಚ್ಚಮಾಂಬ. ಟ ಈ ಕಾಂತಾಮಣಿಯು ೧೮೭೪ ನೆಯ ಇಸವಿಯಲ್ಲಿ ಕೃಷ್ಣಾ ಮಂಡಲಕ್ಕೆ ಸೇರಿದ ಮುನಗಾಲ ಸಂಸ್ಥಾನಕ್ಕೆ ದಿವಾನರಾಗಿದ್ದ ಕೊಮರಾಜು ವೆಂಕಟಪ್ಪ ಯ್ಯನ ಧರ್ಮಪತ್ನಿಯಾದ ಗಂಗಮಾಂಬನಲ್ಲಿ ನಂದಿಗ್ರಾಮವೆಂಬ ಗ್ರಾಮದಲ್ಲಿ ಜನ್ನಿಸಿದಳು. ಆರು ವರ್ಷಗಳು ತುಂಬುವುದರೊಳಗೆ ೧೮೮೦ ನೆಯ ಇಸವಿ ಯಲ್ಲಿ ಈಕೆಗೆ ಪಿತೃವಿಯೋಗದುಃಖವು ಸಂಭವಿಸಿತು, ಅನಂತರ ಇವರ ತಾಯಿ ಯಾದ ಗಂಗಮಾಂಬನು ಅಚ್ಚ ಮಾಂಬನನ್ನೂ, ತಮ್ಮನಾದ ಲಕ್ಷ್ಮಣರಾಯ ನನ್ನೂ ಕರೆದುಕೊಂಡು ಮಧ್ಯ ಪ್ರಾಂತ್ಯಗಳಲ್ಲಿ ಇದ್ದ ತಮ್ಮ ಬಲ ಅಣ್ಣನ ಮನೆಗೆ ಹೋದರು. ಅಚ್ಚಮಾ೦ಬನ ಬಲಸೋದರಮಾವನಾದ ಭಂಡಾರು ಮಾಧವ ರಾಯನಿಗೆ ಪ್ರಥಮ ಕಳತ್ರವಿಯೋಗವುಂಟಾಗಲು, ಈಕೆಯ ತಾಯಿಯು ಈಕೆ ಯನ್ನು ಆತನಿಗೆ ಕೊಟ್ಟು ವಿವಾಹವನ್ನು ಮಾಡಿದಳು. ವಿವಾಹಕಾಲಕ್ಕೆ ಈಕೆಗೆ ಹತ್ತು ವರುಷ ವಯಸ್ಸಾಗಿತ್ತು. ಆಗೈ ಈಕೆಗೆ ಅಕ್ಷರಜ್ಞಾನವೇ ಇರಲಿಲ್ಲ. ಅನಂತರವೂ ಈಕೆಯು ಪಾಠಶಾಲೆಗೆ ಹೋದವಳಲ್ಲ. ತಮ್ಮನು ಮನೆಯಲ್ಲಿ ಆಂಧ್ರಭಾಷೆಯನ್ನೂ, ಹಿಂದೀ ಭಾಷೆಯನ್ನೂ ಅಭ್ಯಸಿಸುತಿರಲು, ಈಕೆಯು ಸ್ವಾಭಾವಿಕವಾದ ವಿದ್ಯಾಭಿಲಾಷೆಯಿಂದ ತಮ್ಮನೊಡನೆ ವಿದ್ಯಾಭ್ಯಾಸವನ್ನು ಮಾಡಲು ಪ್ರಾರಂಭಿಸಿದಳು, ಈಕೆಯ ಪತಿಯು ಪೂರ್ವಾಚಾರ ಪರಾಯಣ ನಲ್ಲದಕಾರಣ ಪತ್ನಿಯ ವಿದ್ಯಾಭ್ಯಾಸಕ್ಕೆ ಪ್ರತಿಬಂಧವನ್ನು ಕಲ್ಪಿಸದೆ ಪ್ರೋತ್ಸಾಹ ವನ್ನುಂಟುಮಾಡುತಲಿದ್ದನು. ಈಕೆಯು ತಮ್ಮನೊಡನೆ ವಿದ್ಯಾಭ್ಯಾಸವನ್ನು ಮಾಡುತ್ತ ಸ್ವಭಾಷೆಯಾದ ಆಂಧ ದಲ್ಲಿಯೂ, ತಾನು ನಿವಸಿಸುತ್ತಿದ್ದ ಪ್ರದೇಶದ ಭಾಷೆಯಾದ ಮಹಾರಾಷ್ಟ್ರದಲ್ಲಿಯೂ ಸ್ವಲ್ಪ ಜ್ಞಾನವನ್ನು ಪಡೆದಳು. ಹೀಗಿರಲು ಈಕೆಯ ತಮ್ಮನಾದ ಲಕ್ಷ್ಮಣರಾಯನು ಇಂಗ್ಲೀಷು ವಿದ್ಯಾಭ್ಯಾಸ ನಿಮಿತ್ತವಾಗಿ ತನ್ನ ಅಕ್ಕನನ್ನು ಬಿಟ್ಟು ನಾಗಪುರಕ್ಕೆ ಹೊರಟುಹೋದನು, ಅದರಿಂದ ಈಕೆಯು