ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಡಾಕ್ಟರು ಆನ೦ದೀಬಾಯಿ ಜೋಶಿ. ೨೧೫ ದಳು, ಅಲ್ಲಿ ಬಾಗಿನಲ್ಲಿದ್ದ ಜನರು ಆನಂದೀಬಾಯಿಯು ವಿದ್ಯಾಭ್ಯಾಸಮಾಡು ವುದನ್ನು ನೋಡಿ ಸಹಿಸಲಾರದೆ ಗೋಪಾಲರಾಯನಿಗೆ ಅನೇಕ ಕಷ್ಟಗಳನ್ನು ಉಂಟುಮಾಡುತಲಿದ್ದರು. ಆದಕಾರಣ ಅಲ್ಲಿರಲು ಇಷ್ಟಪಡದೆ, ಕೋಲಾಪುರ ದಲ್ಲಿ ಶ್ರೀವಿದ್ಯಾಭಿಮಾನಿಗಳು ಇರುವರು ಎಂದು ಕೇಳಿ ಗೋಪಾಲರಾಯನು ಬಹು ಪ್ರಯತ್ನದಿಂದ ಆ ವೂರಿಗೆ ವರ್ಗಾಯಿಸಿಕೊಂಡನು. ಕೋಲಾಪುರದಲ್ಲಿದ್ದ ಬಾಲಿಕಾಪಾಠಶಾಲೆಯು ಇವರ ಮನೆಗೆ ಬಹುದೂರದಲ್ಲಿ ಇದ್ದುದರಿಂದ, ಅಲ್ಲಿಗೆ ಆನಂದೀಬಾಯಿಯು ಒಬ್ಬಳೇ ನಡೆದುಕೊಂಡು ಹೋಗುವುದು ಅಸಾಧ್ಯವಾಗಿತ್ತು. ಪಾಠಶಾಲೋಪಾಧ್ಯಾಯಿನಿಯಾದ ಮಿಸ್ ಮಾಯಿಸೀಯವರ ಮನೆಯು ಇವರ ಮನೆಗೆ ಸಮೀಾಸದಲ್ಲಿದ್ದುದರಿಂದ ಗೋಪಾಲರಾಯನು ಆಕೆಯ ಮನೆಗೆ ಹೋಗಿ ಪ್ರಸಂಗವಶದಲ್ಲಿ, “ ನನ್ನ ಪತ್ನಿಯನ್ನು ತಮ್ಮ ಗಾಡಿಯಲ್ಲಿ ಕುಳ್ಳಿರಿಸಿಕೊಂಡು ಹೋಗುವಿರಾ ? ” ಎಂದು ಕೇಳಲು, ಆಕೆಯು ಸ್ವಲ್ಪ ಯೋಚಿಸಿ ಹಾಗೆಯೇ ಆಗ ಲೆಂದಳು. ಕೆಲವುದಿವಸ ಆನಂದೀಬಾಯಿಯು ಆಕೆಯೊಡನೆ ಪಾಠಶಾಲೆಗೆ .ಹೋಗುತಲಿದ್ದಳು, ಅನಂತರ ಯಾವ ಕಾರಣದಿಂದಲೋ ನಾಯಿಯೇ ತನ್ನ ಗಾಡಿಯಲ್ಲಿ ಸ್ಥಳವನ್ನು ಕೊಡಲು ಒಪ್ಪಿಕೊಳ್ಳಲಿಲ್ಲ. ಆದಕಾರಣ, ಆನಂದೀ ಬಾಯಿಯು ಪಾಠಶಾಲೆಗೆ ಹೋಗುವುದನ್ನು ನಿಲ್ಲಿಸಬೇಕಾಯಿತು, ಕೋಲಾ ಪುರದಲ್ಲಿ ಈ ದಂಪತಿಗಳು ಆಗಾಗ್ಗೆ ಪಾದ್ರಿಗಳ ಮನೆಗೆ ಹೋಗುತಲಿದ್ದರು. ಪಾದ್ರೀಹೆಂಗಸರು ಆನಂದೀಬಾಯಿಗೆ ಇಂಗ್ಲೀಷಿನಲ್ಲಿ ಎರಡು ಮೂರು ಪುಸ್ತಕ ಗಳನ್ನು ಕಲಿಸಿದರು. ಆನಂದೀಬಾಯಿಯು ಅಲ್ಪ ವಯಸ್ಕಳಾದರೂ, ಅವರು ಮಾಡುವ ಮತಬೋಧೆಯನ್ನು ಗ್ರಹಿಸದೆ ವಿದ್ಯಾಭ್ಯಾಸವನ್ನು ಮಾಡುತಲಿದ್ದಳು. ಈ ಪಾದ್ರಿಗಳಿ೦ದಲೇ ಈಕೆಗೆ ಅಮೆರಿಕಾದೇಶದ ಅನೇಕ ವಿಷಯಗಳು ತಿಳಿದು ಬಂದವು. ಅಂದಿನಿಂದ ಆನಂದೀಬಾಯಿಗೆ ಅಮೆರಿಕಾದೇಶಕ್ಕೆ ಹೋಗಿ ವಿದ್ಯಾ ಬ್ಯಾಸಮಾಡಬೇಕು ಎಂಬ ಅಪೇಕ್ಷೆಯು ಹುಟ್ಟಿತು. ೧೮೭೯ ನೆಯ ಇಸವಿಯಲ್ಲಿ ಗೋಪಾಲರಾಯನಿಗೆ ಬೊಂಬಾಯಿಯಲ್ಲಿ ಕೆಲಸವಾಯಿತು. ಅಲ್ಲಿದ್ದಕಾಲದಲ್ಲಿ ಆನಂದೀಬಾಯಿಯು ಸ್ವಲ್ಪ ಇಂಗ್ಲೀಷನ್ನೂ, ಸಂಸ್ಕೃತವನ್ನೂ ಅಭ್ಯಾಸಿಸಿದಳು. ಆದರೆ ಅಲ್ಲಿನ ಪ್ರಜೆಗಳು ಸಹ ಆಕೆಯ ವಿದ್ಯಾ ಬ್ಯಾಸಕ್ಕೆ ಅನೇಕ ವಿಘ್ನಗಳನ್ನು ಉಂಟುಮಾಡುತಲಿದ್ದರು. ೧೮೮೦ ನೆಯ ವರ್ಷದಲ್ಲಿ ಇವರು ಭೂಜ್ ಎಂಬ ಗ್ರಾಮಕ್ಕೆ ಹೋದರು. ಬೊಂಬಾಯಿಯಿಂದ ಭೂಜಗ್ರಾಮಕ್ಕೆ ಹೋಗುವಾಗ ಆನಂದೀಬಾಯಿಯ ಮುತ್ತಜ್ಜಿಯು ಸ್ವಗ್ರಾಮಕ್ಕೆ ತೆರಳಿದಳಾದಕಾರಣ ಮನೆಯ ಕೆಲಸಗಳನ್ನೆಲ್ಲ ಈಕೆಯು ಒಬ್ಬಳೇ ಮಾಡಿಕೊಳ್ಳ ಬೇಕಾಯಿತು. ಅಲ್ಲಿ ರುವ ಕಾಲದಲ್ಲಿಯೇ ಆಕೆಯು ಇಂಗ್ಲೀಷುಭಾಷೆಯಲ್ಲಿ ಧಾರಾಳವಾಗಿ ಮಾತನಾಡಲು ಕಲಿತಳು.