ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಬಲಾ ಸಚ್ಚರಿತ್ರ ರತ್ನ ಮಾಲೆ. ಸ್ವಯಂಕೃಷಿಯಿಂದಲೇ ವಿದ್ಯಾಭಿವೃದ್ಧಿಯನ್ನು ಮಾಡಿಕೊಳ್ಳಬೇಕಾಯಿತು, ಆದರೂ ಲಕ್ಷ್ಮಣರಾಯನು ತನ್ನ ವಿರಾಮ ಕಾಲದಲ್ಲಿ ಸೋದರಿಯ ಸವಿಾಪದಲ್ಲಿದ್ದು ಆಕೆಯ ವಿದ್ಯಾಭ್ಯಾಸಕ್ಕೆ ಸಹಾಯಕನಾಗುತಲಿದ್ದನು. ಈತನು ಸತ್ವಕಲಾಶಾಲಾ ಶಾಸ್ತೋಪಾಧ್ಯಾಯ (M, A.) ಪರೀಕ್ಷೆಯಲ್ಲಿ ಕೃತಾರ್ಥನಾಗಿ ಮುನಗಾಲ ಸಂಸ್ಥಾನಕ್ಕೆ ದಿವಾನರಾಗಿದ್ದಾರೆ. ಅನಂತರವೂ ಈತನ ಸಹಾಯದಿಂದಲೂ, ಸ್ವಯಂಕೃಷಿಯಿಂದಲೂ ಅಚ್ಚ ಮಾಂಬನು ಹಿಂದೀ, ಫೂಲ್ವರ, ಮಹಾರಾಷ್ಟ) ಬಂಗಾಳೀ, ಸಂಸ್ಕೃತ ಭಾಷೆಗಳಲ್ಲಿ ತಕ್ಕಮಟ್ಟಿಗೆ ಪಾಂಡಿತ್ಯವನ್ನು ಪಡೆದಳು. ಗ್ರಂಥರಚನೆಯಲ್ಲಿ ಈಕೆಗೆ ಈ ಭಾಷೆಗಳು ಬಹು ಸಹಾಯಕರಗಳಾದುವು. ಈಕೆಯು ಆಂಧ್ರ, ಕರ್ಣಾಟಕ, ಮಹಾರಾಷ್ಟ್ರ ದೇಶಗಳ ಉಪಹಾರಗಳನ್ನು ಮಾಡುವುದರಲ್ಲಿಯೂ, ರಂಗವಲ್ಲಿಯನ್ನಿಡುವುದರಲ್ಲಿಯೂ, ಹೊಲಿಗೆಯ ಕೆಲಸ ಮತ್ತು ಕಸೂತಿಯ ಕೆಲಸ ಇವುಗಳನ್ನು ಮಾಡುವುದರಲ್ಲೂ ಅತ್ಯಂತ ನಿಪುಣೆ ಯಾಗಿದ್ದಳು, ಕಸೂತಿಯ ಕೆಲಸವನ್ನೂ ಹೊಲಿಗೆಯ ಕೆಲಸವನ್ನೂ ಕುರಿತು ಆಂಧ್ರಭಾಷೆಯಲ್ಲಿ ಪುಸ್ತಕಗಳನ್ನು ಬರೆಯಲು ಪ್ರಾರಂಭಿಸಿದಳು. ಆದರೆ ಅದು ಪೂರ್ತಿಯಾಗುವುದಕ್ಕೆ ಪೂರ್ವವೇ ಈಕೆಯು ಲೋಕಾಂತರವನ್ನೈದಿದಳು! ತಾನು ರಚಿಸಲು ಸಂಕಲ್ಪಿಸಿದ “ ಅಬಲಾಸಚ್ಚರಿತ್ರ ರತ್ನಮಾಲೆ' ಯೆಂಬ ಗ್ರಂಥವನ್ನು ಮೂರುಭಾಗಗಳಾಗಿ ವಿಂಗಡಿಸಿ ಒಂದನೆಯ ಭಾಗದಲ್ಲಿ ಐತಿಹಾಸಿಕ ಸ್ತ್ರೀಯರ ಚರಿತ್ರೆಗಳನ್ನೂ, ಎರಡನೆಯ ಭಾಗದಲ್ಲಿ ವೈದಿಕ ಪೌರಾಣಿಕ ಸ್ತ್ರೀಯರ ಚರಿತ್ರೆಗಳನ್ನೂ, ಮೂರನೆಯ ಭಾಗದಲ್ಲಿ ಇಂಗ್ಲೆಂಡು ಮೊದಲಾದ ಅನ್ಯದೇಶದ ಸ್ತ್ರೀಯರ ಚರಿತ್ರೆಗಳನ್ನೂ ಬರೆಯಲು ನಿಶ್ಚಿಸಿದಳು. ಆದರೆ ಆಂಧ್ರಪ್ರೀಯರ ದುರದೃಷ್ಟದಿಂದ ಎರಡನೆಯ ಭಾಗವನ್ನು ಬರೆಯುತಲಿರುವ ಕಾಲದಲ್ಲೇ ಈಕೆ ಮೃತ್ಯುವಿಗೆ ಗ್ರಾಸವಾಗಬೇಕಾಯಿತು! • ಈಕೆಗಿರುವ ಆಂಧ್ರಭಾಷಾ ಪಾಂಡಿತ್ಯವೂ, ಗ್ರಂಥರಚನಾ ಸಾಮರ್ಥ್ಯವೂ ಸ್ತ್ರೀಯರಲ್ಲಿ ಅಪೂರ್ವವಾಗಿರುವುದಾದರೂ, ಪಾಂಡಿತ್ಯಕ್ಕಿಂತಲೂ ಗುಣಸಂಪತ್ತಿ ನಿಂದ ಈಕೆಯು ಶ್ಲಾಘನೀಯಳು ಎಂದು ನುಡಿಯಬೇಕು, ಈಕೆಯು ಜಾತಿ ಮತದ್ವೇಷಗಳಿಲ್ಲದವಳಾಗಿ ಸರ್ವಜನರಲ್ಲಿ ಯೂ ಸಮಾನಪ್ರೇಮವುಳ್ಳವ ಳಾಗಿದ್ದಳು. ೧೮೯೯ ನೆಯ ಇಸವಿಯಲ್ಲಿ ಸಂಭವಿಸಿದ ಕ್ಷಾಮ ಸಮಯದಲ್ಲಿ ರಕ್ಷಕರಿಲ್ಲದ ಎರಡು ತಿಂಗಳ ಗಂಡುಮಗುವು ಕ್ಷಾಮನಿವಾರಕ ಸಂಘದವರ ಗೃಹಕ್ಕೆ ತರಲ್ಪಟ್ಟಿತು. ಆಗ ಆ ಶಿಶುವು ಕುರೂಪಿಯಾಗಿ ಕಾಣಬರುತಲಿದ್ದು ದರಿಂದ ಮುಟ್ಟುವುದಕ್ಕೆ ಸಹ ಯಾರೂ ಇಷ್ಟ ಪಡಲಿಲ್ಲ. ಅದು ಸಂರಕ್ಷಣೆಯಿಲ್ಲದೆ ಪ್ರಾಣ ವನ್ನು ಬಿಡಬೇಕಾದಂತಹ ದುರ್ದಶೆಯಲ್ಲಿ ಇರುವ ಆ ಶಿಶುವಿನ ವರ್ತಮಾನವನ್ನು ಕೇಳಿ ಅಚ್ಚ ಮಾ೦ಬನು ಕನಿಕರದೊಡನೆ ಅದನ್ನು ತಂದು ತನ್ನ ಮನೆಯಲ್ಲಿ ಇಟ್ಟು