೨೩೦ ಅಬಲಾ ಸಚ್ಚರಿತ್ರ ರತ್ನ ಮಾಲೆ. ವೇತನವನ್ನು ಪಡೆದು, ಸರ್ವರಾಜ್ಯವನ್ನೂ ಇಂಗ್ಲೀಷರಿಗೆ ಕೊಟ್ಟಂತೆ ಪತ್ರವನ್ನು ಬರೆದುಕೊಟ್ಟು, ಎರಡನೆಯ ಬಾಜೀರಾಯನು ಬ್ರಹ್ಮಾನರ್ತಕ್ಕೆ ಹೊರಟು ಹೋದನು. ಆ ಸಮಯದಲ್ಲಿ ಆತನ ತಮ್ಮನಾದ ಅಪ್ಪಾಯವರು ಸಹ ತಮಗೆ ದೊರೆತ ವೇತನವನ್ನೂ ಸೇವಕರನ್ನೂ ಕರೆದುಕೊಂಡು ಕಾಶೀಕ್ಷೇತ್ರಕ್ಕೆ ಹೊರಟು ಹೋದರು, ಆತನ ಪರಿವಾರದಲ್ಲಿ ಸೇರಿದವನಾದಕಾರಣ ಮೋರೋಪಂತು ಸಹ ಕಾಶಿಗೆ ಹೋದನು. ಈತನನ್ನು ಶ್ರೀಮಂತರಿಗೆ ದಿವಾನನಾಗಿ ನಿಯಮಿಸಿ, ತತ್ರೀ ತ್ಯರ್ಥವಾಗಿ ಐವತ್ತು ರೂಪಾಯಿಗಳ ವೇತನವನ್ನು ಕೊಡುತ್ತಿದ್ದರು. ಮೋರೋ ಸಂತನ ಪತ್ನಿಯಾದ ಭಾಗೀರಥಿಬಾಯಿಯು ಗುಣವತಿ ಎಂತಲೂ, ಸುಶೀಲೆ ಎಂತಲೂ ಪ್ರಖ್ಯಾತಳಾಗಿದ್ದಳು, ಪತ್ನಿಯು ಸುಗುಣವತಿಯಾದ ಕಾರಣ ಮೋರೋ ಸಂತನಿಗೆ ಸಂಸಾರಯಾತ್ರೆಯು ಸುಖಕರವಾಗಿ ನಡೆಯುತಲಿದ್ದಿತು. ಈ ದಂಪತಿ ಗಳು ಕಾಶೀಕ್ಷೇತ್ರದಲ್ಲಿ ವಾಸಮಾಡುತಲಿದ್ದ ಕಾಲದಲ್ಲಿ ೧೮೩೫ ನೆಯ ಇಸವಿಯ ನವಂಬರ್ ೧೯ ನೆಯ ತಾರೀಖಿನಲ್ಲಿ ಒಂದು ಕನ್ಯಾರತ್ನವನ್ನು ಪಡೆದರು. ಜಾತಕರ್ಮ ನಾಮಕರಣ ಮಹೋತ್ಸವಗಳನ್ನು ಮಾಡಿ ಶಿಶುವಿಗೆ 'ಮನೂ ಬಾಯಿ ' ಎಂದು ನಾಮವನ್ನು ಇಟ್ಟರು. ಈ ಬಾಲೆಯು ದಿನದಿನಕ್ಕೆ ಪ್ರವರ್ಧ ಮಾನಳಾಗುತ್ತ, ತನ್ನ ಮುದ್ದುಮಾತಿನಿಂದಲೂ ಮನೋಹರಸ್ವರೂಪದಿಂದಲೂ ಜನನೀಜನಕರನ್ನೂ, ಅವರ ಪರಿವಾರವನ್ನೂ ಆನಂದಗೊಳಿಸುತಲಿದ್ದಳು, ಈ ಹುಡುಗಿಗೆ ಮೂರುನಾಲ್ಕು ವರ್ಷಗಳಾಗುವಹೊತ್ತಿಗೆ ತನ್ಮಾತೆಯಾದ ಭಾಗೀ ರಥೀಬಾಯಿಯು ಪರಲೋಕವನ್ನೈದಿದಳು. ಈ ಕಾಲದಲ್ಲಿಯೇ ಅಪ್ಪಾ ಯವರು ಸಹ ಕಾಲವಾದುದರಿಂದ ಮೋರೋಪಂತ್ ಬ್ರಹ್ಮಾನರ್ತಕ್ಕೆ ಹೋಗಬೇಕಾಯಿತು. ಬಾಜೀರಾಯನು ಈತನ ಬರುವಿಕೆಗೆ ಸಂತೋಷಿಸಿ, ಕುಟುಂಬಸಂರಕ್ಷಣೆಯನ್ನು ಮಾಡುತಲಿದ್ದನು. ಮನೂಬಾಯಿಗೆ ಬಾಲ್ಯದಲ್ಲಿಯೇ ಮಾತೃವಿಯೋಗವು ಉಂಟಾದುದರಿಂದ ಪಿತನ ಪೋಷಣೆಯಲ್ಲಿಯೇ ಇರುತ್ತ ಸರ್ವದಾ ಆತನನ್ನು ಎಡೆಬಿಡದೆ ಪುರುಷರಲ್ಲಿಯೇ ತಿರುಗಾಡುತಲಿದ್ದಳು, ಮಾತೃಹೀನಳಾದ ಬಾಲಿಕೆ ಯಾದುದರಿಂದಲೂ, ಸುಸ್ವರೂಪ ಮಧುರಭಾಷಿಣಿಯಾದುದರಿಂದಲೂ ಶ್ರೀಮಂ ತರ ಬಳಿಯಲ್ಲಿ ಇರುವವರೆಲ್ಲರೂ ಮನೂಬಾಯಿಯನ್ನು ಪ್ರೀತಿಸುತಲಿದ್ದರು. ಪೇಷ್ಟೆಯ ದತ್ತ ಪುತ್ರರಾದ ನಾನಾಸಾಹೇಬ, ರಾವುಸಾಹೇಬರು ಆ ಕಾಲದಲ್ಲಿ ಬಾಲಕರಾದ ಕಾರಣ ಅವರೊಡನೆ ಈ ಬಾಲಿಕೆಯು ಸದಾ ಆಡಿಕೊಳ್ಳುತಲಿದ್ದಳು. ನಾನಾಸಾಹೇಬನು ಕಲಿಯುವದನ್ನೆಲ್ಲ ಈಕೆಯೂ ಕಲಿಯುತಲಿದ್ದಳು. ವಿದ್ಯಾ ಬ್ಯಾಸ, ಅಶ್ವಾರೋಹಣ, ಖಡ್ಡ ಪ್ರಯೋಗ ಮುಂತಾದವುಗಳನ್ನೆಲ್ಲ ನಾನಾ ಸಾಹೇಬನೊಡನೆ ಮನೂಬಾಯಿಯು ಕಲಿತುಕೊಂಡಳು. ಇವರಿಬ್ಬರು ಅಣ್ಣ ತಂಗಿಯರ ಓವೆಯಿಂದ ಕರೆದುಕೊಳ್ಳುತಲಿದ್ದರು. ಈಕೆಯ ಸ್ವಭಾವವು ಬಾಲ್ಯ ದಿಂದಲೂ ಶೌರ್ಯಗುಣ ಪ್ರಧಾನವಾಗಿದ್ದಿತು. ಇದಕ್ಕೆ ಕ್ಷತ್ರಿಯಾಗ್ರಗಣ್ಯ
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೫೫
ಗೋಚರ