ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಂಡಾರು ಅಚ್ಚ ಮಾ೦ಬ. ಕೊಂಡು ಹೆತ್ತ ತಾಯಿಯಂತೆ ಬೆಳೆಸುತ್ತಿದ್ದಳು. ಬಳಿಕ ಆ ಶಿಶುವು ಒಳ್ಳೆಯ ಬಾಲಕನಾಗಿ ಅವರ ಮನೆಯಲ್ಲಿಯೇ ಬೆಳೆದನು. ಯಾಚನಾವೃತ್ತಿಯು ಅತ್ಯಂತ ಹೀನವಾದುದು ಎಂತಲೂ, ಕಷ್ಟ ಪಟ್ಟು ಜೀವಿಸುವುದು ಎಲ್ಲರಿಗೂ ಕರ್ತವ್ಯವೆಂತಲೂ ಆಕೆಯು ಎಣಿಸಿದ್ದಳು. ಹತ್ತು ವರ್ಷದ ಬ್ರಾಹ್ಮಣ ಬಾಲಕನು ಒಬ್ಬನು ತನ್ನ ತಾಯೊಡನೆಯೂ, ತಂಗಿಯೊಡನೆ ಯೂ ಹೊರಟು ಮನೆಮನೆಯಲ್ಲೂ ಭಿಕ್ಷಬೇಡುತಲಿದ್ದನು. ಆಗ ಅಚ್ಚ ಮಾಂಬನು ಆ ಹುಡುಗನು ತಿಳಿವಳಿಕೆಯುಳ್ಳವನೆಂದು ಅರಿತು ಆ ಕುಟುಂಬವನು ತಮ್ಮ ಮನೆಯಲ್ಲಿ ಇಟ್ಟು ಕೊಂಡು ಆ ಬಾಲಕನಿಗೆ ವಿದ್ಯಾಭ್ಯಾಸವನ್ನು ಮಾಡಿ ಸುತ್ತ, ಆ ಬಾಲಕಿಗೆ ತಕ್ಕ ವರನನ್ನು ವಿಚಾರಿಸಿ ವಿವಾಹ ಮಾಡಿದಳು, ಒಂದು ಹಸುವನ್ನು ಕೊಂಡು ಅವರ ತಾಯಿಗೆ ಕೊಟ್ಟು, ಅದರ ಹಾಲನ್ನು ಮಾರಿ ಅದ ರಿಂದ ಜೀವಿಸುವಂತೆ ನಿಯಮಿಸಿದಳು, ಈಕೆಯು ಮಾಡಿದ ಇಂತಹ ಸತೃತ್ಯ ಗಳು ಅನೇಕವಾಗಿವೆ. ಈಕೆಯು ಸಂಘಸಂಸ್ಕರಣ ವಿಷಯದಲ್ಲಿ ಅಕ್ಕರೆಯವ ಳಾಗಿದ್ದಳು, ಈಕೆಯ ಮೈದುನ (ಪತಿಸೋದರನಾದ ದಂಡಪಾಣಿ ಎಂಬಾತ ನಿಗೆ ಪತ್ನಿ ವಿಯೋಗವುಂಟಾಗಲು, ಈಕೆಯೂ, ಈಕೆಯ ಪತಿಯೂ ಆತನನ್ನು ಪ್ರೋತ್ಸಾಹಿಸಿ ನಿತಂತುವನ್ನು ವಿವಾಹಮಾಡಿಸಿದರು, ಆಂಧ್ರ ದೇಶದಲ್ಲಿ ಪ್ರಥಮ ದಲ್ಲಿ ಈಕೆಯೇ ೩ ಸಮಾಜಗಳನ್ನು ಸ್ಥಾಪಿಸಿದವಳು, ಈಕೆಯು ಮಾಡಿದ ಸತೃತ್ಯಗಳನ್ನೆಲ್ಲ ವರ್ಣಿಸಲು ನಾನು ಅಸಮರ್ಥಳು, ಈಕೆಯ ಮರಣಕ್ಕೆ ಒಂದು ಎರಡು ದಿವಸಗಳ ಪೂರ್ವದಲ್ಲಿ ಜ್ವರತಾಪವು ಹೆಚ್ಚಿ ಒಂದೊಂದು ಸಲ ಎಚ್ಚರಿಕೆಯು ಸಹ ತಪ್ಪುತಲಿತ್ತು. ಅಂತಹ ಸಮಯದಲ್ಲಿ ಕಾಲಿಗೆ ಕಾಲು ಚೀಲ ಗಳನ್ನು ಹಾಕಿರಬೇಕು ಎಂದು ವೈದ್ಯನು ನುಡಿಯಲು, ಅದರಂತೆ ಸಮಿಾಪದಲ್ಲಿ ಇದ್ದವರು ಕಾಲಿಗೆ ಚೀಲಗಳನ್ನು ತೊಡಿಸ ಹೋದರು. ಅಚ್ಚಮಾಂಬನು ಆ ಚೀಲಗಳನ್ನು ಕೈಗೆ ತೆಗೆದುಕೊಂಡು ನೋಡಿ ಇವನ್ನು ನಾನು ಧರಿಸುವುದು ಇಲ್ಲ ವೆಂದು ಬಿಸುಟುಬಿಟ್ಟಳು! ಅಂತಹ ಸಂಕಟ ಸಮಯದಲ್ಲಿ ಯೂ ತಮ್ಮ ಪ್ರತಿಜ್ಞೆ ಯನ್ನು ಮರೆಯದೆ ದೇಶಾಭಿಮಾನವನ್ನು ತೋರಿದ ಈ ರಮಣೀರತ್ನವನ್ನು ವರ್ಣಿ ಸಲು ಆರಿ೦ದ ಸಾಧ್ಯವು? ಸುಗುಣ ಪೂರ್ಣೆಯಾದ ಅಚ್ಚಮಾಂಬನು ತಮ್ಮ ೩೧ ನೆಯ ವಯಸ್ಸಿನಲ್ಲಿ (೧೮-೧-೧೯೦೫) ಅಕಾಲಮರಣಕ್ಕೆ ಗುರಿಯಾದಳು !!! - *t+)