೨೩೮ ಅಬಲಾ ಸಚ್ಚರಿತ್ರ ರತ್ನ ಮಾಲೆ. ಇಷ್ಟು ಕಷ್ಟಗಳಿದ್ದರೂ ಆ ವೀರರಮಣಿಯು ತನ್ನ ಬುದ್ದಿ ಚಾತುರ್ಯದಿಂದಲೂ, ಶೌರ್ಯಸಂಪತ್ತಿನಿಂದಲೂ ವಿಖ್ಯಾತರಾದ ಆಂಗ್ಲೆಯ ಸೇನಾನಾಯಕರೊಡನೆ ಪ್ರತಿ ಘಟಿಸಿ ರಣರಂಗದಲ್ಲಿ ನಿಂತು ಅನೇಕ ದಿವಸಗಳು ಯುದ್ಧವನ್ನು ಮಾಡಿ ಅವರಿಂದ " ಈಕೆಯನ್ನು ಗೆಲ್ಲುವುದು ಅಸಾಧ್ಯ' ಎಂದೆನ್ನಿಸಿಕೊಂಡುದು ಆಶ್ಚ ರ್ಯಜನಕವಾದುದಲ್ಲವೆ? ಯುದ್ಧ ಸಮಯದಲ್ಲಿ ರಾಣಿಯು ತನ್ನ ದೃಷ್ಟಿ ಯನ್ನು ನಾಲ್ಕು ಕಡೆಗೂ ಪ್ರಸರಿಸುತ್ತ, ಅಲ್ಲಲ್ಲಿ ಬೇಕಾದ ಏರ್ಪಾಟುಗಳನ್ನು ಮಾಡುತ್ತ, ಸೈನಿಕರಿಗೆ ಬಹುಮಾನಗಳನ್ನು ಕೊಡುತ್ತ, ಯುದ್ಧಧರ್ಮಗಳನ್ನು ಬೋಧಿಸಿ, ಅವರ ಮನಗಳಲ್ಲಿ ವೀರರಸವನ್ನು ಉಂಟುಮಾಡುತಲಿದ್ದಳು. ಗಾಯವನ್ನು ಪಡೆದ ಸೈನಿಕರಿಗೆ ತನ್ನ ಸಮುಖದಲ್ಲಿ ಚಿಕಿತ್ಸೆಯನ್ನು ಮಾಡಿಸುತ್ತಿದ್ದಳು. ಈ ಪ್ರಕಾರವಾಗಿ ೩೧ ನೆಯ ತಾರೀಖಿನವರೆಗು ಯುದ್ಧವು ನಡೆದರೂ ಆ೦ಗ್ಲೆಯ ಸೈನ್ಯಗಳು ಕೋಟೆಯನ್ನು ಭೇದಿಸಲಾರದೆ ಹೋದವು. ಈ ರಣ ರಂಗದಲ್ಲಿ ಅವರ ಯುದ್ದ ಸಾಮಗ್ರಿಗಳು ಕಡಮೆಯಾದುದರಿಂದ, ತಮಗೆ ಅಪ ಜಯವು ಉಂಟಾಗುವುದೇನೋ ಎಂದು ಶಂಕಿಸುತ್ತಲಿದ್ದರು. ಇಷ್ಟರಲ್ಲಿ ನಾನಾ ಸಾಹೇಬ್ # ಪೇಷ್ಠೆಯ ಸೇನಾನಾಯಕನಾದ ತಾತಾಟೋಪೆ ಎಂಬ ವೀರನು, ರಾಣಿಯ ಸಹಾಯಾರ್ಥವಾಗಿ ಕಾಲ್ಟಿಯಿಂದ ಬಹು ಸೇನೆಯೊಡನೆ ಬರುತ್ತಿದ್ದನು. ಆ ಸೈನ್ಯವು ಬಹು ದೂರದಲ್ಲಿ ಇರುವಾಗಲೆ ಆ೦ಗ್ಲೀಯರು ದೂರದರ್ಶಕ ಯಂತ್ರದಿಂದ ನೋಡಿದರು. ಅನಂತರ ಅಗ್ನಿದೇವನಿಗೆ ವಾಯುದೇವನು ಸಹಾ ಯಕನಾದಂತೆ ಈ ರಾಣಿಗೆ ಆ ಸೈನ್ಯವು ಸಹಾಯವಾದರೆ ತಮಗೆ ಅಪಜಯವು ಉಂಟಾಗುವುದು ಸತ್ಯವು ಎಂದು ತಿಳಿದುಕೊಂಡರು. ಆದರೆ ಸರ್ ಹೂ ರಾಜ್ ದೊರೆಯು ಭಯಪಡದೆ ರಾಣಿಯೊಡನೆ ಯುದ್ಧ ಮಾಡಲು ಸ್ವಲ್ಪ ಸೈನ್ಯ ವನ್ನು ಇಟ್ಟು ಮಿಕ್ಕ ಸೇನೆಯನ್ನು, ಕೋಟೆಯೊಳಗೆ ಇರುವವರು ಅರಿಯದಂತೆ ಕಾಲ್ವಿಮಾರ್ಗವಾಗಿ ಕಳುಹಿಸಿದನು. ಅವರು ಅಲ್ಲಿಗೆ ಹೋಗಿ, ಬರುತಲಿದ್ದ ವಿಪುಲ ಸೈನ್ಯವನ್ನು ಮಾರ್ಗದಲ್ಲಿ ಅಡ್ಡ ಗಿಸಿ, ತಮ್ಮ ಯುದ್ಧ ಸಾಮರ್ಥ್ಯದಿಂದ ಅವರನ್ನು ಸೋಲಿಸಿದರು. ತಾತಾಟೋ ಪೆಯ ಸೇನೆಗಳು ಯುದ್ಧ ಸಾಹಿತ್ಯಗಳನ್ನು ಅಲ್ಲಿಯೇ ಬಿಟ್ಟು ಪಲಾಯನವಾದವು. ಸರ್ ಹೊರಾಜ್ ದೊರೆಯ ಸೇನೆಯು, ಯುದ್ಧ ಸಾಮಗ್ರಿಗಳೊಡನೆ ಜಯವು ಸಂಭವಿಸಿದುದರಿಂದ ಉತ್ಸಾಹಯುತಗ + ನಾನಾಸಾಹೇಬನು ಎರಡನೆಯ ಬಾಜೀರಾಯನ ದತ್ತಪುತ್ರನು ೧೮೫೭ನ ಇಸವಿಯ ಸಿಪಾಯಿಗಳ ಸ್ವಾಮಿದ್ರೋಹಕ್ಕೆ ಈ ತ ನೇ ಪ್ರೋತ್ಸಾಹವನ್ನು ಉ೦ಟುಮಾಡಿದ ವನು. ಆ೦ಗ್ಲೀಯರಿಂದ ತನ್ನ ಪೂನಾ ರಾಜ್ಯವನ್ನು ಮರಳಿ ಪಡೆಯಬೇಕು ಎ೦ಬಾ ಶಯದಿಂದ ಹೀಗೆ ಮಾಡಿದನು.
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೬೩
ಗೋಚರ