ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೧ ಮಹಾರಾಣಿ ರುವಾಶೀ ಲಕ್ಷ್ಮೀಬಾಯಿ, ತಾತಾಟೋಪೆಯನ್ನೂ ಮುಖ್ಯಸೇನಾಧಿಪತಿಗಳಾಗಿ ನಿಯಮಿಸಿದನು, ಆಂಗ್ಗೇಯ ಸೈನ್ಯಗಳು ಕಾನಗರಕ್ಕೆ ಮುತ್ತಿಗೆಯನ್ನು ಹಾಕಿತು. ಸ್ವಲ್ಪ ಕಾಲ ಉಭಯ ಸೈನ್ಯಗಳಿಗೂ ತುಮುಲಕಲಹವು ನಡೆದು ಕೊನೆಗೆ ಆಂಗ್ಲಯರು ಜಯವನ್ನು ಹೊಂದಿದರು. ಪೇಷ್ಟೆಯೇ ಮೊದಲಾದವರು ಧೈರ್ಯಹೀನರಾದರು. ಲಕ್ಷ್ಮಿ ಬಾಯಿಯು ಅವರಿಗೆ ಧೈರ್ಯವನ್ನು ಹೇಳಿ, ಪುನಃ ತನ್ನ ಸ್ವಲ್ಪ ಸೇನೆಯೊಡನೆ ಯುದ್ಧವನ್ನು ಮಾಡಿದಳು. ಆದರೆ ಹಿಂದಿನಿಂದ ಇನ್ನೂ ಶತ್ರುಸೇನೆಗಳು ವಿಶೇಷ ವಾಗಿ ಬರುತ್ತಲಿದ್ದುದರಿಂದಲೂ, ತಮ್ಮ ಸೇನೆಯಲ್ಲಿ ಇತರ ಸೇನಾನಾಯಕರು ಪಲಾಯನವಾದುದರಿಂದಲೂ ರಾಣಿಯು ಯುದ್ದ ವಿಮುಖಳಾಗ ಬೇಕಾಯಿತು. ಕಾಲ್ಕಿಯಲ್ಲಿ ಅಪಜಯವನ್ನು ಹೊಂದಿದ ಈ ಪ್ರಮುಖರೆಲ್ಲರು ಗ್ವಾಲೇರಿನ ಕಡೆಯಲ್ಲಿರುವ ಗೋಪಾಲಪುರವನ್ನು ಸೇರಿ ಮುಂದೆಮಾಡಬೇಕಾದ ಕಾರ್ಯವನ್ನು ಆಲೋಚಿಸಿದರು. ಸೈನ್ಯವು ಅತ್ಯಲ್ಪವಾಗಿದ್ದುದರಿಂದ ಮುಂದೆಯುದ್ದ ಮಾಡುವ ಬಗೆಯು ತೋರಲಿಲ್ಲ. ಸ್ವಲ್ಪ ಹೊತ್ತು ಯೋಚಿಸಿ ರಾಣಿ ಲಕ್ಷ್ಮಿಬಾಯಿಯು ಆ ಯಲ್ಪಸೈನ್ಯದೊಡನೆ ಗ್ಯಾಲೇರಿಗೆ ಹೋಗಿ, ಸಿಂಧೆಯನ್ನು ತಮಗೆ ಸಹಾಯಕ ರಾಗುವಂತೆ ಕೇಳಿಕೊಳ್ಳಬೇಕೆಂತಲೂ, ಆತನು ಸಮ್ಮತಿಸಿದರೆ ಮುಂದೆ ಯುದ್ಧ ವನ್ನು ನಡೆಸುವುದು ಯುಕ್ತವೆಂತಲೂ ತಿಳಿಸಿದಳು. ಆಕೆಯು ಹೇಳಿದಂತೆಯೇ ಅವರೆಲ್ಲರು ದಿನಪ್ರಯಾಣಗಳನ್ನು ಮಾಡಿ ೧೮೫೮ ನೆಯ ಇಸವಿ ಮೇ ೩೦ ನೆಯ ತಾರೀಖಿಗೆ ಗ್ವಾಲೇರಿನ ಸವಿಾಪದಲ್ಲಿರುವ ಮುರಾರಿಪುರ ಪ್ರಾಂತ್ಯವನ್ನು ಸೇರಿ ತಮಗೆ ಸಹಾಯಕರಾಗಲು ಸಿಂಧೆಗೆ ವರ್ತಮಾನವನ್ನು ಕಳುಹಿಸಿದರು. ತತೂರ್ವವೇ ತಾತಾಟೋಪೆಯಿಂದ ಬೋಧಿಸಲ್ಪಟ್ಟದ ಸರದಾರರೆಲ್ಲರು ಪೇಷ್ಟೆಗೆ ಸಹಾಯಮಾಡುವೆವು ಎಂದರು. ಆದರೆ ಪ್ರಭುಭಕ್ತಿಯುಳ್ಳ ಜಯಾಜಿರಾವ್ ಸಿಂಧೆಯೂ, ದಿವಾನ್ ದಿನಕರರಾಯನೂ ಅವರ ವಾಕ್ಯಗಳನ್ನಾಲಿಸದೆ, ಮಾರ ನೆಯ ದಿವಸ ಯುಕ್ತಿಯಿಂದ ಪೇಷ್ಟೆಯ ಸೈನ್ಯವನ್ನು ಓಡಿಸಬೇಕು ಎಂದು ನಿಶ್ಚಯಿಸಿದರು. ಆ ರಾತ್ರಿಯಲ್ಲಿಯೇ ಯಾರೊ ದಿವಾನರು ಇಲ್ಲದ ಸಮಯದಲ್ಲಿ ಮಹಾರಾಜರನ್ನು ಯುದ್ಧಕ್ಕೆ ಪ್ರೋತ್ಸಾಹಗೊಳಿಸಲು, ಆತನು ತಮಗೆ ವಿಶ್ವಾಸ ಪಾತ್ರರಾದ ಸೇವಕರೊಡನೆ ಹೊರಟು ಸೂರ್ಯೋದಯಕಾಲಕ್ಕೆ ಮುರಾರಿಪುರಕ್ಕೆ ಎರಡು ಮೈಲಿಗಳ ದೂರದಲ್ಲಿರುವ ಬಹದುರಪುರದಲ್ಲಿ ಶಿಬಿರವನ್ನು ಸ್ಥಾಪಿಸಿ ಯುದ್ಧಕ್ಕೆ ಆರಂಭಮಾಡಿದನು. ಪ್ರಥಮದಲ್ಲಿ ಪೇಷ್ಟೆಯ ಸೈನ್ಯದಮೇಲೆ ಗುಂಡು ಗಳು ಬೀಳುವುದನ್ನು ನೋಡಿ, ಪೂರ್ವದಲ್ಲಿ ಸಿಂಧೆಯು ಪೇಷ್ಟೆಯ ಸಾವಂತ ನಾಗಿದ್ದ ಕಾರಣ ತಮಗೆ ಅನುಕೂಲವಾಗಿ ತಮ್ಮನ್ನು ಇದಿರುಗೊಳ್ಳಲು ಬರುತ್ತಿರು ವನು ಎಂದು ಪೇಷ್ಟೆಯು ಎಣಿಸಿದನು, ಆದರೆ ಆ ಬಾಣವೃಷ್ಟಿ ಯು ಕ್ರಮೇಣ ಹೆಚ್ಚು ತಲಿರುವುದನ್ನು ನೋಡಿ ಆತನು ಭ್ರಾಂತನಾದನು. ರಾಣಿಯು ಕೂಡಲೆ ಸೈನ್ಯಗಳನ್ನು ಸಿದ್ಧಪಡಿಸಿ ಯುದ್ಧವನ್ನು ಆರಂಭಿಸಿದಳು. ಸ್ವಲ್ಪ ಹೊತ್ತು ಎರಡು 22