೨೪೨ ಅಬಲಾ ಸಚ್ಚರಿತ್ರ ರತ್ನ ಮಾಲೆ. ಸೈನ್ಯಗಳೂ ಸಮಾನವಾಗಿ ಯುದ್ಧ ಮಾಡಿದ ಅನಂತರ ರಾಣಿಯ ಸೇನೆಗಳು ಸ್ವಲ್ಪಹಿಮ್ಮೆಟ್ಟುವಂತೆ ತೋರಲು, ರಾಣಿಯು ವೀರಾವೇಶದೊಡನೆ ಕೆಲವು ಆಶ್ಚಿಕ ರೊಡನೆ ಹೊರಟು ಫಿರಂಗಿಗಳಮೇಲೆ ಬಿದ್ದು ಘೋರವಾಗಿ ಯುದ್ಧ ಮಾಡಲು ಆಕೆಯ ಪರಾಕ್ರಮಕ್ಕೆ ನಿಲ್ಲಲಾರದೆ ಸಿಂಧೆಯ ಸೈನಿಕರು ಓಡಲಾರಂಭಿಸಿದರು. ಅದನ್ನು ಕಂಡು ತಾತಾಟೋಪೆಯೇ ಮೊದಲಾದ ಸರದಾರರೂ, ಸೈನಿಕರೂ ಉತ್ಸಾಹ ಪೂರಿತರಾಗಿ ಶತ್ರುಗಳನ್ನು ಓಡಿಸಿದರು, ಅದರಿಂದ ಸಿಂಧೆಯು ತನ್ನ ಪರಾಕ್ರಮವೆಲ್ಲ ವ್ಯರ್ಥವಾದುದನ್ನು ಕಂಡು ದಿವಾನನನ್ನೂ ಇನ್ನು ಕೆಲ ಸರ ದಾರರನ್ನೂ ಕರೆದುಕೊಂಡು, ಅಗ್ರಾ ಖಿಲ್ಲೆಯೊಳಗಿರುವ ಆಂಗ್ಗೇಯರ ಸಹಾಯ ವನ್ನು ಕೇಳುವ ಸಲುವಾಗಿ ಅಲ್ಲಿಗೆ ಹೊರಟನು. ವಿಪುಲ ಸೈನ್ಯ ಸಮೇತನಾದ ಒಬ್ಬ ತರುಣನೃಪನನ್ನು, ಅಲ್ಪ ಸೈನ್ಯ ಸಹಿತಳಾದ ಒಬ್ಬ ಅಬಲೆಯು ತನ್ನ ಶೌರ್ಯದಿಂದ ಸೋಲಿಸಿದಳು. ಇದ ದಿಂದಲೇ ಒಬ್ಬ ಕವಿಯು ಈ ವಿಧವಾಗಿ ಬರೆದಿರುವನು :-
- ಕ್ರಯಾಸಿದ್ಧಿಃ ಸತ್ತೇಭವತಿ ಮಹತಾಂನೋಪಕರಣೇ. ? ಅರ್ಥ.-ಮಹಾತ್ಮರಕಾರ್ಯವು ಅವರ ಪರಾಕ್ರಮದಿಂದಲೇ ಸಿದ್ಧಿಸುವು ದಲ್ಲದೆ ಕೇವಲ ಸಾಮಗ್ರಿಯಿಂದಲ್ಲ.
ಸಿಂಧೆಯು ಪುರವನ್ನು ಬಿಟ್ಟು ಹೊರಟು ಹೋದಮೇಲೆ ಆತನ ಅಂತಃಪುರ ಸ್ತ್ರೀಯರು ನರನರವೆಂಬ ಸುರಕ್ಕೆ ಹೋದರು. ಇವರೆಲ್ಲರು ಸ್ವಲ್ಪ ದೂರ ಹೋದಮೇಲೆ ಸಿಂಧೆಯು ಶತ್ರುವಶವಾದನು ಎಂದು ಯಾರೋ ಹೇಳಲು, ಅವ ರಲ್ಲಿ ಒಬ್ಬಳಾದ ಗಜರಾ ಎಂಬ ಸ್ತ್ರೀಯು ಖಡ್ಡ ವನ್ನು ಧರಿಸಿ ಹಿಂತಿರುಗಿಬಂದು ರಾಜಭವನವನ್ನು ಪ್ರವೇಶಿಸಿ, ಸಿಂಧೆಯು ಸುರಕ್ಷಿತವಾಗಿಹೋದನು ಎಂಬ ವರ್ತಮಾನವನ್ನು ಕೇಳಿ ಪುನಃ ಹೊರಟಳು. ಈಕೆಯ ಸಾಹಸವು ಸ್ತುತ್ಯ ವಾದುದಲ್ಲವೆ ? ಸಿಂಧೆಯು ಹೊರಟು ಹೋದಮೇಲೆ ಸಕಲ ಸೈನ್ಯವು ತಮ್ಮ ವಶವಾಗಲು, ಪೇಷ್ಟೆಯು ಅರಮನೆಯನ್ನು ಪ್ರವೇಶಿಸಿ, ಇಷ್ಟು ಮಾತ್ರದಿಂದಲೇ ತಾವು ಸಾರ್ವ ಭೌಮರಾದೆವು ಎಂದೆಣಿಸಿ, ಪಟ್ಟಾಭಿಷೇಕವನ್ನು ಮಾಡಿಕೊಂಡು, ಬ್ರಾಹ್ಮಣ ಸಂತರ್ಪಣಾದಿ ಮಹೋತ್ಸವಗಳಲ್ಲಿ ಮುಳುಗಿದ್ದನು. ಲಕ್ಷ್ಮೀಬಾಯಿಯು ಇವೆ ಲವು ರಾಜ್ಯನಾಶಕಹೇತುಗಳೆಂದೂ, ಈ ಆಡಂಬರಗಳನ್ನು ನಿಲ್ಲಿಸಿ ಸೈನ್ಯವನ್ನು ಯುದ್ದಕ್ಕೆ ಅಣಿಮಾಡಿಟ್ಟು ಕೊಳ್ಳಬೇಕೆಂದೂ ಹೇಳಿದಳು, ಆದರೆ ಅವು ಸ್ತ್ರೀವಾಕ್ಯ ಗಳಾದಕಾರಣ ಗಣನೆಗೆ ತರತಕ್ಕೆ ಅವಶ್ಯಕವಿಲ್ಲವೆಂದು ಪೇಷ್ಟೆಯೂ, ತಾತಾ ಟೋಪೆಯೂ ತಮ್ಮ ಮಹೋತ್ಸವಗಳಲ್ಲಿಯೇ ಮುಳುಗಿದ್ದರು.