ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*yಳy ಅಬಲಾ ಸಚ್ಚರಿತ್ರ ರತ್ನ ಮಾಲೆ. ಅನೇಕ ಗಾಯಗಳಿಂದ ಬಾಧೆಪಡುತ್ತಿದ್ದ ಆ ಕುದುರೆಯು ಆ ಜಲಪ್ರವಾಹ ವನ್ನು ನೋಡಿ ಅದನ್ನು ದಾಟಲಾರದೆ ನಿಂತಿತು. ರಾಣಿಯು ಕುದುರೆಯನ್ನು ಆಚೆ ದಡಕ್ಕೆ ತೆಗೆದುಕೊಂಡು ಹೋಗಲು ಮಾಡಿದ ಪ್ರಯತ್ನವು ನಿಷ್ಪಲ ವಾಯಿತು. ಇಷ್ಟರಲ್ಲಿ ಶತ್ರುಗಳು ಆಕೆಯನ್ನು ಸವಿಾಪಿಸಲು, ಆ ಯುವತಿಯು ರೋಷಪೂರಿತಳಾಗಿ ಅವರಲ್ಲಿ ಅನೇಕರನ್ನು ಯಮಪುರಿಗೆ ಕಳುಹಿಸಿದಳು. ಆದರೆ ಅವರು ಬಹುಜನರೂ ಈಕೆಯು ಒಬ್ಬಳೂ ಆದಕಾರಣ ಅವರಲ್ಲಿ ಒಬ್ಬನು ಆಕೆಯ ಹಿಂಭಾಗದಿಂದ ಬಂದು ಆಕೆಯ ತಲೆಯ ಬಲಭಾಗವನ್ನು ಕತ್ತರಿಸಿದನು. ತಲೆಯಿಂದ ರಕ್ತವು ಪ್ರವಾಹದಂತೆ ಸುರಿಯಲಾರಂಭಿಸಿತು. ಆ ಸೈನಿಕನು ಪುನಃ ಆಕೆಯ ಹೃದಯವನ್ನು ಇರಿದನು. ಆಗ ರಾಣಿಯು ಆಸನ್ನ ಸ್ಥಿತಿಯನ್ನು ಹೊಂದಿದಳು. ಆದರೂ ಆ ವೀರಯುವತಿಯು ಆ ಸ್ಥಿತಿ ಯಲ್ಲಿಯೂ ಧೈರ್ಯವನ್ನು ಬಿಡದೆ ತನಗೆ ಆ ಸ್ಥಿತಿಯನ್ನುಂಟುಮಾಡಿದ ಸೈನಿಕ ನನ್ನು ಪರಲೋಕಕ್ಕೆ ಕಳುಹಿದಳು ! ಈಕೆಯು ಪುರುಷವೇಷದಲ್ಲಿ ಇದ್ದುದ ರಿಂದ ಆ ಸೈನಿಕರು ಈಕೆಯನ್ನು ಶತ್ರು ಸೈನ್ಯಾಧಿಪರಲ್ಲಿ ಒಬ್ಬನು ಎಂದು ಭಾವಿಸಿಇದ್ದರು. ಲಕ್ಷ್ಮೀಬಾಯಿಯು ಅವನನ್ನು ಕೊಂದು ಪೂರ್ತಿಯಾಗಿ ಬಲ ಹೀನಳಾದಳು. ಅಷ್ಟರವರೆಗೂ ಆಕೆಯನ್ನು ಹಿಂಬಾಲಿಸಿಬರುತ್ತಿದ್ದ ದೇಶ ಮುಖ್ ರಾಮಚಂದ್ರರಾಯನು ಅರ್ಧಮುಖಮಾತ್ರಳಾದ ರಾಣಿಯನ್ನು ಸವಿಾಪ ದಲ್ಲಿದ್ದ ಪರ್ಣಕುಟೀರಕ್ಕೆ ಕರೆದುಕೊಂಡುಹೋಗಿ ಆಕೆಗೆ ಅನೇಕ ಉಪಚಾರ ಗಳನ್ನು ಮಾಡಿದನು. ಆದರೆ ೧೮೫೮ ನೆ ಇಸವಿ ರ್ಜೂ ೧೮ ನೆಯ ತಾರೀಖಿನಲ್ಲಿ ಅದ್ವಿತೀಯ ಶೌರ್ಯಗುಣಮಂಡಿತಳಾದ ರಾಣಿ ಲಕ್ಷ್ಮಿಬಾಯಿಯು ಈ ಲೋಕವನ್ನು ಬಿಟ್ಟು ಶಾಶ್ವತಸುಖಪ್ರದವಾದ ಲೋಕಕ್ಕೆ ಹೊರಟುಹೋದಳು. ದೇಶಮುಖ್ ರಾಮಚಂದ್ರರಾಯನು ರಾಣಿಯ ಆಜ್ಞೆಯಂತೆ ಆಕೆಯ ಶರೀರವು ಶತ್ರುವಶವಾಗದಂತೆ ಗುಪ್ತವಾಗಿ ಅಗ್ನಿಸಂಸ್ಕಾರವನ್ನು ಮಾಡಿದನು. ಅನಂತರ ಆಂಗ್ಗೇಯಸೇನಾಧಿಪರು ಜಯಶೀಲರಾಗಿ ಸಿಂಧೆಗೆ ರಾಜ್ಯ ಪನ್ನು ಪುನಃ ಕೊಟ್ಟರು. ಆಮೇಲೆ ಆ ಸೇನಾನಾಯಕರು ಕ್ರಮವಾಗಿ ದರೋಡೆಸೈನ್ಯಗಳನ್ನು ಗೆದ್ದು, ತಾತಾಟೋಪೆ ಮೊದಲಾದ ಸೈನ್ಯಾಧಿಪ ರನ್ನು ಗಲ್ಲಿಗೆ ಹಾಕಿದರು. ಬಂದೆವಾಲಾ ನವಾಬನು ಶರಣಾಗತನಾದುದ ರಿಂದ ಕ್ಷಮೆಗೆ ಪಾತ್ರನಾದನು. ಆಂಗ್ಲಮ ಪ್ರಭುಗಳು ಜಯಶೀಲರಾದುದರಿಂದಲೆ ಸುಖಪ್ರದವಾದ ಈ ಆಂಗ್ಲರು ರಾಜ್ಯ ಪಾಲನೆಯಲ್ಲಿ ನಾವು ಸ್ತ್ರೀವಿದ್ಯಾ ಲಾಭಾದಿಗಳಿಂದ ಅತ್ಯಂತ ಸುಶಿಗಳಾಗಿ ಬಾಳುತ್ತಿದೇವೆ.