ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೈಸೂರು ಮಹಾರಾಣಿ ಲಕ್ಷ್ಮಮ್ಮಣ್ಣ. ನಮ್ಮ ದೇಶದ ಚರಿತ್ರೆಯಲ್ಲಿ ಈ ಮಹಾರಾಣಿಯು ಸುಪ್ರಸಿದ್ಧ ಯು. ೧೮೯೪ ನೆಯ ಡಿಶಂಬರಿನಲ್ಲಿ ಪರಲೋಕಯಾತ್ರೆಯನ್ನು ಮಾಡಿದ ಶ್ರೀ ಚಾಮ ರಾಜೇಂದ್ರ ಪ್ರಭುವಿಗೆ ಈಕೆಯು ಸಿತಾಮಹನ ತಾಯಿಯಾಗಬೇಕು, ಹೈದ ರನೂ, ಅವನ ಮಗನಾದ ಟೀಪುವೂ ಮೈಸೂರು ಸಂಸ್ಥಾನವನ್ನು ಬಲಾತ್ಕಾರ ವಾಗಿ ವಶಪಡಿಸಿಕೊಂಡ ಕಾಲದಲ್ಲಿ ಧೈರ್ಯವತಿಯಾದ ಈ ಲಲನೆಯು ತನ್ನ ಧೈರ್ಯಚಾತುರ್ಯಗಳ ಸಹಾಯದಿಂದ ರಾಜ್ಯವನ್ನು ಪುನಃ ಪಡೆದು ಕೊಂಡಳು, ಈಕೆಯು ಕಗೋಪಾಲ ಅರಸನ ಮಗಳು. ಈತನು ತಿರಿಚಿನಾಪಳ್ಳಿಯ ಯುದ್ದದಲ್ಲಿ ಪ್ರಸಿದ್ದಿಯನ್ನು ಹೊಂದಿದ ಶೂರನು, ಈತನು ಮೈಸೂರು ಮಹಾರಾಜರಾದ ನಂಜರಾಜ ಒಡೆಯರ ಹತ್ತಿರ ಸೇನಾನಾಯಕ ನಾಗಿದ್ದನು. ತಿರಿಚಿನಾಪಳ್ಳಿಯ ಮೇಲೆ ಮಹಮ್ಮದಲ್ಲಿ ಯೊಡನೆ ದಂಡೆತ್ತಿ ಹೋಗಿದ್ದನು. ಲಕ್ಷ್ಮಮ್ಮಣ್ಣಿಯವರ ಜನ್ಮಕಾಲವು ತಿಳಿಯಬರುವುದಿಲ್ಲ. ಆದರೆ ಈಕೆಯನ್ನು ೧೭೫೬ ನೆಯ ಇಸವಿಯಲ್ಲಿ ಇಮ್ಮಡಿ ಕೃಷ್ಣರಾಜ ಒಡೆಯರಿಗೆ ಕೊಟ್ಟು ಮದುವೆಯನ್ನು ಮಾಡಿದರೆಂದು ಮಾತ್ರ ತಿಳಿಯ ಬರುತ್ತದೆ. ಆಗ ಈಕೆಯು ರಾಜನಿಗೆ ಮೂರನೆಯ ರಾಣಿಯಾಗಿದ್ದಳು. ಈ ರಾಜನ ಪಾಲಕಜನಕನಾದ ನಂಜರಾಜ ಒಡೆಯನು ಪೂರ್ವದ ಮೈಸೂರು ರಾಜನಿಗೆ ಮಾವನಾಗಬೇಕು, ಅಳಿಯನಲ್ಲಿ ರಾಜ್ಯಭಾರವನ್ನು ವಹಿಸುವ ಶಕ್ತಿಯಿಲ್ಲ ದುದರಿಂದ ನಂಜರಾಜನು ತಾನೇ ರಾಜ್ಯವನ್ನು ಆಳುತ ಲಿದ್ದನು. ನಂಜರಾಜನ ಆಜ್ಞಾನುವರ್ತಿಯಾದ ಹೈದರನು ರಾಜ್ಯಾಧಿಪತ್ಯವನ್ನು ತಾನೇ ವಹಿಸಬೇಕೆಂಬ ಆಶೆಯಿಂದ ನಂಜರಾಜನನ್ನು ಒಂದು ಮೂಲೆಯಲ್ಲಿ ಇರಿಸಿ ತಾನು ರಾಜ್ಯಾರೂಢನಾಗಲು ಯತ್ನಿಸುತಲಿದ್ದನು. - ಅನಂತರ ನಂಜರಾಜನಿಗೆ ಮರಣ ಸಮಯವು ಸನ್ನಿಹಿತವಾಗಲು ಹೈದರ ನಿಗೆ ಯಾವ ವಿಧವಾದ ಅಧಿಕಾರವನ್ನೂ ಕೊಡಕೂಡದೆಂದು ಹೇಳಿ ಹೋದನು. ಆದರೆ ಅದರಿಂದ ಫಲವೇನೂ ಉಂಟಾಗಲಿಲ್ಲ. ನಂಜರಾಜನ ಪತ್ನಿಯಾದ ಜಮ್ಮಣ್ಣೀದೇವಿಯು ಹೈದರನು ಸಾಧಿಕಾರಿಯಾಗಿರುವುದಕ್ಕೆ ಇಷ್ಟ ಪಡದೆ, ಅದಕ್ಕೆ ನಿಮ್ಮ ಮಾಡಲು ಎಣಿಸಿ ಹೈದರಿನ ಬಳಿಯಿರುವ ಖಂಡೇರಾಯನೆಂಬ ಸರದಾರನೊಡನೆ ಗುಪ್ತವಾಗಿ ಆಲೋಚನೆಯನ್ನು ಮಾಡಲು ಆರಂಭಿಸಿದಳು. ಈಕೆಯು ಇಮ್ಮಡಿ ಕೃಷ್ಣರಾಜ ಪ್ರಭುವನ್ನು ದತ್ತು ತೆಗೆದುಕೊಂಡಳು. ಈ