ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೫ ಮಹಾರಾಣೀ ರಾಶೀ ಲಕ್ಷ್ಮಿಬಾಯಿ. ರಾಣಿಯದತ್ತ ಪುತ್ರನು ತಾಯಿಯ ಅನಂತರ ಅನೇಕ ಕಷ್ಟಗಳನ್ನು ಅನು ಭವಿಸಿ, ಪ್ರಸ್ತುತಕಾಲದಲ್ಲಿ ಸಾಮಾನ್ಯ ಮಾನವನಂತೆ ಇಂದೋರಿನಲ್ಲಿ ಕಾಲವನ್ನು ಕಳೆಯುತ್ತಿದಾನೆ ! ಲಕ್ಷ್ಮಿಬಾಯಿಯು ಆಂಗ್ಲಯರೊಡನೆ ಯುದ್ಧ ಮಾಡಿದರೂ ಗುಣ ಗ್ರಾಹಿಗಳಾದ ಆಂಗ್ಗೇಯಸೇನಾನಾಯಕರು ಆಕೆಯನ್ನು ಹೊಗಳಿದ್ದಾರೆ. ಅವು ಗಳಲ್ಲಿ ಕೆಲವನ್ನು ಕೆಳಗೆ ಬರದಿದೇನೆ :- - (೧) ರಾಣಿಗೆ ಪ್ರತಿಪಕ್ಷಿಯಾಗಿ ನಿಂತು ಆಕೆಯನ್ನು ಸೋಲಿಸಿದ ಸರ್ ಹೂ ರಾಜ್ ಸೇನಾಧಿಪನು " ಗುಳೇಗುಣಂವೇ' ಎಂಬ ನ್ಯಾಯಾನುಸಾರವಾಗಿ ಆಕೆಯನ್ನು ಕುರಿತು ಹೀಗೆ ಬರೆದಿದಾನೆ : “ ರಾಣಿಲಕ್ಷ್ಮೀಬಾಯಿಯು ಅತ್ಯಂತ ಪವಿತ್ರವಾದ ಸೌಶೀಲ್ಯವುಳ್ಳವಳಾದುದರಿಂದಲೂ ಆಕೆಗೆ ಆಶ್ರಿತಜನರಲ್ಲಿಯೂ, ಸೈನಿಕರಲ್ಲಿ ಯೂ ಇದ್ದ ಔದಾರ್ಯದಿಂದಲೂ, ಆಕೆಯು ದೊಡ್ಡ ದೊಡ್ಡ ಸಂಕಟ ಸಮಯಗಳಲ್ಲಿ ಸಹ ನಿಶ್ಚಲವಾದ ಧೈರ್ಯವುಳ್ಳವಳಾಗಿ ಇದ್ದುದರಿಂದಲೂ ಸೈನಿ ಕರಿಗೆ ಆಕೆಯಲ್ಲಿ ಪೂಜ್ಯಭಾವವು ಹೆಚ್ಚಾಗಿದ್ದ ಪ್ರಯುಕ್ತ, ಆಕೆಯ ಪಕ್ಷವು ನಮಗೆ ಭಯಂಕರವಾಗಿದ್ದಿತು. ? “ ಗ್ವಾಲೇರಿನಲ್ಲಿ ನಡೆದಯುದ್ದದ ಉತ್ತಮಪರಿಣಾಮವು ಝಾಶೀ ರಾಣಿಯ ಮರಣವು, ಆಕೆಯು ಅಬಲೆಯಾದರೂ, ನಮ್ಮೊಡನೆ ಪ್ರತಿಭಟಿಸಿ ದವರಲ್ಲಿ ಆಕೆಯು ಅತಿಶೂರ, ಅತ್ಯುತ್ತಮಸೇನಾಗ್ರಣಿಯೂ ಆಗಿದ್ದಳು. ' (೨) “ ಆ ಯುದ್ಧದಲ್ಲಿ ಅತ್ಯಂತ ದೃಢನಿಶ್ಚಯಳೂ, ತೇಜಸ್ವಿನಿಯೂ, ಜನಾನುರಾಗವುಳ್ಳವಳೂ, ಉತ್ತಮ ಸೇನಾಧ್ಯಕ್ಷಳೂಆದ ರಾಣಿ ಲಕ್ಷ್ಮಿ ಬಾಯಿಯು ಕೊಲ್ಲಲ್ಪಟ್ಟಳು.”-ಡಾಕ್ಟರು ಲೋ. - (೩) “ ಲಕ್ಷ್ಮೀಬಾಯಿಯು ಯೌವನ ಮಧ್ಯದಲ್ಲಿ ದ್ದುದರಿಂದ ಅತ್ಯಂತ ಸುಂದರಳಾಗಿದ್ದಳು. ಆಕೆಯು ಪ್ರಾಣವನ್ನು ತ್ಯಜಿಸಲು ಚಿಂತಿಸುತ್ತಿರಲಿಲ್ಲ. ಆದರೆ ಮಾನಹಾನಿಯು ಉಂಟಾಗಬಾರದೆಂಬ ಅಭಿಪ್ರಾಯವುಳ್ಳವಳಾಗಿದ್ದಳು. ಆಕೆಯ ಮನಸ್ಸು ಉತ್ಸಾಹಪೂರ್ಣವಾದುದಾಗಿಯೂ, ಆಕೆಯ ಶರೀರವು ಸಶಕ್ಕೆ ವಾದುದಾಗಿಯೂ ಇತ್ತು.”-ಮಾರ್ಟಿದೊರೆ. (೪) “ ಯಾವ ಸ್ತ್ರೀಯನ್ನು ರಾಜ್ಯ ತಂತ್ರಗಳನ್ನು ನಡೆಸಲು ಅಸಮರ್ಥಳು ಎಂದು ಭಾವಿಸಿ ರಾಜ್ಯಭ್ರಷ್ಟಳಾಗಿ ಮಾಡಿದೆವೋ, ಆ ಮಹಿಳೆಯೇ ಪ್ರಚಂಡ ಸೈನ್ಯದ ಆಧಿಪತ್ಯವನ್ನು ವಹಿಸಲು ಸಂಪೂರ್ಣ ಸಾಮರ್ಥ್ಯವುಳ್ಳವಳು ಎಂದು ಈಗ ತಿಳಿಯಬಂದಿತು. ”-ಎಡ್ಡಿನು ಆರೋಲ್ಲು ದೊರೆ.