ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೪ ಅಬಲಾ ಸಚ್ಚರಿತ್ರ ರತ್ನ ಮಾಲೆ. ಹೇಳುತ್ತಾರೆ. ಈಕೆಯು ತಮ್ಮ ನಗರದಲ್ಲಿದ್ದ ಆಂಗ್ಲಯ ರಾಯಭಾರಿಯೊಡನೆ ವಿಶೇಷ ಸ್ನೇಹವನ್ನು ತೋರಲಿಲ್ಲವಾದಕಾರಣ ಆತನು ಆ ದೇಶದಲ್ಲಿರುವ ಆಂಗ್ಲ ಯರ ಇಲಾಖೆಗೆ ಹೋದನು. ಗಂಭೀರಳಾದ ಈ ರಾಣಿಯು ಪ್ರಜೆಗಳು ಹೊಗಳುವಂತೆ ರಾಜಕಾರ್ಯ ಗಳನ್ನು ನಿರ್ವಹಿಸುತಲಿದ್ದಳು, ಈಕೆಯು ದೀರ್ಘಕಾಲ ರಾಜ್ಯವನ್ನು ಪಾಲಿಸಿ ದಳು, ಮತಿಭ್ರಮೆಯು ಹೋದನಂತರ ಈಕೆಯಪತಿಯು ಕೆಲವುದಿವಸ ರಾಜ್ಯಭಾರವನ್ನು ಮಾಡಿದನು. ಸತಿಯು ರಾಜ್ಯಭಾರವನ್ನು ಮಾಡುವ ಕಾಲ ದಲ್ಲಿ ಈಕೆಯು ಪತಿಸೇವಾತತ್ತರಳಾಗಿದ್ದಳು. ೧೮೦೫ ನೆಯ ಇಸವಿಯಲ್ಲಿ ರಾಜನು ಮೃತನಾದನು. ತದನಂತರ ಈಕೆಯು ಭೀಮಸೇನ ಎಂಬ ಆತನನ್ನು ಮಂತ್ರಿಯಾಗಿ ನಿಯಮಿಸಿಕೊಂಡು ಚಾತುರ್ಯದಿಂದ ರಾಜ್ಯವನ್ನು ಪಾಲಿಸಿದಳು. ಪತಿಯಿಂದ ತಿರಸ್ಕರಿಸಲ್ಪಟ್ಟರೂ, ಸಪತ್ನಿಯಿಂದ ಪರಾಭವವನ್ನು ಹೊಂದಿದರೂ, ಪಾತಿವ್ರತ್ಯ, ಕ್ಷಾತ್ರಗುಣ ಮೊದಲಾದ ಸದ್ಗುಣಗಳನ್ನು ತ್ಯಜಿಸದೆ, ಧೈರ್ಯ ದೊಡನೆ ತನಗೆ ಯೋಗ್ಯವಾದ ಹಕ್ಕುಗಳನ್ನು ಶೌರ್ಯದಿಂದ ಸಂಪಾದಿಸಿ, ಶತ್ರುಗಳನ್ನು ಸಹ ದಯಾದ್ರ್ರಹೃದಯದೊಡನೆ ಕಾಣುತ್ತ, ಸಕಲ ಜನರು ಹೊಗಳುವಂತೆ ರಾಜ್ಯಭಾರವನ್ನು ನಡೆಸಿದ ಸತೀಮಣಿಯು ಸ್ತುತ್ಯರ್ಹಳಲ್ಲವೆ ! ಲೀಲಾವತಿ. ಗಣಿತಶಾಸ್ತ್ರಪಂಡಿತನೆಂದು ಪ್ರಸಿದ್ದಿಯನ್ನು ಹೊಂದಿದ ಭಾಸ್ಕರಾಚಾರ್ಯ ನಿಗೆ ಲೀಲಾವತಿ ಎಂಬೊಬ್ಬ ಕುಮಾರಿಯು ಇದ್ದಳು. ಸಿದ್ದಾಂತಶಿರೋಮಣಿ ಎಂಬ ಗ್ರಂಥದಲ್ಲಿ ಭಾಸ್ಕರಾಚಾರ್ಯರು, ತಾವು ಆ ಗ್ರಂಥವನ್ನು ಶಾಲಿವಾಹನ ಶ, ೧೦೭೬೨ ನೆಯ ಇಸವಿಯಲ್ಲಿ ರಚಿಸಿದೆವೆಂದು ಬರೆದಿರುವುದರಿಂದ ಲೀಲಾ ವತಿಯು ೧೨ ನೆಯ ಶತಾಬ್ದ ದಲ್ಲಿದ್ದಳೆಂದು ತಿಳಿಯಬರುತ್ತದೆ. ಲೀಲಾವತಿಯು ಬಾಲವಿತಂತುವಾದ ಕಾರಣ ಆಕೆಯ ಪತಿಯವಂಶವು ತಿಳಿಯಬರುವುದಿಲ್ಲ. ಆದಕಾರಣ ಈಕೆಯಚರಿತ್ರೆಯನ್ನು ತಿಳಿಯಲು ಸಂಭವಾಸಂಭವಗಳಾದ ಕೆಲವು ಕಥೆಗಳಲ್ಲದೆ ಬೇರೆಆಧಾರವಿಲ್ಲ. ಆದುದರಿಂದ ಆ ಕಥೆಗಳಲ್ಲಿ ಕೆಲವನ್ನಿಲ್ಲಿ ಬರೆಯುವೆನು. ಭಾಸ್ಕರಾಚಾರ್ಯನು ಜ್ಯೋತಿಷ್ಯದಲ್ಲಿ ಪ್ರವೀಣನಾದುದರಿಂದ ಲೀಲಾ ವತಿಗೆ ವೈಧವ್ಯವುಂಟಾಗುವುದೆಂದು ಜಾತಕದಿಂದ ತಿಳಿದುಕೊಂಡನು. ಆತನು