ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೈಸೂರು ಮಹಾರಾಣಿ ಲಕ್ಷಮಣ . ಕೃಷ್ಣರಾಜನ ಪತ್ನಿಯೇ ನಮ್ಮ ಚರಿತ್ರನಾಯಿಕ, ಈತನು ಸಿಂಹಾಸನಕ್ಕೆ ಮುಖ್ಯ ಸರದಾರನಾದುದರಿಂದ ಜಮ್ಮಣ್ಣೀದೇವಿಯು ಈತನ ಹೆಸರಿನಲ್ಲಿ ತಾನು ರಾಜ್ಯ ಭಾರವನ್ನು ಮಾಡಲು ಯತ್ನಿಸಿದಳು. ಆದರೆ ಮಹಾಯೋಧನಾದ ಹೈದರನು, ಈ ವಿಷಯವನ್ನೆಲ್ಲ ಅರಿತು ಇದಕ್ಕೆ ಕಾರಣಭೂತನಾದ ಖಂಡೇರಾಯನನ್ನು ಬಂಧಿಸಿ ಪಂಜರದಲ್ಲಿ ಇಡಿಸಿದನು. ದಿನದಿನಕ್ಕೆ ಹೈದರನ ಅಧಿಕಾರವು ಅಧಿಕ ವಾಗಲು ೧೭೬೧ ನೆಯ ಇಸವಿಯಲ್ಲಿ ಸರ್ವಾಧಿಕಾರವನ್ನೂ ತಾನೇ ವಹಿಸಿ ಕೃಷ್ಣರಾಜಭೂಪನನ್ನು ಚತುರಂಗದೊಳಗಿನ ರಾಜನಂತೆ ನೋಡುತಲಿದ್ದನು. ಇಮ್ಮಡಿ ಕೃಷ್ಣರಾಜ ಭೂಪನು ೧೭೬ ನೆಯ ವರ್ಷದಲ್ಲಿ ಗತಿಸಿದನು. ಆತನಿಗೆ ಮೃತ್ಯು ಸಮಯದಲ್ಲಿ ನಂಜರಾಜ, ಚಾಮರಾಜ ಎಂಬ ಇಬ್ಬರು ಪುತ್ರರು ಇದ್ದರು. ಅವರು ರಾಜ್ಯ ಪದವಿಗೆ ಅರ್ಹರಾದರೂ ಹೈದರನು ಅವರಿಗೆ ಅಧಿಕಾರವನ್ನು ಸ್ವಲ್ಪವೂ ಕೊಡದೆ ತಾನೇ ರಾಜ್ಯಭಾರವನ್ನು ನಡೆಯಿಸುತಿದ್ದನು, ನಂಜರಾಜನು ಗುಪ್ತವಾಗಿ ಮರಾಟಾ ಸರದಾರನಾದ ತ್ರಿಯಂಬಕರಾವಿನೊಡನೆ ರಾಜ್ಯದ ವಿಷ ಯವನ್ನು ಕುರಿತು ಆಲೋಚಿಸುತಲಿರುವನು ಎಂದು ಕೇಳಿ ಹೈದರನು ಆತನನ್ನು ಶೂಲಕ್ಕೆ ಏರಿಸಿ ವಧೆಮಾಡಿದನು, “ ಚಾಮರಾಜನೂ ಹೈದರಿನ ಬಾಧೆಯಿಂದಲೇ ೧೭೭೬ ನೆಯ ಇಸವಿಯಲ್ಲಿ ಮೃತನಾದನು. ಸಿಂಹಾಸನಾರೂಢರಾಗಲು ಅರ್ಹ ರಾದ ಬಾಲಕರು ಇಬ್ಬರೂ ಮೃತ್ಯು ಮುಖದಲ್ಲಿ ಬಿದ್ದುದರಿಂದ ತನ್ನನ್ನು ಎದುರಿಸು . ವರು ಯಾರೂ ಇಲ್ಲವೆಂದು ಹೈದರನು ಪರಮಾನಂದಭರಿತನಾದನು. ಅಷ್ಟರ ವರೆಗೂ ಅಂತಃಪುರದಲ್ಲಿ ಬಂಧಿಯಾಗಿದ್ದ ಮಹಾರಾಣಿ ಲಕ್ಷ್ಮಮ್ಮಣ್ಣಿಯು ಒಂದೇ ಸಲ ವಿಪತ್ಸಾಗರ ಮಧ್ಯದಲ್ಲಿ ಮುಳುಗಿದಂತಾಯಿತು. ಪ್ರಿಯತಮನಾದ ಪತಿಯೂ, ಪ್ರಾಣಾಧಿಕರಾದ ಪುತ್ರರೂ ಹೈದರನ ಬಾಧೆಯಿಂದ ಮೃತರಾದರೆಂತಲೂ, ತಾನು ದುಷ್ಟನಾದ ಹೈದರನ ಕೈಯಲ್ಲಿ ಇರುವೆನೆಂತಲೂ ಆಕೆಯು ವ್ಯಸನದಿಂದ ಕೃಶಿ ಸುತಲಿದ್ದಳು. ಹೀಗೆ ಅಧಿಕ ದುಃಖದಿಂದ ಪೀಡಿತಳಾಗಿ ಕೆಲವು ತಿಂಗಳವರೆಗೂ ಏನೂ ತೋರದೆ ಸುಮ್ಮನಿದ್ದಳು. ಹೀಗಿರಲು ಒಂದು ದಿವಸ, ಪ್ರಾಚೀನವಾದ ಹಿಂದೂರಾಜ್ಯವು ನಿರ್ನಾಮವಾಗಿ ಹೋಗುವುದು ಎಂತಲೂ, ನಾವು ಸುಮ್ಮ ನಿದ್ದರೆ ತುರುಕರು ರಾಜ್ಯವನ್ನೆಲ್ಲ ಆಕ್ರಮಿಸಿಕೊಳ್ಳುವರು ಎಂತಲೂ ಒಂದು ಘನ ವಾದ ವಿಚಾರವು ಮನಸ್ಸಿಗೆ ತೋರಿತು, ಮೈಸೂರಿನಲ್ಲಿ ಹಿಂದೂ ಸಿಂಹಾಸನವು ನಷ್ಟವಾಗಿ ಯವನ ಸಿಂಹಾಸನವು ಸ್ಥಾಪಿತವಾಗುವುದು ಎಂಬ ವಿಷಯವು ಆಕೆಯಮನಸ್ಸಿಗೆ ತೋರಿದ ಕೂಡಲೆ ಆಕೆಯಲ್ಲಿ ಅಷ್ಟರವರೆಗೂ ಅಡಗಿದ್ದ ಸ್ವಾಭಿಮಾನವೆಂಬ ತೇಜವು ಪ್ರಕಾಶಗೊಂಡಿತು, ಅನಂತರ ಆಕೆಯು ತನ್ನ ದುಃಖವನ್ನು ಧೈರ್ಯದಿಂದ ತಡೆದುಕೊಂಡು, ಹಿಂದೂರಾಜ್ಯ ರಕ್ಷಣೋಪಾಯ ವನ್ನು ಹುಡುಕಲಾರಂಭಿಸಿದಳು. ಆಕೆಯು ಇದಕ್ಕೆ ಪೂರ್ವ ರಾಜ್ಯ ವಿಷಯದಲ್ಲಿ ಪ್ರವೇಶಿಸಿದವಳಲ್ಲ. ಆದುದರಿಂದ ಸಮಯಾನುಕೂಲವಾದ ರಾಜಕಾರ್ಯಗಳ