8 ಅಬಲಾ ಸಚ್ಚರಿತ್ರ ರತ್ನ ಮಾಲೆ. ಎಲ್ಲರಿಗೂ ಭಯವನ್ನು ಹುಟ್ಟಿಸುತ್ತ, ಎರಡುಜಾವಗಳು ಯುದ್ಧವನ್ನು ನಡೆಸಿ, ದಾದೋಜಿಯ ಸೈನ್ಯಗಳನ್ನು ದಿಕ್ಕು ದಿಕ್ಕಿಗೆ ಓಡಿಸಿ ಕೋಟೆಯ ದ್ವಾರವನ್ನು ತೆರೆದಳು! - ಅನಂತರ ಯೇಸಾಜಿಯು ಪುನಃ ಏಳೆಂಟು ಸಾವಿರ ಸೈನ್ಯಗಳನ್ನು ತಂದು ಕೋಟೆಗೆ ಮುತ್ತಿಗೆ ಹಾಕಿದನು. ಆಗಲೂ ಸಾವಿತ್ರಿಬಾಯಿಯು ಧೈರ್ಯಗೆಡದೆ ಯುದ್ಧ ಕೈನಿಂತಳು. ಆದರೆ ಈಸಲ ಆಕೆಯ ಬಳಿಯಲ್ಲಿ ಸೈನಿಕರು ಬಹು ಸ್ವಲ್ಪವಾಗಿದ್ದರು. ಆಕೆಯು ತನ್ನ ಭಟರು ಧೈರ್ಯಹೀನರಾದಂತೆ ತೋರಲು, ತನ್ನ ಕಂಠದಲ್ಲಿದ್ದ ಹಾರಗಳನ್ನು ತೆಗೆದು ಅವರಿಗೆ ಬಹುಮಾನವಾಗಿ ಕೊಟ್ಟು ಉತ್ಸಾಹವನ್ನು ಉಂಟುಮಾಡಿದಳು. ಅವರು ಉತ್ಸಾಹಪೂರಿತರಾಗಿ ಯುದ್ಧ ವನ್ನು ಮಾಡಿ ಮಡಿಯುತಲಿದ್ದರು, ದಾದೋಜಿಯು ಇನ್ನೂ ಕೆಲವು ಸಾವಿರ ಸೈನ್ಯಗಳನ್ನು ತಂದು ಸಾವಿತ್ರಿಬಾಯಿಯನ್ನು ಸುತ್ತಿಕೊಂಡು, ಆಕೆಯ ಕುದುರೆಯ ಹಿಂಗಾಲುಗಳನ್ನು ಕಡಿದನು, ಅದರಿಂದ ಆಕೆಯು ಕೂಡಲೆ ಕುದುರೆಯಿಂದ ಇಳಿದಳು. ದಾದೋಜಿಯು ಆಕೆಯ ಬಲಗೈಯನ್ನು ಕತ್ತರಿಸಲು, ಖಡ್ಡ ಸಹಿತ ವಾದಾಹಸ್ತವು ಕಳಚಿಬಿದ್ದಿತು. ಆಕೆಯು ಹಸ್ತವು ಹೋದುದಕ್ಕಿಂತಲೂ ಖಡ್ಗವು ಹೋದುದಕ್ಕೆ ವಿಶೇಷ ವ್ಯಥಿತಳಾದಳು ! - ಅನಂತರ ದಾದೋಜಿಯು ಶಿವಾಜಿಯ ಪತಾಕವನ್ನು ಕೋಟೆಯಮೇಲೆ ನೆಡಿಸಿ, ಪಟ್ಟಣದಲ್ಲಿ ತಮ್ಮ ವಿಜಯವನ್ನು ಸಾರಿ, ಸಾವಿತ್ರಿಬಾಯಿಯನ್ನು ಕರೆದು ಕೊಂಡು ಕೋಲಾಪುರಕ್ಕೆ ಹೋದನು. ದಾದೋಜಿಯು ಅಲ್ಲಿ ಶಿವಾಜಿಯ ಬಳಿಯಲ್ಲಿ ಸಾವಿತ್ರೀಬಾಯಿಯ ಧೈರ್ಯಸ್ಟ್ರ್ಯಗಳನ್ನೂ, ಯುದ್ಧವಿಶಾರದತ್ವ ವನ್ನೂ, ದೃಢನಿಶ್ಚಯವನ್ನೂ, ಇತರ ಸದ್ಗುಣಗಳನ್ನೂ ವರ್ಣಿಸಲು, ಶಿವಾಜಿಯು ಆಶ್ಚರ್ಯಾನ್ವಿತನಾಗಿ ಆಕೆಯನ್ನು ತನ್ನ ಸವಿಾಪಕ್ಕೆ ಕರೆಯಿಸಿದನು. ಶಿವಾಜಿಗೆ ಆಕೆಯನ್ನು ನೋಡಿದೊಡನೆಯೇ ಪಶ್ಚಾತ್ತಾಪವು ಉಂಟಾಯಿತು. ಅದರಿಂದ ಆತನು ಸಾವಿತ್ರಿಬಾಯಿಗೆ ಅನೇಕ ಸಮಾಧಾನ ವಚನಗಳನ್ನು ಹೇಳಿ, ಮರಳಿ ರಾಜ್ಯವನ್ನು ಕೊಡುವೆನು ಎಂದು ಹೇಳಿದನು, ಆದರೆ ಸಾವಿತ್ರಿಬಾಯಿಯು ಆ ಮಾತುಗಳನ್ನು ಆಲೈಸದೆ “ ನನಗೆ ಯಾವುದೂ ಬೇಡ ; ನನ್ನ ವಂಶದಲ್ಲಿಲ್ಲದ ಅಪಕೀರ್ತಿಯು ನನ್ನಿಂದ ಉಂಟಾಯಿತು. ನನ್ನ ಖಡ್ಗವನ್ನೂ, ಶತ್ರುವನ್ನೂ ನನ್ನ ವಶಮಾಡಿ ; ಇಲ್ಲದಿದ್ದರೆ ಈಗಲೆ ನನ್ನ ಕಂಠವನ್ನು ಕತ್ತರಿಸಿ ಪುಣ್ಯವನ್ನು ಪಡೆಯಿರಿ, ” ಎಂದು ನುಡಿದಳು. ಶಿವಾಜಿಯು ಆಕೆಯು ಬೇಡಿದುದನ್ನು ಕೊಡ ಲಾರದೆ ಆಕೆಯನ್ನು ಮನೆಗೆ ಕಳುಹಿಸಿದನು. ಆ ವೀರಸಾದ್ವಿ ಯು ತನಗೆ ಉಂಟಾದ ಅಪಜಯವನ್ನು ಸೈರಿಸಲಾರದೆ ದುಃಖದಿಂದ ಕೃಶಿಸಿ ಎರಡು ಮೂರು ತಿಂಗಳಿಗೆಲ್ಲ ಮೃತಳಾದಳು.
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೮೩
ಗೋಚರ