ವಾಕು ಪ್ರಾ ಇ3ಅ ಈ ಪುಣ್ಯಶೀಲೆಯು ಕಾಶ್ಮೀರಾಧಿಪತಿಯಾದ ತುಂಜೀನನ ಪತ್ನಿ, ಈತನು ಪ್ರಜೆಗಳಲ್ಲಿ ವಾತ್ಸಲ್ಯವುಳ್ಳವನಾಗಿ ಧರ್ಮದಿಂದ ಧರಣಿಯನ್ನು ಪರಿಪಾಲಿಸಿದನು. ಈತನ ಕಾಲದಲ್ಲಿಯೇ ಒಂದು ಸಮಯದಲ್ಲಿ ಕಾಶ್ಮೀರದೇಶದಲ್ಲಿ ಮಹಾಕ್ಷಾಮವು ಪ್ರಾಪ್ತವಾಯಿತು. ಕ್ಷಾಮವು ಸಂಭವಿಸಲು ಕಾರಣವು ಏನಂದರೆ ಕುಯಿಲಿಗೆ ಸಿದ್ದವಾಗಿದ್ದ ಪೈರುಗಳಮೇಲೆ ಮಂಜು ವಿಶೇಷವಾಗಿ ಸುರಿದು ಧಾನ್ಯವನ್ನೆಲ್ಲ ಸಂಪೂರ್ಣವಾಗಿ ನಾಶಮಾಡಿತು. ಇದರಿಂದ ಪ್ರಜೆಗಳು ಅನ್ನಾ ತುರರಾಗಿ ತಿರುಗಾಡಲಾರಂಭಿಸಿದರು. ರಾಜದಂಪತಿಗಳು ಪ್ರಜೆಗಳ ಸಂಕಟವನ್ನು ನೋಡಿ ಧನಾಗಾರದಲ್ಲಿರುವ ದ್ರವ್ಯದಿಂದ ಧಾನ್ಯವನ್ನು ತರಿಸಿ ಪ್ರಜೆಗಳಿಗೆ ಅನ್ನವನ್ನು ಇಡಿಸುತಲಿದ್ದರು, ಪ್ರಜೆಗಳು ಸಂತುಷ್ಟರಾದರು. ಕೆಲವು ದಿವಸಗಳಿಗೆ ಭಂ ಡಾರವು ಬರಿದಾಯಿತು. ರಾಜನು ಮಂತ್ರಿಯ ಸಹಾಯದಿಂದ ಕೆಲವು ದಿವಸಗಳು ಪ್ರಜೆಗಳನ್ನು ಪೋಷಿಸಿದನು. ನಾಕ್ಷುಷ್ಟೆಯು ತನ್ನ ಆಭರಣಗಳನ್ನೆಲ್ಲ ವಿಕ್ರಯಿಸಿ ಧಾನ್ಯವನ್ನು ತರಿಸಿದಳು. ಆ ಸ್ವಲ್ಪ ದ್ರವ್ಯದಿಂದ ತರಿಸಿದ ಧಾನ್ಯವು ಎಷ್ಟು ದಿವಸಗಳಿಗೆ ಸಾಕಾಗುವುದು ? ಅದೂ ಮುಗಿದುಹೋಯಿತು. ಅಂದಿನಿಂದ ಕ್ಷಾಮದೊಡನೆ ಅನೇಕವ್ಯಾಧಿಗಳು ತಲೆದೋರಿದವು, ಜನನೀ ಜನಕರು ತಮ್ಮ ಮಕ್ಕಳ ಮೇಲೆ ನಿರ್ದಯರಾದರು. ಭಾರ್ಯಾಭರ್ತರು, ಪರಸ್ಪರ ಇರಬೇಕಾದ ಪವಿತ್ರವಾದ ದಾಂಪತ್ಯ ಪ್ರೇಮವನ್ನು ತ್ಯಜಿಸಿದರು. ಸೋದರ ಪ್ರೇಮವು ರೂಪವಿಲ್ಲದೆ ಹೋಯಿತು. ಆಹಾರಕ್ಕಾಗಿ ಎಲ್ಲರೂ ಮನಸ್ಸು ಬಂದಂತೆ ತಿರುಗಾಡುತಲಿದ್ದರು, ಅನ್ನಾಭಾವದಿಂದ ಅನೇಕರು ಮೃತರಾದರು. ವೃದ್ದರು, ಬಾಲರು, ತರುಣರು ಎಂಬ ಬೇಧವಿಲ್ಲದೆ ಎಲ್ಲರೂ ಕೃತಾಂತನಿಗೆ ಗ್ರಾಸ ನಾದರು. ಕಳೆದುಳಿದವರು ನೋಡುವುದಕ್ಕೆ ಅತಿವಿಕಾರರೂಪಿಗಳಾಗಿ ಭಯವನ್ನು ಹುಟ್ಟಿಸುತಲಿದ್ದರು. ಆ ಸಮಯದಲ್ಲಿ ಕಾಶ್ಮೀರದೇಶವು ದಂಡಧರಪುರದಂತೆ ತೋರುತಲಿತ್ತು, ಒಂದುದಿವಸರಾತ್ರಿ ಪುರಜನರು ಅನ್ನಕ್ಕಾಗಿ ರಾಜಗೃಹವನ್ನು ಮುತ್ತಿಕೊಂಡು ಆಕ್ರಂದನ ಮಾಡಲಾರಂಭಿಸಿದರು, ಕ್ಷಾಮದಿಂದಲೂ, ರೋಗ ದಿಂದಲೂ ಪೀಡಿತರಾದ ಆ ದೀನರ ಅವಸ್ಥೆಯನ್ನು ನೋಡಿ ನಾಕ್ಷುಷ್ಟೆಯು ಚಿಂತಾ ಕ್ರಾಂತಳಾಗಿ ನಿವಾರಣೋಪಾಯವನ್ನು ಅರಿಯದೆ, ಪತಿಯ ಭುಜದಮೇಲೆ ತಲೆ ಯನ್ನು ಇಟ್ಟು ಕೊಂಡು ದೈವವನ್ನು ಪ್ರಾರ್ಥಿಸುತಲಿದ್ದಳು. ತು೦ಜೀನನು ವ್ಯಾಕುಲ ಚಿತ್ತದೊಡನೆ ಪತ್ನಿಯನ್ನು ಕುರಿತು ಕಾಂತಾಮಣೀ ! ನಾವು ಮಾಡಿದ ಪಾಪದ
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೮೪
ಗೋಚರ