ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಬ೮ ೨೬೦ ಅಬಲಾ ಸಚ್ಚರಿತ್ರ ರತ್ನ ಮಾಲೆ. ದೆಸೆಯಿಂದ ನಮ್ಮ ಪ್ರಜೆಗಳಿಗೆ ಇಂತಹ ದುರ್ದೆಶೆಯು ಉಂಟಾಯಿತು. ಪ್ರಜೆ ಗಳ ಹಸಿವನ್ನು ನಿವಾರಣೆ ಮಾಡಲು ನಾವು ಮಾಡಿದ ಪ್ರಯತ್ನಗಳೆಲ್ಲವು ನಿಷ್ಪಲವಾದವು. ಮಕ್ಕಳಂತೆ ಸಲಹಿದ ಪ್ರಜೆಗಳು ನಾಶವಾದರು. ಇನ್ನೂ ನಾಶವಾಗುತಲಿದಾರೆ. ರಾಜ್ಯದಲ್ಲಿ ಎಲ್ಲಿ ನೋಡಿದರೂ ಪತಿಗಳಿಗಾಗಿ ದುಃಖಿಸುವ ಸತಿಯರೂ, ಪುತ್ರರಿಗಾಗಿ ಶೋಕಿಸುತಲಿರುವ ಜನನೀ ಜನಕರೂ, ಅನ್ನಕ್ಕಾಗಿ ತಪಿಸುವ ಜನರೂ ಅಸಂಖ್ಯವಾಗಿ ಕಾಣಬರುತಲಿದಾರೆ, ಪ್ರಪಂಚದಲ್ಲಿ ಇದ ಕ್ಕಿಂತಲು ದುಃಖಕರವಾದ ಸಮಯವು ಸಂಭವಿಸುವುದೇ ? ರತ್ನಗಳಿಂದಲೂ, ಸುವರ್ಣರಜಿತಾದಿ ದ್ರವ್ಯಗಳಿಂದಲೂ, ಧಾನ್ಯ ಸಮೃದ್ಧಿಯಿಂದಲೂ ಒಪ್ಪಿ ಸುಂದರವಾಗಿ ಕಾಣಿಸುತಲಿದ್ದ ಕಾಶ್ಮೀರದೇಶವು ಈ ದಿವಸ ಸ್ಮಶಾನತುಲ್ಯವಾಗಿ ಕಾಣಿಸುತಲಿದೆ. ನಾಲ್ಕು ಕಡೆಯಲ್ಲಿಯೂ ಸುತ್ತಿಕೊಂಡಿರುವ ವಿಪತ್ಸಮುದ್ರದಲ್ಲಿ ಬಿದ್ದಿರುವ ಈ ದೀನರಿಗೆ ತರಣೋಪಾಯವು ಯಾವುದು ? ಈ ದುಸ್ಸಹವಾದ ಪ್ರಜಾದುಃಖವನ್ನು ನಾನು ನೋಡಲಾರೆನು. ಆದಕಾರಣ ಅಗ್ನಿಗುಂಡದಲ್ಲಿ ಬಿದ್ದು ಪ್ರಾಣಪರಿತ್ಯಾಗವನ್ನು ಮಾಡಿ ನನ್ನ ಖೇದವನ್ನು ಹೋಗಲಾಡಿಸಿಕೊಳ್ಳು ವೆನು, ತನ್ನ ಪ್ರಜೆಗಳು ರಾತ್ರಿ ಸುಖವಾಗಿ ನಿದ್ರಿಸುವುದನ್ನು ನೋಡುವ ರಾಜನು ಎಷ್ಟು ಪುಣ್ಯಶಾಲಿಯೋ ? ಪ್ರಾಣೇಶ್ವರೀ ನಮಗೆ ಇಂತಹ ದುರವಸ್ಥೆಯು ಉಂಟಾಗಲು ನಾವು ಮಾಡಿದ ಘೋರಪಾತಕವು ಎಂತಹುದುದೋ ಎಂದುಸುರಿ ಮೂರ್ಛಿತನಾದನು. ಪತಿಯ ವಾಕ್ಯಗಳನ್ನು ಆಲೈಸುತಲಿದ್ದ ವಾಕ್ಷುಷ್ಟೆಯು ತನ್ನ ಪತಿಯ ಸ್ಥಿತಿ ಯನ್ನು ನೋಡಿ ಶೈತ್ಯೋಪಚಾರಗಳಿಂದ ಆತನಿಗೆ ಎಚ್ಚರಿಕೆಯನ್ನು ಉಂಟು ಮಾಡಿ “ ತಾವು ಇಷ್ಟು ವ್ಯಸನಪಡುವುದು ಅನುಚಿತವಾದುದು, ಇಂತಹ ಸಮಯದಲ್ಲಿ ಅಧೈರ್ಯವನ್ನು ತೋರಿದರೆ ತಮ್ಮ ಗೌರವವು ನಿಲ್ಲುವುದೇ ? ಅಜ್ಞಾನಿಗಳಂತೆ ಅಧೈರ್ಯವನ್ನು ವಹಿಸಿದರೆ ಲಾಭವೇನು ? ಇಂದ್ರನಾಗಲಿ, ಯಮನಾಗಲಿ, ಬ್ರಹ್ಮನಾಗಲಿ ಸತ್ಯಶೀಲನಾದ ರಾಜನನ್ನು ಕೆಡಿಸಲಾರರು. ರಾಜನು ಪ್ರಜೆಗಳಿಗೆ ಪಿತೃ ಸಮಾನನು. ಸಾಯಲು ಸಿದ್ದರಾಗಿರುವ ಪುತ್ರರನ್ನು ಬಿಟ್ಟು ಹೋಗುವುದು ತಂದೆಗೆ ಧರ್ಮವಲ್ಲ. ಸತಿಯು ಪತಿಯಲ್ಲಿ ಭಕ್ತಿಯುತ ಳಾಗಿರುವುದು ಹೇಗೆ ಕರ್ತವ್ಯವಾದುದೋ ಹಾಗೆಯೇ ಪ್ರಜೆಗಳನ್ನು ಸರ್ವಕಾಲ ಗಳಲ್ಲಿಯೂ ಪ್ರೇಮದಿಂದ ನೋಡಿಕೊಳ್ಳು ವುದು ರಾಜನ ಕರ್ತವ್ಯ, ಆತ್ಮ ಹತ್ಯೆಯು ಪಂಚಮಹಾಪಾತಕಗಳಲ್ಲಿ ಒಂದು ಎಂದು ದೊಡ್ಡವರು ಹೇಳುತ್ತಾರೆ. ಅಂತಹ ಪಾತಕವನ್ನು ಮಾಡಲು ಪ್ರಯತ್ನಿಸಲೇಕೆ ? ಆಶಾಂಕುರವನ್ನು ಎಂದಿಗೂ ನಾಶಪಡಿಸಕೂಡದು. ನಾವು ಉಳಿಸುವುದಕ್ಕೂ ನಮ್ಮನ್ನು ಆಶ್ರ ಯಿಸುವುದಕ್ಕೂ ಒಂದು ಪ್ರಾಣಿಯು ಸಹ ಇಲ್ಲದಿರುವಾಗ ನಾವು ಪ್ರಾಣತ್ಯಾಗ ವನ್ನು ಮಾಡೋಣ ” ಎಂದು ನುಡಿದಳು,