೨೬೧ ರಾಣಿಔ #ುವರು. ಈ ವಾಕ್ಯಗಳನ್ನು ಉಚ್ಚರಿಸುವಾಗ ವಾಕ್ಷುಷ್ಠೆಯ ಶರೀರದಲ್ಲೊಂದು ಕಾಂತಿಯು ಉಂಟಾಯಿತು. ಆಗ ಆಕೆಯು ಪರಮೇಶ್ವರನನ್ನು ಏಕಾಗ್ರಚಿತ್ರ ದಿಂದ ಭಜಿಸಿ, ಪತಿಯೊಡನೆ “ ಏಳಿ, ತಾವು ಇನ್ನು ಚಿಂತಿಸಬೇಡಿ ನಮ್ಮ ಪ್ರಜೆ ಗಳು ಕ್ಷಾಮದಿಂದ ರಕ್ಷಿಸಲ್ಪಡುವರು ” ಎಂದಳು. ಪರಮಪತಿವ್ರತೆಯ ವಾಕ್ಯಗಳು ಎಂದಿಗೂ ಸುಳ್ಳಾಗಲಾರದು. ಪವಿತ್ರ ಳಾದ ವಾಕ್ಷುಷ್ಠೆಯ ಮಾತುಗಳು ಸತ್ಯವಾದವು. ಮಾರನೆಯದಿವಸ ಸಾವಿರಗಟ್ಟಿ ಕಪೋತಗಳು ಆ ಪುರದೊಳಗೆ ಸತ್ತು ಬಿದ್ದುವು, ಪ್ರಜೆಗಳು ಅವುಗಳನ್ನೇ ತಿಂದು ಬದುಕಿದರು, ಇತಿಹಾಸಜ್ಞರಾದವರು ಸ್ಕಾಟ್ಲಂಡ್ ಚರಿತ್ರೆಯಲ್ಲಿ ಇಂತಹ ಅದ್ಭುತವು ನಡೆದುದನ್ನು ಅರಿತಿರಬಹುದು. ಆದುದರಿಂದ ಅವರಿಗೆ ಇದು ಅಸಂಭವವಾದುದು ಎಂದು ತೋರಲಾರದು. ತು೦ಜೀನನು ತನ್ನ ಭಾರ್ಯೆಯಲ್ಲಿ ಇಂತಹ ಅಸಾಮಾನ್ಯ ಗುಣವಿರುವುದನ್ನು ಕಂಡು ಆತ್ಮಹತ್ಯೆಯ ಪ್ರಯತ್ನವನ್ನು ಬಿಟ್ಟನು. ಕಾಶ್ಮೀರವಾಸಿಗಳು ಸುಸ್ಥಿರರಾದರು. ನಾಕ್ಷುಷ್ಠೆಯ ಪುಣ್ಯ ಚರಿತೆ ಯಿಂದ ಅನತಿಕಾಲದಲ್ಲಿಯೇ ಕಾಶ್ಮೀರದೇಶವು ಧನಧಾನ್ಯ ಸಮೃದ್ಧವಾಗಿ ಪ್ರಜೆ ಗಳು ಸುಖಸಂಪತ್ತು ಗಳನ್ನು ಹೊಂದಿದರು. ತುಂ ಜೀನನು ರಾಜ್ಯ ಭೋಗಗಳನ್ನು ಅಲ್ಪ ಕಾಲಮಾತ್ರವೇ ಅನುಭವಿಸಿ, ತನ್ನ ಮುವ್ವತ್ತಾರನೆಯ ವರ್ಷದಲ್ಲಿ ಮೃತನಾದನು. ನಾಕುಷ್ಟೆಯು ಸಹಗಮನ ವನ್ನು ಮಾಡಿದಳು. ರಾಣಸ್ಸುವರು. ರಾ? -:೦:--- ಈಕೆಯು ಪಂಜಾಬುದೇಶಕ್ಕೆ ಸೇರಿದ ಪಟಯಾಲ ಸಂಸ್ಥಾನವನ್ನು ಪಾಲಿಸಿದ ರಾಜಾಸಾಹೇಬ್ ಸಿ೦ಹನ ಪತ್ನಿ, ಈತನು ೧೮ ನೆ ಶತಾಬ್ದಾಂತ್ಯ ದಲ್ಲಿಯೂ, ೧೯ ನೆಯ ಶತಾಬ್ಧಾದಿಯಲ್ಲಿಯೂ ರಾಜ್ಯವನ್ನು ಪಾಲಿಸುತಲಿದ್ದನು. ಈತನು ವಿಚಾರಶೂನ್ಯನೂ, ರಾಜ್ಯಪಾಲನಾಶಕ್ತಿಹೀನನೂ, ದುಸ್ಸಹವಾಸವುಳ್ಳ ವನೂ ಆಗಿದ್ದುದರಿಂದ ಕ್ರಮಕ್ರಮವಾಗಿ ರಾಜ್ಯವು ಅತ್ಯಂತ ಹೀನಸ್ಥಿತಿಗೆ ಬರ ಲಾರಂಭಿಸಿತು, ರೈತರು ಕಂದಾಯವನ್ನು ತೆರತ್ತಿರಲಿಲ್ಲ. ನೌಕರರು ತಮ್ಮ ಮೇಲಿನ ಅಧಿಕಾರಿಗಳ ಮಾತನ್ನು ಕೇಳುತ್ತಿರಲಿಲ್ಲ. ರಾಜ್ಯದ ದುರವಸ್ಥೆಯನ್ನು ನೋಡಿ ರಾಜನು ತಾನು ಅದನ್ನು ಸರಿಮಾಡಲಾರೆನು ಎಂದು ತಿಳಿದು, ತನ್ನ
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೮೬
ಗೋಚರ