೨೬೪ ಅಬಲಾ ಸಚ್ಚರಿತ್ರ ರತ್ನ ಮಾಲೆ. ತೋರಿದಂತೆ ವೆಚ್ಚ ಮಾಡಲಾರಂಭಿಸಿದನು. ಇದರಿಂದ ಆತನ ಸ್ವಂತ ದ್ರವ್ಯ ವನ್ನು ಸಹ ಧನಾಗಾರದಲ್ಲಿ ರಕ್ಷಿಸಬೇಕಾಯಿತು. ೧೮೧೩ ನೆಯ ವರ್ಷದಲ್ಲಿ ಈತನು ಕಾಲಗತಿಯನ್ನೈದಿದನು. ಅನಂತರ ಆತನ ಪುತ್ರನಾದ ಕರಮ್‌ಸಿಂಹನು ಸಿಂಹಾಸನಾರೂಢನಾದನು. ಈತನು ಬಾಲಕನಾದುದರಿಂದ, ಆತನ ಹೆಸರಿನಲ್ಲಿ ರಾಣಿಯು ಕೆಲವು ಕಾಲ ರಾಜ್ಯವನ್ನು ಆಳಿದಳು, ಕರಮ್ ಸಿಂಹನು ದೊಡ್ಡವನಾದ ಮೇಲೆ ರಾಜ್ಯವನ್ನು ಪಾಲಿಸುವೆನು ಎಂದು ತಾಯಿಯನ್ನು ಕೇಳಿದನು. ಔಸ್ಸುವರು ಇದಕ್ಕೆ ಸಮ್ಮತಿ ಸದೆ ಪುತ್ರನೊಡನೆ ಕಲಹಿಸಿದಳು. ಕರಮ್ ಸಿಂಹನು ತಾಯಿಗೆ ಸ್ವಲ್ಪ ಧನ ವನ್ನು ಕೊಟ್ಟು ಸಮಾಧಾನಗೊಳಿಸಿ, ಆಕೆಯನ್ನು ಬೇರೊಂದುಸ್ಥಳಕ್ಕೆ ಕಳುಹಿಸಿ ದನು. ಇಲ್ಲಿಗೆ ಈಕೆಯ ರಾಜ್ಯಪಾಲನಾಚರಿತ್ರೆಯು ಮುಗಿಯಿತು, ಈ ರಾಣಿಯು ಸ್ವಲ್ಪ ಮಹತ್ವಾಂಕ್ಷೆಯುಳ್ಳವಳಾದರೂ ಅದು ಸಾಮರ್ಥವಂತರಿಗೆ ಸಹಜವಾದುದರಿಂದ, ಆ ಗುಣವನ್ನು ದೋಷವಾಗಿ ಎಣಿಸಬಾರದು, ಈಕೆ ಯಲ್ಲಿ ವಾಸಮಾಡುತಲಿದ್ದ ಧರ್ಮ, ನೀತಿ, ಸತ್ಯ, ಸ್ವಾಭಿಮಾನ, ಪರಹಿತೇಚ್ಛೆ ಮೊದಲಾದವು ಶ್ಲಾಘನೀಯವಾದವುಗಳು. ಈ ಚರಿತ್ರೆಯಿಂದಲೂ, ಇದಕ್ಕೆ ಪೂರ್ವದಲ್ಲಿ ಬರೆದಿರುವ ರಾಣಿಯರ ಚರಿತ್ರೆಗಳಿಂದಲೂ, ಮುಂದೆಬರೆಯುವ ಚರಿತ್ರೆಗಳಿಂದಲೂ, ಸ್ತ್ರೀಯರು ರಾಜ್ಯ ಪಾಲನೆಯಲ್ಲಿ ಸಮರ್ಥರೆಂತಲೂ, ಅನೇಕ ಸಮಯಗಳಲ್ಲಿ ಪುರುಷರು ತಮ್ಮ. ಬುದ್ದಿಹೀನತೆಯಿಂದ ಹಾಳುಮಾಡಿದ ಕೆಲವು ಸಂಸ್ಥಾನಗಳನ್ನು ಅವರು ಸುಸ್ಥಿತಿಗೆ ತಂದರೆಂತಲೂ ತಿಳಿಯಬರುತ್ತದೆ. ಈ ವಿಷಯವನ್ನು ಕುರಿತು ಕಳೆದ ಶತಾಬ್ದದಲ್ಲಿ ಇಂಡಿಯಾದೇಶದಲ್ಲಿ ವಾಸಮಾಡಿದ ಇಂಗ್ಲೆಂಡಿನ ಒಬ್ಬ ತತ್ವಶಾಸ್ತ್ರಜ್ಞನು ಈ ಪ್ರಕಾರವಾಗಿ ನುಡಿದಿರುವನು :- “ ಈ ವಿಷಯವನ್ನು ಕುರಿತು ವಿಚಾರಮಾಡಿದರೆ ಏಷ್ಯಾಖಂಡದಲ್ಲಿಯೂ ಯೂರೋಪ್ ಖಂಡದಲ್ಲಿಯೂ ರಾಜ್ಯವನ್ನು ನಿಪುಣತೆಯಿಂದ ಪರಿಪಾಲಿಸಿದವರಲ್ಲಿ ಸ್ತ್ರೀಯರ ಸಂಖ್ಯೆಯೇ ಹೆಚ್ಚಾಗಿದೆ. ಹಿಂದೂಸ್ಥಾನದಲ್ಲಿ ಯಾವುದಾದರೂ ಒಂದು ರಾಜ್ಯವು ಸುವ್ಯವಸ್ಥೆಯನ್ನುಳ್ಳದ್ದಾಗಿಯೂ, ಮಿತವ್ಯಯದಿಂದಕೂಡಿ ನಿಯಮಾನು ಸಾರವಾಗಿ ನಡೆಯುತ್ತಲಿದೆ ಎಂತಲೂ ರೈತರಿಗೆ ಅನ್ಯಾಯವುಂಟಾಗದೆ, ಸಂಸ್ಕಾ ನಕ್ಕೆ ಆದಾಯವು ದಿನೇದಿನೇ ಹೆಚ್ಚು ತಲಿದೆ ಎಂತಲೂ ಪ್ರಜೆಗಳು ಸುಖಿಗಳಾಗಿರುವುರು ಎಂತಲೂ ಕೇಳಿದರೆ, ಅಂತಹ ನಾಲ್ಕು ರಾಜ್ಯಗಳಲ್ಲಿ ಮೂರುರಾಜ್ಯಗಳು ಸ್ತ್ರೀಯ ರಿಂದ ಪಾಲಿಸಲ್ಪ ಡುತಲಿದೆ ಎಂದು ನಿಶ್ಚಯವಾಗಿ ಹೇಳಬಹುದು. ಈ ಸಂಗತಿಯು ನನಗೆ ಪೂರ್ವದಲ್ಲಿ ತಿಳಿಯದಿದ್ದರೂ, ಹಿಂದೂಸ್ಥಾನದ ಪ್ರಧಾನ
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೮೯
ಗೋಚರ