ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಬ ಅಬಲಾ ಸಚ್ಚರಿತ್ರ ರತ್ನ ಮಾಲೆ. ಆವವೂ ಆಕೆಗೆ ತೋರಲಿಲ್ಲ. ಆದರೆ ಸಂಕಟವು ಪ್ರಾಪ್ತವಾದೊಡನೆ ಧೀರರ ಮನಸ್ಸು ಹೇಗೆ ಪ್ರಜ್ವಲಿಸುವುದು ಎಂಬುದನ್ನು ಈಕೆಯ ಚರಿತ್ರೆಯಿಂದ ತಿಳಿಯ ಬಹುದು. ಲಕ್ಷ್ಮಮ್ಮಣ್ಣಿಯು ತಮ್ಮ ಸೋದರಿಯ ಪುತ್ರನಾದ ಮಾಡೂರು ನರಸರಾಜನನ್ನಾಗಲಿ, ತಮ್ಮ ಮೊಮ್ಮಗನಾದ ಸಿದ್ದರಾಜನನ್ನಾಗಲಿ ತಾವು ದತ್ತ ಪುತ್ರನನ್ನಾಗಿ ಸ್ವೀಕರಿಸಬೇಕೆಂದು ನಿಶ್ಚಯಿಸಿ ಆ ವಿಷಯವನ್ನು ಹೈದರನಿಗೆ ತಿಳಿಸಿದಳು. ಮಹಾರಾಣಿ ಲಕ್ಷ್ಮಮ್ಮಣ್ಣಿಯು ಗುಣವತಿಯೂ, ಚಾತುರ್ಯ ವತಿಯೂ, ತೇಜಸ್ವಿನಿಯೂ ಆದ ರಮಣಿಯೆಂದು ಹೈದರನೇ ಆದಿಯಾಗಿ ಎಲ್ಲರೂ ಅರಿತು ಇದ್ದರು. ಆದಕಾರಣ, ಹೈದರನು ಸರ್ವಾಧೀಶನಾದರೂ, ಆಕೆಯೊಡನೆ ಸ್ಪಷ್ಟವಾಗಿ ಹೋರಾಡುವುದಕ್ಕೆ ಹೆದರುತಲಿದ್ದನು. ಆದುದರಿಂದ (ನೀವು ದತ್ತ ವಿಧಾನವನ್ನು ಮಾಡಿಕೊಳ್ಳುವುದು ಅನವಶ್ಯಕ' ಎಂದು ನುಡಿಯಲು ಹಿಂಜರಿದನು. ಆದಕಾರಣ ಹೈದರನು ಬಹಳ ಯೋಚಿಸಿ, “ ನಿಮಗೆ ದತ್ತ ಪುತ್ರನು ಬೇಕಾದ ಪಕ್ಷದಲ್ಲಿ ನೀವೇ ಸ್ವತಂತ್ರಿಸಿ ಹುಡುಕತಕ್ಕ ಆವಶ್ಯಕವಿಲ್ಲ. ರಾಜ್ಯಪಾಲನಾ ಸಾಮಾರ್ಥ್ಯವುಳ್ಳ ಬಾಲಕನನ್ನು ನಾನು ನಿಮಗೆ ತೋರಿಸುವೆನು” ಎಂದು ಆಕೆಗೆ ಹೇಳಿಕಳುಹಿಸಿದನು. ಹೀಗೆ ವರ್ತಮಾನವನ್ನು ಕಳುಹಿಸಿ, ಆತನು ಅನೇಕಬಾಲಕರನ್ನು ಕರೆಯಿಸಿ ಅವರೆಲ್ಲರನ್ನೂ ಒಂದು ಕೊಠಡಿಯಲ್ಲಿರಿಸಿ, ಅವರ .ಸವಿಾಪದಲ್ಲಿ ವಿವಿಧಾಯುಧಗಳನ್ನೂ, ಆಟದ ವಸ್ತುಗಳನ್ನೂ, ವಿವಿಧವಾದ ಭೋಜ್ಯ ಪದಾರ್ಥಗಳನ್ನೂ ಇಡಿಸಿ, ನಿಮಗಿಷ್ಟವಾದ ವಸ್ತುಗಳನ್ನು ನೀವು ತೆಗೆದು ಕೊಳ್ಳಿರೆಂದು ಆ ಬಾಲಕರೊಡನೆ ಹೇಳಿದನು. ಆಮೇಲೆ ಅವರೊಳಗೆಲ್ಲ ಅರಿ ಕೋಟೆಯ ಅಧಿಪತಿಯಾದ ದೇವರಾಜನ ಪುತ್ರನಾದ ಚಾಮರಾಜನೆಂಬ ಒಬ್ಬ ಬಾಲಕನು ಒಂದು ಖಡ್ಡ ವನ್ನೂ, ಒಂದು ದರ್ಪಣವನ್ನೂ ತೆಗೆದುಕೊಂಡನಾದ್ದ ರಿಂದ ಆ ಬಾಲಕನೇ ರಾಜ್ಯಕ್ಕೆ ಅರ್ಹನೆಂದು ಹೈದರನು ನಿಶ್ಚಯಿಸಿದನು. ಮೂರು ವರ್ಷ ಪ್ರಾಯವುಳ್ಳ ಆ ಬಾಲಕನನ್ನು ನಾಮಮಾತ್ರಕ್ಕೆ ದೊರೆಯಾಗಿ ಮಾಡಿ, ಹೈದರನು ರಾಜ್ಯ ಲಾಭವೆಲ್ಲವನ್ನೂ ತಾನೇ ಹೊಂದುತಲಿದ್ದನು. ಮಹಾರಾಣಿ ಲಕ್ಷಮ್ಮಣ್ಣಿ ಈ ಕಪಟವೆಲ್ಲವೂ ತಿಳಿದಿದ್ದರೂ ಹೈದರನೊಡನೆ ಹೋರಾಡುವುದಕ್ಕೆ ಆಗದೆ ಇತ್ತು, ಆಗ ಅವನ ಪ್ರತಾಪವು ಲಂಕಾಧೀಶನಾದ ರಾವಣನ ಪ್ರತಾಪದಂತೆ ಪ್ರಬಲವಾಗಿತ್ತು. ಆದುದರಿಂದ ಅಲ್ಲಿದ್ದ ಶೂರರು ಆಕೆಗೆ ಸಹಾಯ ಮಾಡಲು ಹಿಂಜರಿಯುತಲಿದ್ದರು, ಅದರಿಂದ ಹೈದರನೊಡನೆ ಬಹಿರಂಗವಾಗಿ ವಿರೋಧ ವನ್ನು ಬೆಳೆಸುವುದು ದುಸ್ತರವು ಎಂದು, ಆ ಚತುರೆಯಾದ ರಾಣಿಯು, ಗುಪ್ತ ವಾಗಿ ಪರರಾಜರೊಡನೆ ಸಂಧಿಯನ್ನು ಮಾಡಿಕೊಂಡು ಹೈದರನನ್ನು ಪದಚ್ಯುತ ಸ್ನಾಗಿ ಮಾಡಲೆಣಿಸಿದಳು, ಅದಕ್ಕಾಗಿ ಆಕೆಯು ಆಗ ಮದರಾಸಿನಲ್ಲಿ ಗವರ್ನರ ವರಾಗಿದ್ದ ಪಿಂಗಾಟುದೊರೆಯೊಡನೆ ರಹಸ್ಯವಾಗಿ ಪತ್ರವ್ಯವಹಾರವನ್ನು ನಡೆಸ ಲಾರಂಭಿಸಿದಳು. ಮೈಸೂರು ರಾಜ್ಯವನ್ನು ತುರುಕರ ಕೈಯಿಂದ ದಕ್ಕಿಸಿಕೊಳ್ಳ