ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

3} ಅಬಲಾ ಸಚ್ಚರಿತ್ರ ರತ್ನ ಮಾಲೆ. ಆಕೆಯ ಶೌರ್ಯದಿಂದ ಪಡೆದ ಬಹುಮಾನವನ್ನು ಆಕೆಯು ಇರಿಸಿ ಕೊಳ್ಳಕೂಡದಂತೆ, ಎರಡನೆಯದು ರಾಜನ ಅನುಮತಿಯಿಲ್ಲದೆ ತನ್ನ ಜಹ ನೀರಿನಲ್ಲಿ ಒಂದು ಕೋಟೆಯನ್ನು ಕಟ್ಟಿಸಿಕೊಂಡದ್ದು, ಇದರಿಂದ ರಾಜನಿಗೆ ವಿಶೇಷ ಕೊಪವು ಉಂಟಾಗಿ ಅಲ್ಪ ಬುದ್ಧಿಯುಳ್ಳವನಾದ ರಾಜನು ಆಕೆಯು ತನಗೆ ಮಾಡಿದ ಉಪಕಾರಗಳನ್ನೆಲ್ಲ ಮರೆತು, ಆಕೆಯನ್ನು ನಿನ್ನ ಪತಿಯ ಬಳಿಗೆ ಹೋಗು ಎಂದನು. ಸಾಹೇಬ್ ಕುವರಳು ರಾಜಧಾನಿಯನ್ನು ಬಿಟ್ಟು ಜಹಗೀರಿನಲ್ಲಿ ಇದ್ದ ಕೋಟೆಗೆ ಹೋಗಿ ಅಲ್ಲಿಯೇ ವಾಸಮಾಡಿಕೊಂಡಿದ್ದಳು. ಆಕೆಯು ಅಲ್ಲಿದ್ದರೆ ತನಗೆ ವಿಪತ್ತು ಉಂಟಾಗಬಹುದು ಎಂದು ರಾಜನು ಹೆದರಿ, ಸ್ವಲ್ಪ ಸೈನ್ಯದೊಡನೆ ಆಕೆಯ ಕೋಟೆಯನ್ನು ಮುತ್ತಿಗೆಹಾಕಲು ಹೊರಟನು. ಕೆಲಧಿಶಾಲಿಗಳು ಸ್ತ್ರೀಯೊಡನೆ ಯುದ್ಧ ಮಾಡುವುದು ಅನುಚಿತ ವೆಂದು ನುಡಿದು, ಅವರಿಬ್ಬರಿಗೂ ಸಂಧಿಯನ್ನು ಉಂಟುಮಾಡುವೆವು ಎಂದು ಹೇಳಿ ಆಕೆಯನ್ನು ಪಟಿಯಾಲಕ್ಕೆ ಕರೆಯಿಸಿದರು. ಆಕೆಯು ಬರುತ್ತಾ ಮಾರ್ಗಮಧ್ಯದಲ್ಲಿ ರಾಜನು ತನ್ನನ್ನು ಕೊಲ್ಲಲು ಕರೆಸಿದನು ಎಂದು ಕೇಳಿ ಪುನಃ ತನ್ನ ಕೋಟೆಗೆ ಹೊರಟುಹೋದಳು, ಕೆಲವು ದಿವಸಗಳು ಕಳೆದ ಅನಂತರ ರಾಜನು ಆಕೆಗೆ ನಂಬಿಕೆಯನ್ನು ಉಂಟುಮಾಡಿ ಕರೆಯಿಸಿ ಕಾರಾ ಗೃಹದಲ್ಲಿ ಇಟ್ಟನು. ಸಾಹೇಬ್ಕುವರು ಕೆಲವು ದಿವಸಗಳು ಕಾರಾಗೃಹದಲ್ಲಿದ್ದು, ತನ್ನ ಬಟ್ಟೆಗಳನ್ನು ದಾಸಿಗೆ ಉಡಿಸಿ, ದಾಸಿಯ ಬಟ್ಟೆಗಳನ್ನು ತಾನು ಧರಿಸಿ ಕೊಂಡು ಉಪಾಯದಿಂದ ಕಾರಾಗೃಹವಿಮುಕ್ತಳಾಗಿ ತನ್ನ ಕೋಟೆಯನ್ನು ಸೇರಿದಳು, ಈಕೆಯು ೧೭೯೯ನೆಯ ಇಸವಿಯಲ್ಲಿ ಮೃತಳಾದಳು. ಕಮಲಾದೇವಿ. \ ಈಕೆಯು ಸತ್ಯವತಿಯ ಕಾಲದಲ್ಲಿ ಇದ್ದಳು ಎಂದು (ಸತ್ಯವತಿಯ ಚರಿತ್ರೆಯನ್ನು ನೋಡುವುದು) ಊಹಿಸಿದ್ದಾರೆ. ಈಕೆಯ ಪತಿಯ ಹೆಸರು ಜಗನ್ನಾಥ ಭಟ್ಟಾ ಚಾರ್ಯನು. ಇವರು ಮುರ್ಷಿದಾಬಾದಿಗೆ ಸವಿಾಪದಲ್ಲಿರುವ ಒಂದು ಗ್ರಾಮದಲ್ಲಿ ವಾಸಮಾಡುತಲಿದ್ದರು. ಕಮಲಾದೇವಿಯು ಶಾಂತಸುಶೀಲಾದಿ ಸದ್ದು ಣಗಳಿಂದ ಕೂಡಿದವಳಾದುದರಿಂದ ಗ್ರಾಮಸ್ಥರೆಲ್ಲರೂ ಆಕೆಯನ್ನು ಬಹು ಗೌರವವಾಗಿ ಕಾಣುತಲಿದ್ದರು. ಆಗ ಆ ದೇಶವು ಕಂಪೆನಿಯವರ ವಶಕ್ಕೆ ನೂತನವಾಗಿ ಬಂದಿತ್ತು. ಆಗಲೇ ಈಮವೂ ತಲೆದೋರಿತು. ಇದೇ ಒಳ್ಳೆಯ ಸಮಯವೆಂದು ಸರ್ಕಾರ್