ತಾರಾಬಾಯಿ. ಈಕೆಯು ಮಹಾರಾಷ್ಟ್ರ ರಾಜ್ಯ ಸ್ಥಾಪಕನಾದ ಶಿವಾಜಿಯ ಪುತ್ರನಾದ ರಾಜಾರಾಮನ ಪತ್ನಿಯು, ಶಿವಾಜಿಯ ಮರಣಾನಂತರ ಆತನ ಪ್ರಥಮಪುತ್ರ ನಾದ ಸಂಭಾಜಿಯು ಸಿಂಹಾಸನಾರೂಢನಾದನು, ಆತನನ್ನು ಔರಂಗಜೇಬನು ಹಿಡಿದುಕೊಂಡು ಹೋಗಿ ಬಹು ಕ್ರೂರವಾಗಿ ವಧಿಸಿ, ಆತನ ಪತ್ನಿ ಪುತ್ರರನ್ನು ಸೆರೆಯಲ್ಲಿಟ್ಟಿದ್ದರಿಂದ, ರಾಜಾರಾಮನು ರಾಜ್ಯಾಧಿಪತಿಯಾದನು. ಈತನ ಪಾಲ ನೆಯು ಪ್ರಜೆಗಳಿಗೆ ಬಹು ಸುಖಕರವಾಗಿತ್ತು. ಆತನು ಕ್ರಿ.ಶ. ೧೭೦೦ ನೆಯ ಇಸವಿಯಲ್ಲಿ ದೀರ್ಘವ್ಯಾಧಿಯಿಂದ ಮೃತನಾದನು. ಆತನ ಮರಣಕಾಲದಲ್ಲಿ ಜೈಷ್ ಪತ್ನಿಯಾದ ತಾರಾಬಾಯಿಯಲ್ಲಿ ಜನಿಸಿದ ಶಿವಾಜಿ ಎಂಬ ಹತ್ತು ವರುಷದ ಬಾಲಕನೂ, ದ್ವಿತೀಯಭಾರ್ಯೆಯಾದ ರಾಜಸಾಬಾಯಿಯಲ್ಲಿ ಉದಯಿಸಿದ ಸಂಭಾಜಿ ಎಂಬ ಮೂರುವರ್ಷದ ಬಾಲಕನೂ ಇದ್ದರು. ರಾಜಾರಾಮನ ಅನಂತರ ತಾರಾಬಾಯಿಯು ತನ್ನ ಪುತ್ರನನ್ನು ಸಿ೦ಹಾಸನ ಸ್ಥನನ್ನಾಗಿ ಮಾಡಿ, ರಾಮಚಂದ್ರ ಪಂತು, ಶಂಕರಾಜೀ, ನಾರಾಯಣ, ದನಾಜೀ ಜಾಧವ್ ಮೊದಲಾದ ಪ್ರಧಾನಿಗಳ ಸಹಾಯದಿಂದ ರಾಜ್ಯಭಾರವನ್ನು ಮಾಡುತಲಿದ್ದಳು, ಈಕೆಯು ಒಂದು ಸ್ಥಳದಲ್ಲಿಯೇ ಇರದೆ ಪ್ರತಿಯೊಂದು ಕೋಟೆಯನ್ನೂ ತಾನೇ ಹೋಗಿ ನೋಡುತ್ತ, ಅಲ್ಲಿಗೆ ಬೇಕಾದ ಬಂದೋಬಸ್ತು ಗಳನ್ನು ಮಾಡಿಸುತಲಿದ್ದಳು. ತನ್ನ ಸೈನ್ಯಗಳನ್ನು ಮೊಗಲರ ಮೇಲೆ ಕಳುಹಿಸಿ, ಔರಂಗಜೇಬನು ತನ್ನ ಕೋಟೆಗಳಲ್ಲಿ ಒಂದನ್ನು ಗೆಲ್ಲುವಷ್ಟರೊಳಗೆ ತಾನು ಆತನ ಕೋಟೆಗಳಲ್ಲಿ ಐದಾರು ಕೋಟೆಗಳನ್ನು ಜೈಸುತಲಿದ್ದಳು. ಒಂದುಸಲ ರಾಮ ಚಂದ್ರಪಂತನು ಮಹಮ್ಮದೀಯರಿಗೆ ಸಹಾಯಕನಾಗಿರುವನು ಎಂದು ಊಹಿಸಿ ಆತನಲ್ಲಿ ಅನುಮಾನವುಳ್ಳವಳಾಗಿದ್ದಳು. ಆದರೆ ಆತನು ಪಾವನಗಡದುರ್ಗವನ್ನು ಬಹು ಶೌರ್ಯದಿಂದ ಗೆದ್ದು, ಪನ್ನಾಳದುರ್ಗವನ್ನು ಸಹ ಕೈವಶಮಾಡಿಕೊಂಡುದ ದರಿಂದ ಆತನಲ್ಲಿರುವ ಅಪನಂಬಿಕೆಯನ್ನು ಬಿಟ್ಟು, ಆತನಿಗೆ ಅನೇಕ ಬಹುಮಾನ ಗಳನ್ನು ಕೊಟ್ಟಳು. ಈಕೆಯು ಪನ್ನಾಳದುರ್ಗದಲ್ಲಿ ವಾಸಮಾಡಿಕೊಂಡು ಇದ್ದಳು. - ಹೀಗೆ ಕೆಲವು ಕಾಲ ಕಳೆದಮೇಲೆ ಔರಂಗಜೇಬನು ಮೃತನಾಗಲು, ಸಂಬಾ ಜಿಯ ಪುತ್ರನಾದ ಸಾಹುವು ಬಿಡುಗಡೆಯನ್ನು ಹೊಂದಿದನು. ಆತನು ಚಿಕ್ಕಮ್ಮನ
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೯೬
ಗೋಚರ