ತಾರಾಬಾಯಿ. ೨೭4 ನನ್ನೆಲ್ಲ ಸೇ.ಯು ಅರಿತು, ವೈರದಿಂದ ತಾರಾಬಾಯಿಯನ್ನು ಸ್ವಾಧೀನ ಮಾಡಿಕೊಳ್ಳುವುದು ಅಸಾಧ್ಯವೆಂದು ಎಣಿಸಿ, ಒಳ್ಳೆಯ ಮಾತುಗಳಿಂದ ಆಕೆಯನ್ನು ಪೂನಾನಗರಕ್ಕೆ ಕರೆದುಕೊಂಡು ಹೋಗಿ, ರಾಜ್ಯದಲ್ಲಿ ನಡೆಯ ಬೇಕಾದ ವಿಷಯಗಳನ್ನೆಲ್ಲ ನಿನ್ನ ಅಭೀಷ್ಟ ದಂತೆಯೆ ನಡೆಸುವೆನು ಎಂದು ಹೇಳಿ ಆಕೆಯನ್ನು ಸಮಾಧಾನಗೊಳಿಸಿ, ರಾಜನು ಮಾತ್ರ ತನ್ನ ಆಜ್ಞೆಯಂತೆ ನಡೆಯಬೇಕು ಎಂದು ಉಸುರಿದನು. ಈ ಸಮಯದಲ್ಲಿ ರಾಮರಾಜನು ಸಾಗೋಳೆ ಎಂಬ ಗ್ರಾಮದಲ್ಲಿದ್ದನು. ಈತನಿಗೆ ರಾಜ್ಯ ವ್ಯವಸ್ಥೆಯು ತಿಳಿಯದಕಾರಣ, ತನಗೆ ಸ್ವಲ್ಪ ಜಹಗೀರನ್ನು ಕೊಟ್ಟು ರಾಜ್ಯವನ್ನೆಲ್ಲ ಸೇ.ಯು ಆಳಬಹುದು ಎಂದು ಬರೆದು ಕಳುಹಿಸಿದನು. ಆ ಪ್ರಕಾರವೇ ನೇಷ್ಟೆಯು ರಾಜನಾದನು. ಜಹಗೀರನ್ನು ಮಾತ್ರ ಕೊಡಲಿಲ್ಲ. ರಾಮರಾಜನನ್ನು ಪೇಷ್ಟೆಯು ಸ್ವಲ್ಪ ಸೈನ್ಯದೊಡನೆ ಸತಾರಕ್ಕೆ ಕಳುಹಿಸಿ, ಅಲ್ಲಿ ಪಟ್ಟಣದಲ್ಲಿ ಮಾತ್ರ ಸಂಚರಿಸುವುದಕ್ಕೆ ಅನುಜ್ಞೆಯನ್ನು ಕೊಟ್ಟನು. ಆಮೇಲೆ ಸೇಷ್ಟೆಯು ಔರಂಗಾಬಾದಿಗೆ ಹೋಗಲು, ತಾರಾಬಾಯಿಯು ಅಲ್ಲಿಗೆ ಬಂದು, ರಾಮರಾಜನಿಗೆ ಸ್ವತಂತ್ರವಿಲ್ಲವೆಂಬುದನ್ನು ತಿಳಿದುಕೊಂಡು, ಕೂಡಲೆ ಆಕೆಯು ದಾಮಾಜೀ ಗಾಯಕ್ವಾಡನಿಗೆ, “ ಇಲ್ಲಿ ನಿನಗೆ ಪ್ರತಿ ಪಕ್ಷಿಗಳು ಯಾರೂ ಇಲ್ಲದುದರಿಂದ ಮರಾಠಿಗಳ ರಾಜ್ಯವನ್ನು ಬ್ರಾಹ್ಮಣರ (ಪೇಷ್ಟೆಗಳ) ಪಾಲಾಗದಂತೆ ಕಾಪಾಡ ಬೇಕು.” ಎಂದು ಪತ್ರವನ್ನು ಬರೆಯಿಸಿ ಕಳುಹಿಸಿದಳು. ಅನಂತರ ರಾಮರಾಜನನ್ನು ಪಟ್ಟಣದಿಂದ ಕೋಟೆಯೊಳಕ್ಕೆ ಕರೆಯಿಸಿ, “ ಎಲೋ ! ನೀನು ಶಿವಾಜಿಯ ವಂಶಸ್ಥನಲ್ಲ. ನಾನು ನನ್ನ ಮೊಮ್ಮಗ ನನ್ನು ಹೀನರಮನೆಯಲ್ಲಿ ಬಚ್ಚಿಟ್ಟೆನು. ಅವರು ನನ್ನ ಮಗುವನ್ನು ಬಚ್ಚಿಟ್ಟು ಕೊಂಡು, ಅವರ ಮಗುವನ್ನು ನನಗೆ ಕೊಟ್ಟಂತೆ ತೋರುತ್ತದೆ. ನಾನು ಅದನ್ನು ವಿಚಾರಿಸದೆ ನಿನ್ನನ್ನು ಇಷ್ಟು ಪದವಿಗೆ ತಂದು ಈಗ ಚಿಂತಿಸಬೇಕಾ ಯಿತು. ನಾನು ಹೀನ ವಂಶಜನನ್ನು ಶಿವಾಜಿಯ ವಂಶಸ್ಸನನ್ನಾಗಿಮಾಡಿದ ಪಾಪಕ್ಕಾಗಿ, ಕೃಷ್ಣಾ ತೀರಕ್ಕೆ ಹೋಗಿ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳ ಬೇಕು." ಎಂದು ತಿರಸ್ಕಾರೋಕ್ತಿಗಳನ್ನು ನುಡಿದು ಆತನನ್ನು ಕಾರಾಗೃಹದಲ್ಲಿಟ್ಟಳು. ಆ ಮೇಲೆ ಆವೃದ್ದನಾರಿಯು ಕೋಟೆಯ ಅಧಿಕಾರಿಗಳನ್ನು ಕರೆಯಿಸಿ, * ರಾಜ ಸಹ ಚರರ ಮೇಲೆಯೂ, ಕೋಕಣಸ್ಥ ಬ್ರಾಹ್ಮಣರ (ಸೇಷ್ಟೆಗಳ) ಪಕ್ಷಪಾತಿಗಳ ಗೃಹಗಳಮೇಲೆಯೂ ಫಿರಂಗಿಗಳನ್ನು ಪ್ರಯೋಗಿಸಿ ನಿರ್ಮೂಲ ಮಾಡಿರಿ.” ಎಂದಾಜ್ಞಾಪಿಸಿದಳು, ಈ ವಾರ್ತೆಯನ್ನು ಪೇಷ್ಟೆಯ ಪಕ್ಷಪಾತಿ ಗಳು ಕೇಳಿ, ಈ ಮುದುಕಮ್ಮನಿಗೆ ಮತಿ ಚಾಂಚಲ್ಯವು ಉಂಟಾಗಿರಬಹುದು ಎಂದೆಣಿಸಿದರು, ಆದರೆ ಸೈನ್ಯಸಹಿತನಾಗಿ ಗಾಯಕ್ವಾಡಿಯು ಬರುತಲಿರುವುದನ್ನು 26
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೯೮
ಗೋಚರ