ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೈಸೂರು ಮಹಾರಾಣಿ ಲಕ್ಷಮ್ಮಣ್ಣ, ಬೇಕೆಂದು ಇಂಗ್ಲೀಷರ ಸಹಾಯವನ್ನು ಕೋರುವುದಕ್ಕಾಗಿ ಆಕೆಯು ತಿರುಮಲ ರಾಯನೆಂಬ ವಕೀಲನನ್ನು ಮದರಾಸಿಗೆ ಕಳುಹಿಸಿದಳು. ಅಂತಃಪುರನಿವಾಸಿ ಯಾದ ಒಬ್ಬ ರಾಜಯುವತಿಯು ಹೈದರನ ಅನ್ಯಾಯಕ್ಕೆ ಸೈರಿಸದೆ, ಅವನ ಬಂದೀಖಾನೆಯಲ್ಲಿಯೇ ಇದ್ದರೂ ಅವನಿಗೆ ತಿಳಿಯದಂತೆ ಅವನನ್ನೇ ನಾಶಮಾಡು ವದಕ್ಕೆ ಆಂಗ್ಗೇಯರ ಸಹಾಯವನ್ನು ಸಂಪಾದಿಸಿದಳು ಎಂಬ ವಿಷಯವು ಭವಿಷ್ಯ ತ್ಕಾಲದ ಚರಿತ್ರಕಾರರಿಗೆ ಅತ್ಯಂತಾಶ್ವರವನ್ನು ಉಂಟು ಮಾಡದಿರದು. ಇಂತಹ ಮಹಾಸಂಕಟಸಮಯದಲ್ಲಿ ರಾಣಿಯು ಬರೆದ ಲೇಖನಗಳೇ ಆಕೆಗೆ ಇರುವ ರಾಜಕಾರ್ಯ ಧುರಂಧರತ್ವವನ್ನು ತೋರಿಸುತ್ತಲಿದೆ. ಆಕೆಯು ಮೊದಲನೆಯ ಲೇಖನದಲ್ಲಿ ತಿರುಮಲರಾಯನಿಗೆ, “ ನೀನು ಸ್ವಲ್ಪವು ಆಲಸ್ಯ ಮಾಡದೆ ಕೂಡಲೆ ಮದರಾಸಿಗೆ ಹೊರಟು ಲಾರ್ಡುಪಿ೦ಗಾಟುಗೊರೆಯನ್ನು ದರ್ಶಿಸಿ ಪುನಃ ನಮ್ಮ ರಾಜ್ಯವನ್ನು ಪಡೆದುಕೊಳ್ಳುವದಕ್ಕೆ ಉಚಿತವಾದ ಮಾತುಗಳನ್ನು ಆತನೊಡನೆ ಚರ್ಚಿಸುವುದು, ಅವರ ಸೈನ್ಯದ ಖರ್ಚಿಗೆ ಒಂದು ಕೋಟಿ ರೂಪಾಯಿಗಳನ್ನೂ ಅವರ ದರ್ಬಾರು ಖರ್ಚಿಗಾಗಿ ಮೂರುಲಕ್ಷ ರೂಪಾಯಿಗಳನ್ನೂ, ಕೊಡುವುದಕ್ಕೆ ನಾನು ಸಿದ್ದವಾಗಿದ್ದೇನೆ. ಲಾರ್ಡ್ಪಿ೦ಗಾಟ್ ದೊರೆಯವರಿಗೆ ನಾನು ಸ್ವಂತ ವಾಗಿ ಬರೆದ ಲೇಖನದಲ್ಲಿ ನೀನು ನಮ್ಮಕಡೆಯ ಸರ್ವಕಾರ್ಯಕ್ಕೂ ಅಧಿಕಾರಿ ಯೆಂದೂ, ಸಮಯಾನುಸಾರವಾಗಿ ಸಂಧಿಯನ್ನು ನನಗಾಗಿ ಇಂಗ್ಲೀಷರೊಡನೆ ಬೆಳೆಸುವುದಕ್ಕೆ ನಿನಗೆ ಸ್ವಾತಂತ್ರ್ಯವುಂಟೆಂದೂ ಬರೆದು ಇದ್ದೇನೆ, ನೀನು ಯಾವ ಪ್ರಕಾರವಾಗಿಯಾಗಲಿ ಪ್ರಯತ್ನವನ್ನು ಮಾಡಿ ರಾಜ್ಯವನ್ನು ಪುನಃ ಸಂಪಾದಿಸಿ ದರೆ ನಿನಗೆ ರಾಜ್ಯದ ಆದಾಯದಲ್ಲಿ ನೂರಕ್ಕೆ ಹತ್ತರಂತೆ ಬಹುಮಾನವನ್ನು ಕೊಟ್ಟು, ನೀನು ಜೀವಿಸಿರುವವರೆಗೂ ನಿನ್ನನ್ನು ಗೌರವಿಸುವೆನು. ಇದಲ್ಲದೆ ನಿನಗೆ ವಂಶಪರಂಪರೆಯಾಗಿ ದಿರ್ವಾಗಿರಿಯನ್ನೂ ಕೊಡುವೆನು ಎಂದು ಬರೆದಳು.” ಕಂಪೆನಿಯವರಿಗೆ ಸಿಂಗಾಟುಗೊರೆಯವರ ಮೇಲೆ ಯಾವುದೋ ಒಂದು ಕಾರಣ ದಿಂದ ಕೋಪವುಂಟಾದುದರಿಂದ, ತಿರುಮಲರಾಯನು ಮಾಡುವ ಕಾರ್ಯಕ್ಕೆ ವಿಘ್ನವುಂಟಾಗಿ, ಆತನು ತಂಜಾವೂರಿನಲ್ಲಿ ಕೆಲವು ದಿವಸಗಳು ಸುಮ್ಮನಿರ ಬೇಕಾಯ್ತು. ಇಷ್ಟರಲ್ಲಿ, ಇಲ್ಲಿ ಹೈದರನು ಲಕ್ಷ್ಮಮ್ಮಣ್ಣಿಯ ಮೇಲೆ ಮತ್ತಷ್ಟು ಕ್ರೂರತ್ವ ವನ್ನು ತೋರಲಾರಂಭಿಸಿದನು. ಅವನು ತನ್ನ ಶೌರ್ಯಬಲದಿಂದ ಹಿಂದೂಸ್ಥಾನ ದಲ್ಲಿ ಅನೇಕ ಪ್ರದೇಶಗಳನ್ನು ವಶಮಾಡಿಕೊಂಡು ಮದರಾಸನ್ನು ಮುತ್ತಿಗೆ ಹಾಕಲು ಪ್ರಯತ್ನಿಸುತಲಿದ್ದನು. ಮದರಾಸಿನ ಗವರ್ನರಾದ ಲಾರ್ಡ್ ಮ್ಯಾ ಕರ್ಟ ನಿಗೂ ಸಹ ಹೈದರನ ಪರಾಕ್ರಮವನ್ನು ಅಡಗಿಸಿ ಅವನನ್ನು ಹೇಗಾದರೂ ಕೆಡಿಸ ಬೇಕು ಎಂದು ತೋರಿತು. ಮೈಸೂರು ಮಹಾರಾಣಿಯು ಸ್ವರಾಜ್ಯಾಭಿಲಾಷೆ ಯುಳ್ಳವಳೆಂದೂ, ಕಾರ್ಯನಿರ್ವಾಹದಲ್ಲಿ ದಕ್ಷಳೆಂದೂ, ಲಾರ್ಡ್ ಮಾಕರ್ಟ