ಗನೋರುಸ೦ಸ್ಥಾನದ ರಾಣಿ. ೨೭೭ ನನಗೆ ಸ್ವಲ್ಪ ಅವಕಾಶವನ್ನು ಕೊಡಬೇಕು.” ಎಂದು ದೂತನೊಡನೆ ಹೇಳಿ ಕಳುಹಿಸಿದಳು. ಖಾನನು ಆಕೆಯು ಹೇಳಿದಂತೆ ಒಪ್ಪಿಕೊಂಡನು. ಆ ಸಮಯದಲ್ಲಿ ಅನ ನಿಗೆ ಉಂಟಾದ ಸಂತೋಷವು ಹಿಂದೆ ಯಾವಾಗಲೂ ಉಂಟಾಗಲಿಲ್ಲ. ಆ ಖಾನುಸಾಹೇಬನು ಸಂತೋಷವಾಗಿ ಕೆಲವು ದಿನಗಳನ್ನು ಕಳೆದನು. ಒಂದು ದಿವಸ ರಾಣಿಯು ಲಗ್ನ ನಿಶ್ಚಯಾರ್ಥವೆಂದು ರತ್ನಖಚಿತವಾದ ಉಡುಪನ್ನು ಖಾನನಿಗೆ ಕಳುಹಿದಳು. ಖಾನನು ಆ ಉಡುಪನ್ನು ನೋಡಿ ಮಿತಿಯಿಲ್ಲದ ಸಂತೋಷದೊಡನೆ ಅದನ್ನು ಧರಿಸಿ ವಿವಾಹಕ್ಕೆ ಯಾವಾಗ ಕರೆಯುವರೋ ಎಂದು ನಿರೀಕ್ಷಿಸಿಕೊಂಡಿದ್ದನು. ರಣವಾದ್ಯಗಳೂ ಘೋರನಾದಗಳೂ ಕೇಳಿ ಬರುತಲಿರ ಸ್ಥಳದಲ್ಲಿ, ಮಂಗಳವಾದ್ಯಗಳೂ, ಶುಭವಾಕ್ಯಗಳೂ ಕೇಳಿ ಬರುತಲಿದವು. ತನ್ನ ಅಧಿಪತಿಯ ವಿವಾಹ ಸಂತೋಷದಿಂದ ಮೇಚ್ಚ ಸೈನಿಕರು ಮದಿರಾನಾನ ಮತ್ತರಾಗಿದ್ದರು. - ಒಂದೆರಡು ಗಳಿಗೆಗಳೊಳಗೆಯೇ ಚಾರರು ಖಾನನನ್ನು ಕರೆಯಲು ಬಂದರು. ಅವನು ಪರಮಾನಂದದೊಡನೆ ವಿವಾಹಮಂಟಪಕ್ಕೆ ಬಂದನು. ಅವನು ರಾಣಿಯ ಲಾವಣ್ಯವನ್ನು ನೋಡಿ ಪರವಶನಾದನು. ನರ್ಮದಾನದೀ ತೀರದಲ್ಲಿದ ಒಂದು ವಿಶಾಲಭವನವು ವಿವಾಹಕ್ಕಾಗಿ ಅಲಂಕರಿಸಲ್ಪಟ್ಟಿತ್ತು. ರಾಣಿಯು ಸರ್ವಾಭರಣಭೂಷಿತೆಯಾಗಿ ಬಂದು ಮಂಚದ ಮೇಲೆ ಕುಳಿತಿದಳು. ಮಿಕ್ಕ ರಾಣಿವಾಸದ ಸ್ತ್ರೀಯರೂ, ದಾಸಿಯರೂ ಉನ್ನತವಾದ ಒಂದು ಸ್ಥಳದಲ್ಲಿ ಕುಳಿ ತಿದ್ದರು. ಅವರೆಲ್ಲರೂ ಕೈಯಲ್ಲಿ ದೀವಟಿಗೆಗಳನ್ನು ಹಿಡಿದಿದ್ದರು. ಖಾನನು ಬಂದಕೂಡಲೆ ರಾಣಿಯು ಆತನನ್ನು ಬೇರೊಂದು ಮಂಚದಮೇಲೆ ಕುಳ್ಳಿರಿಸಿದಳು. ಆತನು ಮಂಚದಮೇಲೆ ಕುಳಿತು ರಾಣಿಯೊಡನೆ ಸ್ವಲ್ಪ ಹೊತ್ತು ಮಾತನಾಡು ತಿರಲು, ಅವನ ಶರೀರದಲ್ಲಿ ಒಂದು ವಿಧವಾದ ತಾಪವು ಉಂಟಾಯಿತು. ಶರೀರವೆಲ್ಲ ಕಪ್ಪಾಗಿ ನಾಲಿಗೆಯು ಎಳೆದುಕೊಂಡು ಹೋಯಿತು. ಅವನು ಮರಣ ವೇದನೆಯನ್ನು ತಡೆಯಲಾರದೆ ನೆಲದ ಮೇಲೆ ಬಿದ್ದು ಉರುಡಾಡಲಾರಂಭ ಸಿದನು. ಆಗ ರಾಣಿಯು ಅವನನ್ನು ಸಮಿಾಪಿಸಿ, “ ಪಾಸೀ ! ನಿನ್ನ ಪಾಪಫಲ ವನ್ನು ಅನುಭವಿಸು, ಕೆಟ್ಟ ಮೋರೆಯವನೆ ! ನಿನಗೆ ಮೃತ್ಯುವು ಸವಿಾಪಿಸಿತು. ನೀನು ಧರಿಸಿರುವ ಉಡುಪು ವಿಷಯುಕ್ತವಾದುದು. ಆದಕಾರಣ ಆ ವಿಷವೆಲ್ಲ ನಿನ್ನ ಶರೀರದಲ್ಲಿ ಸೇರಿ ನಿನ್ನ ಜೀವಿತಾಶೆಯನ್ನು ಪೂರ್ತಿಮಾಡಿತು. ನನ್ನ ಪಾತಿವ್ರತ್ಯವನ್ನು ರಕ್ಷಿಸಿಕೊಳ್ಳಲು ಬೇರೊಂದು ಮಾರ್ಗವನ್ನು ಕಾಣದೆ ಈ ನಿ೦ಡಿತಕಾರ್ಯವನ್ನು ಮಾಡಲು ಸಾಹಸಮಾಡಿದೆನು. ” ಎಂದಳು. ಖಾನು ಸಾಹೇಬನ ಅವಸ್ಥೆಯನ್ನು ನೋಡಿ ಆತನ ಸೇವಕರು ನಿಶ್ರೇಷ್ಟಿತರಾದರು.
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೦೨
ಗೋಚರ