ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೮ ಅಬಲಾ ಸಚ್ಚರಿತ್ರ ರತ್ನ ಮಾಲೆ. ಅವರು ಎಚ್ಚೆತ್ತುಕೊಳ್ಳುವದರೊಳಗೆ ರಾಣಿಯು ನರ್ಮದೆಯೊಳಗೆ ದುಮುಕಿ ದಳು. ದಾಸಿಯರು, ಆ ಸ್ತ್ರೀಯರು ತುಪಾಕಿಯ ಮದ್ದಿನ ಚೀಲಗಳಮೇಲೆ ಕುಳಿತಿದ್ದುದರಿಂದ ಕೈಯಲ್ಲಿದ ದೀವಟಿಗೆಗಳಿಂದ ಅವುಗಳಿಗೆ ಬೆಂಕಿಯನ್ನು ಹಚ್ಚಲು ಅಲ್ಲಿದ್ದವರೆಲ್ಲರು ಸುಟ್ಟು ಬೂದಿಯಾದರು! ತೇಜೋಮಯಳಾದ ಆ ರಾಣಿಯು ಅತಿಯುಕ್ತಿಯಿಂದ ಶತ್ರುವನ್ನು ನಾಶಮಾಡಿ, ತನ್ನ ಪಾತಿವ್ರತ್ಯವನ್ನು ಕಾಪಾಡಿ ಕೊಂಡಳು! ಜಸರೇಶರಿ. ಈ ಯುವತಿಯು ಅಕ್ಟರ್ ಬಾದಷಹನ ಕಾಲದಲ್ಲಿ ಇದ್ದಳು, ಈಕೆಯ ನಿಜವಾದ ಹೆಸರು ಯಾರಿಗೂ ತಿಳಿಯದು, ಗ್ರಾಮದೇವತೆಯಾದ ಜಸ ರೇಶ್ವರಿಯ ಹೆಸರಿನಿಂದಲೇ ಈಕೆಯನ್ನು ಕರೆಯುತಲಿದ್ದರು. ಜೇಸೋರ್ ಸಂಸ್ಥಾ ನಾಧೀಶನಾದ ವಿಕ್ರಮಾದಿತ್ಯನು ಈಕೆಯ ಮಾವ, ಈಕೆಯ ಪತಿಯ ಹೆಸರು ಪ್ರತಾಪಾದಿತ್ಯ. ಈತನು ಅಕ್ಟರನಿಗೆ ಕಪ್ಪವನ್ನು ಸಲ್ಲಿಸುತಲಿದ್ದ ಬಂಗಾಳಿಯ ಮಾಂಡಲೀಕರಲ್ಲಿ ಒಬ್ಬನು. ಪ್ರತಾಪಾದಿತ್ಯನು ಶೂರನಾದರೂ, ದುರ್ಗುಣಗಳಿಗೆ ಆಶ್ರಯಭೂತನಾಗಿ ಪ್ರಜೆಗಳನ್ನು ಹಿಂಸಿಸುತಲಿದ್ದನು. ಒಂದಾನೊಂದುಸಲ ಈತನ ಪೂರ್ವಿಕರಲ್ಲಿ ಯಾರಿಗೋ ಗ್ರಾಮದೇವತೆಯು ಪ್ರತ್ಯಕ್ಷಳಾಗಿ, ನಿಮ್ಮ ವಂಶದಲ್ಲಿ ಯಾರಾದರೂ ಪಾಪಾಚರಣೆಯನ್ನು ನಡೆಸಿದರೆ ನಾನು ಗ್ರಾಮವನ್ನು ಬಿಡುವೆನೆಂತಲೂ, ನನ್ನ ವಿಗ್ರಹದ ಮುಖವು ಬೇರೊಂದು ಕಡೆಗೆ ತಿರುಗಿದರೆ ನಾನು ಗ್ರಾಮವನ್ನು ಬಿಟ್ಟೆನು ಎಂದು ತಿಳಿಯಬೇಕೆಂತಲೂ ಹೇಳಿದಳು ಎಂದು ಪ್ರತೀತಿಯು ಉಂಟು. ಪ್ರತಾಪಾದಿತ್ಯನ ದುಷ್ಪವರ್ತನೆಯನ್ನು ನೋಡಿ ಪ್ರಜೆಗಳು ಅಲ್ಪ ಕಾಲದಲ್ಲಿಯೇ ಗ್ರಾಮದೇವತೆಯು ಗ್ರಾಮವನ್ನು ತ್ಯಜಿಸುವಳು ಎಂದು ಹೆದರುತಲಿದ್ದರು. ಜಸರೇಶ್ವರಿಯು ದುಷ್ಟನಾದ ಪತಿಯನ್ನು ಭಕ್ತಿಯೊಡನೆ ಸೇವಿಸುತ್ತ, ಆತನನ್ನು ಸನ್ಮಾರ್ಗಕ್ಕೆ ತರಲು ಸರ್ವದಾ ಪ್ರಯತ್ನಿಸುತಲಿದ್ದಳು. ರಾಜನು ಪತ್ನಿಯ ಮಾತುಗಳನ್ನು ಲಾಲಿಸದೆ ದುರ್ಮಾರ್ಗದಲ್ಲಿಯೇ ನಡೆಯುತಲಿದ್ದನು. ಆತನು ದ್ರವ್ಯಾಶೆಯಿಂದ, ಸೈನ್ಯಸಹಿತನಾಗಿ ಗ್ರಾಮಗಳನ್ನೂ ಹಳ್ಳಿಗಳನ್ನೂ ಕೊಳ್ಳೆ ಹೊಡೆಯುತಲಿದ್ದನು. ಆತನ ವರ್ತನವನ್ನು ಅರಿತು ಅನೇಕ