೨೮೨ ಅಬಲಾ ಸಚ್ಚರಿತ್ರ ರತ್ನ ಮಾಲೆ. ಆದಿತ್ಯನು ಐವತ್ತು ಸಾವಿರ ಪದಾತಿಗಳೊಡನೆಯೂ, ಹತ್ತು ಸಾವಿರ ಆಶ್ಚಿಕ ರೊಡನೆಯೂ, ಎರಡು ನೂರು ಆನೆಗಳೊಡನೆಯೂ ಕೂಡಿದ ಸೇನೆಯೊಡನೆ ಮಾನಸಿಂಹನನ್ನು ತಾಕಿದನು. ಈತನಿಗೆ ಪೋರ್ಚಗೀಸರು ಸಹಾಯಕರಾದರು. ಈತನಲ್ಲಿ ನೂರು ತೋಪುಗಳು ಸಹ ಇದ್ದವು. ಕೊನೆಗೆ ಇಷ್ಟು ಸೇನೆಯು ಇದ್ದರೂ ಪ್ರತಾಪಾದಿತ್ಯನಿಗೆ ಅಪಜಯವೇ ಸಂಭವಿಸಿತು. ಇದಕ್ಕೆ ಕಾರಣವು ಏನೆಂದರೆ, ಯುದ್ದ ಸಮಯದಲ್ಲಿ ಗ್ರಾಮದೇವತೆಯ ಮುಖವು ಬೇರೊಂದು ಕಡೆಗೆ ತಿರಿಗಿತಂತೆ. ಈ ವಿಷಯವು ಸಂಗ್ರಾಮ ಭೂಮಿಯಲ್ಲಿದ್ದ ಸೈನಿಕರಲ್ಲಿ ಪ್ರಚಾರವಾಗಲು, ಅವರು ತಮ್ಮ ರಾಜನ ದುಷ್ಟ ವರ್ತನೆಯಿಂದ ದೇವತೆಯು ಗ್ರಾಮವನ್ನು ಬಿಟ್ಟು ಹೋದಳಾದಕಾರಣ ತಮಗೆ ಜಯವು ಉಂಟಾಗಲಾರದು ಎಂದು ನಿರುತ್ಸಾಹಿಗಳಾದರು. ಅವರ ಹುಚ್ಚು ನಂಬಿಕೆಯನ್ನು ಹೋಗಲಾಡಿಸಲು ರಾಜನು ಎಷ್ಟು ಪ್ರಯತ್ನಪಟ್ಟರೂ, ಅವರು ರಾಜನ ದುಷ್ಟ ವರ್ತನೆಯನ್ನು ಕಂಡವರಾದಕಾರಣ, ಯುದ್ದ ಭೂಮಿಯನ್ನು ಬಿಟ್ಟು ಓಡಿಹೋದರು. ಅಲ್ಪ ಕಾಲದಲ್ಲಿಯೇ ರಾಜನು ಮಾನಸಿಂಹನ ಬಂದಿಯಾದನು. ಮಾನಸಿಂಹನು ಶತ್ರುವು ತನ್ನ ವಶನಾದಮೇಲೆ ಜೆಸೋರನ್ನು ವಶ ಮಾಡಿಕೊಳ್ಳಲು ನಗರವನ್ನು ಸವಿಾಪಿಸಿದನು. ಆಗ ಪಟ್ಟಣವು ನಾಲ್ಕು ದಿಕ್ಕುಗಳಲ್ಲಿಯೂ ಸಂರಕ್ಷಕರಿಂದ ರಕ್ಷಿಸಲ್ಪಡುತಲಿದ್ದುದನ್ನು ಕಂಡು, ನಗರ ವನ್ನು ಯಾರು ರಕ್ಷಿಸುತಲಿರುವರು ಎಂದು ವಿಚಾರಿಸಲು, ರಾಣೀಜಸ ರೇಶ್ವರಿಯು ಸೈನ್ಯಾಧಿಪತ್ಯವನ್ನು ವಹಿಸಿ ನಗರ ರಕ್ಷಣೆಯನ್ನು ಮಾಡುತಲಿರುವಳು ಎಂದು ತಿಳಿಯಬಂತು, ಆಮೇಲೆ ಮಾನಸಿಂಹನು ನಗರವನ್ನು ಸ್ವಾಧೀನ ಪಡಿಸಬೇಕು ಎಂದು ಜಸರೇಶ್ವರಿಗೆ ವರ್ತಮಾನವನ್ನು ಕಳುಹಲು, ಸ್ವಪರ ಬಲ ತಾರತಮ್ಯವನ್ನು ಅರಿತ ರಾಣಿಯು ಚಾತುರ್ಯದೊಡನೆ, “ ನಾನು ಅಪೇಕ್ಷಿಸುವ ಕೆಲವು ವಿಷಯಗಳಿಗೆ ನೀವು ಸಮ್ಮತಿಸಿದರೆ, ನಗರವನ್ನು ನಿಮ್ಮ ಸ್ವಾಧೀನಮಾಡುವೆನು. ನಗರ ರಕ್ಷಣಾರ್ಥವಾಗಿ ರಕ್ತದಿಂದ ಭೂಮಿಯನ್ನು ತೋಯಿಸುವುದು ನಿಸ್ಸಯೋಜನವೆಂದು ನನಗೆ ತಿಳಿಯುವುದು, ನಮ್ಮ ಗ್ರಾಮಸ್ಥರನ್ನು ಕೊಳ್ಳೆ ಹೊಡೆಯುವುದೇ ಮೊದಲಾದ ಕಾರ್ಯಗಳಿಂದ ಬಾಧಿಸದೆ, ನಾನು ನನ್ನ ಪತಿಯು ಇರುವಸ್ಥಳದಲ್ಲಿಯೇ ಇರಲೊಪ್ಪಿಕೊಂಡರೆ, ನಿರಾಟಂಕವಾಗಿ ಪಟ್ಟಣವನ್ನು ನಿಮ್ಮ ಸ್ವಾಧೀನಪಡಿಸುವೆನು. ಇಲ್ಲದಿದ್ದರೆ ನನ್ನ ದೇಹದಲ್ಲಿ ಪ್ರಾಣವು ಇರುವವರೆಗೂ ಯುದ್ಧ ಮಾಡುವೆನು. " ಎಂದು ವರ್ತಮಾನ ಕಳುಹಿಸಿದಳು. ರಾಜಾಮಾನಸಿ೦ಹನು ಆಕೆಯ ಮಾತುಗಳಿಗೆ ಸ್ವಾಧೀನ ಮಾಡಿಕೊಂಡನು. ಅನಂತರ ಪ್ರತಾಪಾದಿತ್ಯನೊಡನೆ ಡಿಲ್ಲಿಗೆ
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೦೭
ಗೋಚರ