ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಬಲಾ ಸಚ್ಚರಿತ್ರ ರತ್ನ ಮಾಲೆ. «ನು ಕೇಳಿದ್ದನು. ಹೈದರನಂತಹ ಬಲವಂತನೊಡನೆ ಸ್ವತಂತ್ರವಾಗಿ ಹೋರಾಡಿ ಗೆಲ್ಲುವುದು ಕಷ್ಟವಾದುದರಿಂದ ಲಕ್ಷ್ಮಮ್ಮಣ್ಣಿಯನ್ನು ಸೇರಿಸಿಕೊಂಡು ಗುಪ್ತವಾಗಿ ಹೈದರನನ್ನು ನಾಶಮಾಡಬೇಕೆಂದು ಆತನು ಆಲೋಚಿಸಿದನು. ಲಾರ್ಡ್ ಮ್ಯಾಕರ್ಟನ್ನನು ಹೀಗೆ ನಿಶ್ಚಯಿಸಿಕೊಂಡು ತಂಜಾವುರು ಸಂಸ್ಥಾನಕ್ಕೆ ರೆಸಿಡೆಂಟ ನಾಗಿದ್ದ ಸಲಿವನ್ ದೊರೆಯನ್ನು ಆ ಕಾರ್ಯಕ್ಕೆ ನಿಯಮಿಸಿದನು. ಆತನು ರಾಣಿಯ ಪ್ರಧಾನಿಯಾದೆ ತಿರುಮಲರಾವಿನೊಡನೆ ಸನ್ ೧೭೮೨ ನೆಯ ಇಸವಿ ಅಕ್ಟೋಬರ್ ೨೮ ನೆಯ ತಾರೀಖಿನಲ್ಲಿ ಕೆಳಗೆ ಬರೆದಿರುವಂತೆ ಕರಾರನ್ನು ಮಾಡಿ ಕೊಂಡನು. ಇಂಗ್ಲೀಷರು, ಮೈಸೂರು ರಾಜ್ಯವನ್ನು ಗೆದ್ದು ಮಹಾರಾಣಿಯ ಕೈವಶಮಾಡಿದರೆ, ಲಕ್ಷ್ಮಮ್ಮಣ್ಣಿಯು ಕಂಪೆನಿಯವರಿಗೆ ೭೫ ಲಕ್ಷ ರೂಪಾಯಿ ಗಳನ್ನು ಪ್ರತಿವರ್ಷವೂ ಕಪ್ಪವಾಗಿ ಕೊಡುವಂತೆಯೂ, ೧೫ ಲಕ್ಷ ರೂಪಾಯಿಗಳು ಆದಾಯವುಳ್ಳ ದೇಶವನ್ನು ಬಹುಮಾನವಾಗಿ ಕೊಡುವಂತೆಯೂ, ಕರಾರು ನಡೆ ಯಿತು. ಕೂಡಲೆ ಇಂಗ್ಲೀಷಿನವರು ಯುದ್ದಕ್ಕೆ ಬೇಕಾದ ಸಾಮಗ್ರಿಗಳೆಲ್ಲವನ್ನೂ ಸಿದ್ದಪಡಿಸಿ ತಂಜಾವೂರು ರಾಜನನ್ನು ಕಾಪಾಡಿದಂತೆಯೇ ಮೈಸೂರು ರಾಣಿ ಯನ್ನು ರಕ್ಷಿಸಬೇಕೆಂದೆಣಿಸಿದರು. ಇಂಗ್ಲೀಷಿನವರ ಸೈನ್ಯವು ಮುತ್ತಿಗೆ ಹಾಕಲು ಕೋಟೆಯ ಸಮಿಾಪಕ್ಕೆ ಬಂದೊಡನೆ, ಶ್ರೀರಂಗಪಟ್ಟಣದಲ್ಲಿರುವ ರಾಣಿಯ ಕಡೆ ಯವರೆಲ್ಲರೂ ಹೈದರನ ಸೈನ್ಯದ ಮೇಲೆ ಬೀಳಬೇಕೆಂದೂ, ಇವರಿಗೆ ಗ್ರಾಮದಲ್ಲಿ ರುವ ಪೋಲೀಸಿನವರು ಸಹಾಯಕರಾಗಬೇಕೆಂದೂ, ಹೀಗೆ ಒಳಗಿನಿಂದಲೂ ಹೊರಗಿನಿಂದಲೂ ಹೈದರನ ಸೈನ್ಯವನ್ನು ಮುತ್ತಿಕೊಳ್ಳಬೇಕೆಂದೂ, ರಾಣಿಯು ಮೊದಲು ಏರ್ಪಾಟುಮಾಡಿದಳು. ಶಾಮಯ್ಯನೆಂಬ ಶೂರನಾದ ಸರದಾರನು ರಾಣಿಗೆ ಬಹಳ ಅನುಕೂಲನಾಗಿದ್ದನು. ಶ್ರೀರಂಗಪಟ್ಟಣದಲ್ಲಿ ನಡೆಯಬೇಕಾದ ಕಾರ್ಯಗಳಿಗೆಲ್ಲ ರಾಣಿಯು ಈ ಶಾಮಯ್ಯನನ್ನೇ ಅಧಿಪತಿಯನ್ನಾಗಿ ನಿಯಮಿಸಿ ದಳು, ಸನ್ ೧೭೮೨ ನೆಯ ಇಸವಿಯ ನವಂಬರಿನಲ್ಲಿ ರಾಣಿಯು ಇದರ ವಿಷಯ ವಾಗಿ ತಿರುಮಲರಾಯನಿಗೆ, “ ಶಾಮಯ್ಯನೇ ಆದಿಯಾಗಿ ಕೆಲವು ಸರದಾರರು ನಮಗೆ ಅನುಕೂಲರಾದರು. ಆದುದರಿಂದ ಇಂಗ್ಲೀಷು ಸೈನ್ಯವು ಬಂದೊಡನೆಯೇ ನಾವು ವಿಶೇಷ ಕಷ್ಟನಷ್ಟಗಳಿಗೊಳಗಾಗದೆ ಧನಾಗಾರವನ್ನೂ, ಕೋಟಿಯನ್ನೂ, ವಶಮಾಡಿಕೊಳ್ಳುವೆವು. ಆದಕಾರಣ ನೀವು ಗಜ್ಜಲಹಟೀ ಕಾವೇರಿಪುರದ ಮೇಲೆ ಇಂಗ್ಲೀಷು ಸೇನೆಯನ್ನು ಕಳುಹಿಸುವುದು,” ಎಂದು ಬರೆದಳು. ಹೀಗೆ ಬರೆದ ಈ ವಿಷಯವನ್ನೆಲ್ಲ ಸ್ವಾಮಿದ್ರೋಹಿಯಾದ ಒಬ್ಬ ಸೇವಕನು ಹೈದರನಿಗೆ ತಿಳಿಸಿ ದನು. ಹೈದರನು ಈ ವಿಷಯವನ್ನು ಕೇಳಿ ಅತ್ಯಾಗ್ರಹಯುಕ್ತನಾಗಿ ಸನ್ ೧೭೮೩ ನೆಯ ಇಸವಿ ಜೂಲೈ ೨೩ ನೆಯ ತಾರೀಖಿನಲ್ಲಿ ಮಹಾರಾಣಿಗೆ ಅನುಕೂಲರಾದವ ರನ್ನು ಅನೇಕ ವಿಧವಾಗಿ ಹಿಂಸಿಸಿ ಕಾರಾಗೃಹಬದ್ಧರನ್ನು ಮಾಡಿದನು. ಮುಖ್ಯ ರಾದ ಕೆಲವರನ್ನು ಯಮಪುರಿಗೆ ಕಳುಹಿದನು. ಇಷ್ಟರಲ್ಲಿ ಹೈದರನು ಕಾಲವಾಗಿ