ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಮಳೆ. - 11 - ಈ ಪತಿವ್ರತೆಯು ಘರ್ಜರಾಧಿಪತಿಯಾದ ಜಯಶಿಖರನ ಸಹೋದರಿ. ಈತನು ಕ್ರಿ.ಶ. ೬೯೫ ನೆಯ ಇಸವಿಯಲ್ಲಿ ಪಂಚಾಸರ ಎಂಬ ಪಟ್ಟಣವನ್ನು ರಾಜಧಾನಿಯಾಗಿ ಮಾಡಿಕೊಂಡು ಫೋರ್ಜರದೇಶವನ್ನು ಪಾಲಿಸುತಲಿದ್ದನು. ಆ ಕಾಲದಲ್ಲಿ ಘರ್ಜರದೇಶವು ಉನ್ನತಸ್ಥಿತಿಯಲ್ಲಿತ್ತು. ವಿಮಲೆಯು ಯುಕ್ತ ವಯಸ್ಕಳಾದಮೇಲೆ ಆಕೆಯ ಸೌಂದರ್ಯವನ್ನು ಕೇಳಿ ಅನೇಕ ದೇಶದ ರಾಜ ಕುಮಾರರು ಆಕೆಯನ್ನು ವರಿಸಲು ಅಪೇಕ್ಷಿಸುತಲಿದ್ದರು. ಗುಣವತಿಯಾದ ವಿಮಲೆಯು ಐಶ್ವರ್ಯ ಭೋಗಗಳನ್ನು ಇಚ್ಛೆಸದೆ ಶೌರ್ಯನಿಧಿಯಾದ ವರನನ್ನು ವರಿಸಲು ನಿಶ್ಚಯಿಸಿಕೊಂಡಳು. ಕೆಲವು ದಿವಸಗಳಿಗೆ ಮುಲ್ಲಾನುಪಟ್ಟಣದ ಅರಸನು ಸಕುಟಂಬವಾಗಿ ಪ್ರಭಾಸಕ್ಷೇತ್ರವನ್ನು ನೋಡುವುದಕ್ಕೆ ಹೋಗುತ್ತ ಮಾರ್ಗದಲ್ಲಿದ್ದ ಪಂಚಾಸರಕ್ಕೆ ಬಂದನು. ಅವರನ್ನು ಜಯಶಿಖರನು ಮರ್ಯಾದೆಯೊಡನೆ ತನ್ನ ಮನೆಗೆ ಕರೆದುಕೊಂಡು ಹೋಗಿ ಕೆಲವು ದಿವಸಗಳು ಭೋಜನಾದಿಗಳಿಂದ ಸತ್ಕರಿಸಿದನು. ಅವರು ಅಲ್ಲಿದಕಾಲದಲ್ಲಿ ಮುಲ್ಲಾನುರಾಜನ ಮಗನಾದ ಸುರಪಾಲನೊಡನೆ ಜಯಶಿಖರನು ಕ್ರೀಡಾಯುದ್ಧವನ್ನು ಮಾಡುತ್ತಿರಲು ಅಂತಃಪುರದ ಸ್ತ್ರೀಯರೆಲ್ಲರು ಅದನ್ನು ನೋಡುತಲಿದ್ದರು. ಆ ಸಮಯದಲ್ಲಿ ವಿಮಲೆಯು ಸುರಪಾಲನು ಶೌರ್ಯ ವಂತನು ಎಂದು ತಿಳಿದುಕೊಂಡಳು. ಅನಂತರ ಒಂದು ದಿವಸ ಆ ರಾಜಪುತ್ರ ರಿಬ್ಬರು ಸಿಂಹದ ಬೇಟೆಗೆ ಹೋಗುತ್ತೆ ಅಂತಃಪುರದ ಸ್ತ್ರೀಯರನ್ನು ಸಹ ಕರೆದು ಕೊಂಡು ಹೋಗಿ, ಆ ಯರಣ್ಯದಲ್ಲಿ ಒಂದು ಮಂಚಣಿಗೆಯನ್ನು ಹಾಕಿಸಿ ಅದರ ಮೇಲೆ ಅವರನ್ನು ಕುಳ್ಳಿರಿಸಿದರು. ಬೇಟೆಯಾಡುವ ಸಮಯದಲ್ಲಿ ಒಂದು ಸಿಂಹವು ಜಯಶಿಖರನ ಮೇಲೆ ಬೀಳಲು, ಸುರಪಾಲನು ಬಹು ಶೌರ್ಯದಿಂದ ಆ ಸಿಂಹವನ್ನು ಕೊಂದನು. ಆತನ ಶೌರ್ಯದೈರ್ಯಗಳಿಗೆ ಮೆಚ್ಚಿ ವಿಮಲೆಯು ಆತನನ್ನು ವರಿಸಿದಳು. ಆಮೇಲೆ ಸುರಪಾಲನ ತಂದೆಯು ಜಯಶಿಖರನಲ್ಲಿ ಬೀಳ್ಕೊಂಡು ಹೊರಟುಹೋದನು. ಸುರಪಾಲನಿಗೆ ರೂಪಸುಂದರಿ ಎಂಬ ಒಬ್ಬ ಸೋದರಿಯು ಇದ್ದಳು. ಜಯಶಿಖರನು ಆಕೆಯನ್ನು ವರಿಸಿದನು, ಅವರೆಲ್ಲರೂ ಹೊರಟುಹೋದ ಅನಂತರ ಜಯಶಿಖರನು ರೂಪಸುಂದರಿಗೆ ಒಂದು ಪತ್ರವನ್ನು ಬರೆದು ಕಳುಹಿಸಲು, ವಿಮಲೆಯು ಸುರಪಾಲನಿಗೆ ಒಂದು ಪತ್ರವನ್ನು ಲಿಖಿಸಿ ಆ ಸೇವಕನ ಕೈಯಲ್ಲಿ ಕೊಟ್ಟು ಕಳುಹಿದಳು. ಪತ್ರವಾಹಕನು ಪತ್ರಗಳನ್ನು