ಅಳಲೆ ಅಬಲಾ ಸಚ್ಚರಿತ್ರ ರತ್ನ ಮಾಲೆ. ಸುರಪಾಲನಿಗೆ ಕೊಟ್ಟನು. ಅನಂತರ ಕೆಲವು ದಿವಸಗಳಲ್ಲಿಯೇ ರೂಪಸುಂದರಿ ಯನ್ನು ಜಯಶಿಖರನಿಗೆ ಕೊಟ್ಟು ವಿವಾಹಮಾಡಲು ನಿಶ್ಚಯವಾಯಿತು. ಜಯಶಿಖರನು ಮುಲ್ತಾನಿಗೆ ಹೋಗಿ ವಿವಾಹವನ್ನು ಮಾಡಿಕೊಂಡು, ರೂಪ ಸುಂದರಿಯನ್ನೂ, ಸುರಪಾಲನನ್ನೂ ಕರೆದುಕೊಂಡು ತನ್ನ ದೇಶಕ್ಕೆ ಹೊರಟನು. ಮಾರ್ಗಮಧ್ಯದಲ್ಲಿ ಲಾಟದೇಶಾಧೀಶನು ತನಗೆ ಕೊಡಬೇಕಾದ ಕಪ್ಪವನ್ನು ಬಹು ವರ್ಷಗಳಿಂದಲೂ ಕೊಡಲಿಲ್ಲವೆಂದು ಆತನ ಮೇಲಕ್ಕೆ ಸೈನ್ಯವನ್ನು ಕಳುಹಿಸಿದನು. ಸೈನ್ಯಾಧಿಪತಿಯೊಡನೆ ಸುರಪಾಲನು ಸಹ ಹೊರಟನು. ಲಾಟದೇಶದಲ್ಲಿ ಉಭಯರಿಗೂ ಘೋರಯುದ್ಧವು ನಡೆದು ಜಯಶಿಖರನ ಸೇನಾಧಿಪತಿಯು ಮೃತನಾದನು. ಸುರಪಾಲನು ಅನಂತರ ತಾನೇ ಸೇನಾಧಿಪತ್ಯವನ್ನು ವಹಿಸಿ ಶೌರ್ಯದೊಡನೆ ಯುದ್ಧ ಮಾಡಿ, ಶತ್ರುಗಳನ್ನು ಹತಮಾಡಿ, ಆ ರಾಜನನ್ನು ಸೆರೆ ಹಿಡಿದುಕೊಂಡು ಬಂದು ಜಯಶಿಖರನಿಗೆ ಒಪ್ಪಿಸಿದನು. ಆತನು ಮಾಡಿದ ಸಾಹಸಕಾರ್ಯಕ್ಕೆ ಮೆಚ್ಚಿ ಜಯಶಿಖರನು ಆತನಿಗೆ ತನ್ನ ತಂಗಿಯನ್ನು ಕೊಟ್ಟು ವಿವಾಹವನ್ನು ಬೆಳಸಿದನು. ಅನಂತರ ಕೆಲವು ದಿವಸಗಳಿಗೆ ಕಲ್ಯಾಣಾಧಿಪತಿಯು (ಈತನು ಕಲ್ಯಾಣ ಪುರವನ್ನು ಸ್ಥಾಪಿಸಿದ ಚಾಳುಕ್ಯ ವಂಶದವನಾಗಿರಬಹುದು) ಘರ್ಜರದೇಶದ ಕೀರ್ತಿಯನ್ನು ಕೇಳಿ ದಂಡೆತ್ತಿ ಬಂದನು. ಆದರೆ ಆತನ ಸೇನೆಗಳು ಸುರಪಾಲನ ಶೌರ್ಯಕ್ಕೆ ನಿಲ್ಲಲಾರದೆ ಧೈರ್ಯಗೆಟ್ಟು ಓಡಿಹೋಗಲು ಆತನು ಮರಳಿ ತನ್ನ ದೇಶಕ್ಕೆ ಹೊರಟುಹೋದನು. ಅನಂತರ ಕಲ್ಯಾಣಾಧಿಪತಿಯು ತನ್ನ ಅಪಜಯಕ್ಕೆ ಸುರಪಾಲನೇ ಕಾರಣ ನಾದುದರಿಂದ ಆತನನ್ನು ಜಯಶಿಖರನ ಬಳಿಯಿಂದ ದೂರಮಾಡಬೇಕು ಎಂದು ಎಣಿಸಿ, “ ನೀನು ಜಯಶಿಖರನನ್ನು ಬಿಡುವುದಾದರೆ ರಾಜ್ಯವನ್ನೂ, ಬೇಕಾದಷ್ಟು ದ್ರವ್ಯವನ್ನೂ ಕೊಡುವೆನು. ” ಎಂದು ಆಶೆಯನ್ನು ತೋರಿಸುತ್ತ ಒಂದು ಕಾಗದ ವನ್ನು ಬರೆದನು. ಈ ಲೇಖನವು ಸುರಪಾಲನು ಅಂತಃಪುರದಲ್ಲಿರುವ ಸಮಯ ದಲ್ಲಿ ಒಬ್ಬ ನೃತ್ಯನು ತಂದುಕೊಟ್ಟನು. ಆತನು ಪತ್ರವನ್ನೋದಿ, ತನ್ನ ಮನೋಭಿಪ್ರಾಯವನ್ನು ಹೊರಪಡಿಸದೆ ಪತ್ನಿಯ ಗುಣವನ್ನು ಪರೀಕ್ಷಿಸುವುದ ಕ್ಯಾಗಿ ಪತ್ರದಲ್ಲಿರುವ ವಿಷಯವನ್ನು ತಿಳಿಸಿ, “ ನಿನಗೆ ರಾಣಿಯಾಗಿ ಭೋಗ ಗಳನ್ನು ಅನುಭವಿಸಬೇಕು ಎಂಬ ಅಪೇಕ್ಷೆ ಇದ್ದರೆ ಹೇಳು, ಆ ಲೇಖನದಲ್ಲಿರು ವಂತೆ ನಡೆದುಕೊಳ್ಳೋಣ.” ಎಂದನು. ಆ ಮಾತನ್ನು ಕೇಳಿ ವಿಮಲೆಯು, “ ನೀನು ಸತ್ಯವ್ರತನೆಂತಲೂ, ಕೃತಜ್ಞನೆಂತಲೂ ತಿಳಿದು ನಿನ್ನನ್ನು ವಿವಾಹ ಮಾಡಿಕೊಂಡೆನು. ನೀನು ಕೃತಘ್ನನು ಎಂದು ನಾನು ಅರಿತಿರಲಿಲ್ಲ. ನಾನು ಇಷ್ಟು ವರೆಗೂ ದುಸ್ಸಾಂಗತ್ಯವನ್ನು ಮಾಡಿದವಳಲ್ಲ. ಇನ್ನು ಮುಂದೆಯೂ
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೧೩
ಗೋಚರ